Asianet Suvarna News Asianet Suvarna News

Bengaluru: ಕೆಂಪೇಗೌಡ ಬಡಾವಣೆಯಲ್ಲಿ 2.5 ಸಾವಿರ ಕೋಟಿ ವೆಚ್ಚವಾದರೂ ಸೌಕರ್ಯವಿಲ್ಲ..!

*  ಬಡಾವಣೆಯಲ್ಲಿ ಅರ್ಧಕರ್ಧ ಕಾಮಗಾರಿ ಬಾಕಿ
*  ವಿದ್ಯುತ್‌, ನೀರು, ರಸ್ತೆ, ಚರಂಡಿ ಸೌಲಭ್ಯವಿಲ್ಲ
*  ಮನೆ ಕಟ್ಟಲಾಗದೆ ನಿವೇಶನದಾರರ ಪರದಾಟ
 

No Basic Infrastructure at Kempegowda Layout in Bengaluru grg
Author
Bengaluru, First Published Dec 11, 2021, 10:15 AM IST

ಬೆಂಗಳೂರು(ಡಿ.11):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(Bengaluru Development Authority) ಇನ್ನೂ ಅಭಿವೃದ್ಧಿಯೇ ಕಾಣದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಒದಗಿಸಲು ಈವರೆಗೆ 2,539.67 ಕೋಟಿ ವೆಚ್ಚ ಮಾಡಿದ್ದರೂ ಯಾವುದೇ ಕಾಮಗಾರಿ ಪೂರ್ಣಗೊಳಿಸದೇ ಇರುವುದಕ್ಕೆ ನಿವೇಶನದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಂಪೇಗೌಡ ಬಡಾವಣೆಯಲ್ಲಿ(Kempegowda Layout) 2,635.37 ಎಕರೆ ಜಾಗದಲ್ಲಿ ನಿವೇಶನಗಳನ್ನು(Sites) ನಿರ್ಮಿಸಲಾಗುತ್ತಿದೆ. 2015-16ರಿಂದ ಈವರೆಗೆ ನಿವೇಶನಗಳ ಹಂಚಿಕೆಯಿಂದ 2,053.16 ಕೋಟಿ ಸಂಗ್ರಹಿಸಲಾಗಿದೆ. ಆದರೆ, ಸ್ವಾಧೀನ ಪಡಿಸಿಕೊಂಡ ಭೂಮಿಗೆ(Land) 685.17 ಕೋಟಿ ಪರಿಹಾರ ಮತ್ತು ಮೂಲಸೌಕರ್ಯ(Infrastructure) ಒದಗಿಸಲು 1,854.50 ಕೋಟಿ ಸೇರಿದಂತೆ .2,539.67 ಕೋಟಿ ಖರ್ಚು ಮಾಡಲಾಗಿದೆ ಎಂದು ಬಿಡಿಎ(BDA) ಅಧಿಕೃತವಾಗಿ ಮಾಹಿತಿ ನೀಡಿದೆ.

Corruption| ಬಗೆದಷ್ಟೂ ಹೊರಬರ್ತಿದೆ ಬಿಡಿಎ ಹಗರಣ

ಆದರೆ, ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಿಸಲು ಅಗತ್ಯವಾದ ಕನಿಷ್ಠ ಸೌಕರ್ಯಗಳೂ ಇಲ್ಲ. ವಿದ್ಯುತ್‌(Electricity), ನೀರು(Water), ರಸ್ತೆ(Road), ಚರಂಡಿ, ಮಳೆ ನೀರು ಕಾಲುವೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸೇರಿದಂತೆ ಯಾವುದೇ ಸೌಲಭ್ಯವನ್ನು ಬಿಡಿಎ ಪೂರ್ಣಗೊಳಿಸಿ ಕೊಟ್ಟಿಲ್ಲ. ಕೆಂಪೇಗೌಡ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಈ ಬಡಾವಣೆಗೆ ಮೂಲಸೌಕರ್ಯ ಒದಗಿಸಲು ಸರಿಸುಮಾರು 5 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗಾಗಲೇ 2,539 ಕೋಟಿ ವ್ಯಯಿಸಲಾಗಿದೆ. ಒಂದೇ ಒಂದು ಮನೆ(Home) ನಿರ್ಮಿಸಲು ಸಾಧ್ಯವಾಗದ ಪರಿಸ್ಥಿತಿ ಈ ಬಡಾವಣೆಯಲ್ಲಿದೆ.

ಬಡಾವಣೆಯಲ್ಲಿ ವಿವಿಧ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿರುವ ಬಿಡಿಎ ವಿಶೇಷ ಕೋಟಾದಡಿ 20/30 ನಿವೇಶನದ ದರ 5.23 ಲಕ್ಷ, ಸಾಮಾನ್ಯ ವರ್ಗದ ಕೋಟಾದಡಿ 10.46 ಲಕ್ಷ, 30/40 ಅಳತೆಯ ನಿವೇಶನದ ದರ .23.25 ಲಕ್ಷ, 40/60 ಅಳ​ತೆಯ ನಿವೇಶನದ ದರ 52.31 ಲಕ್ಷ ಹಾಗೂ 50/80 ಸುತ್ತಳತೆಯ ನಿವೇಶನದ ದರ .95.87 ಲಕ್ಷ ನಿಗದಿಪಡಿಸಿತ್ತು. ಬಡಾವಣೆಯಲ್ಲಿ ಮಾರಾಟವಾದ 10 ಸಾವಿರ ನಿವೇಶನಗಳಲ್ಲಿ ಸುಮಾರು ಒಂದು ಸಾವಿರ ನಿವೇಶನಗಳನ್ನು ವಿವಿಧ ಕಾರಣಗಳಿಂದ ಹಿಂದಿರುಗಿಸಿದ್ದಾರೆ. ಮಾರಾಟವಾದ 9 ಸಾವಿರ ನಿವೇಶನಗಳಿಂದ 2,053.16 ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಿದೆ.

Bengaluru| ಬಿಡಿಎಯಲ್ಲಿ 100 ಕೋಟಿ ಅಕ್ರಮ ಪತ್ತೆ..!

ಅಕ್ಟೋಬರ್‌ ಅಂತ್ಯದವರೆಗೆ ಬಡಾವಣೆಯಲ್ಲಿ 2635.37 ಎಕರೆಯಲ್ಲಿ 293.42 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಹೊಂದಿದ್ದು, ಈವರೆಗೆ 248.62 ಕಿ.ಮೀ.ವರೆಗೆ ಮಾತ್ರ ರಸ್ತೆ ನಿರ್ಮಿಸಲಾಗಿದೆ. ಇನ್ನೂ 43.80 ಕಿ.ಮೀ. ರಸ್ತೆ ನಿರ್ಮಾಣವಾಗಬೇಕಿದೆ. ಅದೇ ರೀತಿ 590.23 ಕಿ.ಮೀ. ವಿವಿಧ ಅಳತೆಯ ಚರಂಡಿಗಳು ನಿರ್ಮಾಣದ ಗುರಿ ಹೊಂದಲಾಗಿದ್ದು, 497.18 ಕಿ.ಮೀ. ಚರಂಡಿ ಮಾಡಲಾಗಿದೆ. ಹಾಗೆಯೇ 93 ಕಿ.ಮೀ.ನಷ್ಟು ಚರಂಡಿಗಳ ನಿರ್ಮಾಣ ಬಾಕಿ ಇದೆ. 65 ಚಿಕ್ಕ ಸೇತುವೆಗಳ ಪೈಕಿ 36 ಸೇತುವೆಗಳು ನಿರ್ಮಾಣವಾಗಬೇಕಿದೆ. ಮಳೆ ನೀರುಗಾಲುವೆ 26.909 ಕಿ.ಮೀ.ನಲ್ಲಿ 4.415 ಕಿ.ಮೀ ಬಾಕಿ ಉಳಿದೆ. ಕುಡಿಯುವ ನೀರಿನ ಪೈಪ್‌ಲೈನ್‌ ಶೇ.80, ಮ್ಯಾನ್‌ಹೋಲ್‌ ಶೇ.70, ಎಂ.ಎಸ್‌.ಪೈಪ್‌ಲೈನ್‌ ಶೇ.50, ಸಂಸ್ಕರಿತ ನೀರು ಸರಬರಾಜಿನ ಪೈಪ್‌ಲೈನ್‌ ಶೇ.35ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಉಳಿದಿದೆ.

ನಿಗದಿತ ಗುರಿ ತಲುಪದ ಬಿಡಿಎ

ಕೆಂಪೇಗೌಡ ಬಡಾವಣೆಯಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಮೂಲಸೌಕರ್ಯ ಒದಗಿಸುವುದು ಬಿಡಿಎ ಜವಾಬ್ದಾರಿಯಾಗಿದೆ. ಆದರೆ ಈವರೆಗೆ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಇದಕ್ಕೆ ಹಣಕಾಸಿನ ಕೊರತೆ, ವಿಸ್ತರಿತ ಪ್ರದೇಶದ ಕಾಮಗಾರಿಗೆ ಅನುಮತಿ, ಭೂಸ್ವಾಧೀನ(Land Acquisition), ಕೋವಿಡ್‌(Covid19), ಕೆಲಸಗಾರರ ಕೊರತೆ, ಅಗತ್ಯ ನಿರ್ಮಾಣ ವಸ್ತುಗಳ ಕೊರತೆ ಹೀಗೆ ಹಲವು ಕಾರಣಗಳಿವೆ. ಆದರೂ, ಸಾಕಷ್ಟು ಹಣ ಖರ್ಚು ಮಾಡಿದ್ದರೂ ಕೂಡ ಯಾವೊಂದು ಕಾಮಗಾರಿಯನ್ನೂ ಪೂರ್ಣಗೊಳಿಸದಿರುವುದು ನಿವೇಶನದಾರರ ಅಸಮಾಧಾನಕ್ಕೆ ಕಾರಣವಾಗಿದೆ.
 

Follow Us:
Download App:
  • android
  • ios