ಬೆಂಗಳೂರು(ಜು. 19)  ಖಾಸಗಿ ಆಸ್ಪತ್ರೆಗಳ ಕೆಟ್ಟ ವರ್ತನೆಗೆ ಲಂಗು ಲಗಾಮು ಯಾವೂದು ಇಲ್ಲ. ಮಾನವೀಯತೆ ಇಲ್ಲಿ ಸತ್ತು ಕುಳಿತಿದೆ. ಇದೆಲ್ಲದರ ಪರಿಣಾಮ ಜನರು ಸಹಾಯ ಅಂಗಲಾಚಿಕೊಂಡು ರಾಜಭವನಕ್ಕೂ ಬರುವ ಸ್ಥಿತಿ ನಿರ್ಮಾಣ ಆಗಿದೆ. 

ಚಿಕಿತ್ಸೆ ಸಿಗುತ್ತಿಲ್ಲ ಎನು ಮಾಡುವುದು ಎಂದು ಜನರು ಸಿಎಂ ಯಡಿಯೂರಪ್ಪ ಮನೆಗೆ ಬಂದಿದ್ದರು. ಈಗ ರಾಜಭವನಕ್ಕೂ ಬರುತ್ತಿದ್ದಾರೆ.   ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಿ ಅಂತಾ ರಾಜಭವನದ ಮುಂದೆ ಕುಟುಂಬವೊಂದು ಬಂದು ನೋವು ಹೊರಹಾಕಿದ್ದಕ್ಕೂ ಸಾಕ್ಷಿಯಾಗಬೇಕಾಗಿದೆ.

ಬದುಕಲಿಲ್ಲ ಕಂದ, ಸಿಎಂ ಮನೆ ಮುಂದೆ ಅಪ್ಪನ ಕಣ್ಣೀರು

ರಾಜಭವನದ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.  ಬೆಳಗ್ಗೆಯಿಂದ ಮೂರ್ನಾಲ್ಕು ಆಸ್ಪತ್ರೆಗೆ ಅಲೆದಾಡಿದ್ದರೂ ಯಾರು ದಾಖಲು ಮಾಡಿಕೊಂಡಿಲ್ಲ. 80 ವರ್ಷದ ವೃದ್ದನನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳದೆ ಆಸ್ಪತ್ರೆಗಳು ಹಳೆ ಚಾಳಿಯನ್ನೇ ಮುಂದುವರಿಸಿವೆ.

ಪ್ರೈವೇಟ್ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಹೊಂದಿಸಿಕೊಂಡು ಕುಟುಂಬ ಅಲೆದಾಡುತ್ತಿತ್ತು.  ಸೆಂಟ್ ಜಾನ್, ಸಂಜಯಗಾಂಧಿ ಆಸ್ಪತ್ರೆ ಅಂತಾ ಎಲ್ಲ ಕಡೆ ಅಲೆದಾಡಿದ್ದರೂ ಕೋವಿಡ್ ರಿಪೋರ್ಟ್ ತನ್ನಿ ಎಂದು ವರಾತ ಮಾಡಿದ್ದಾರೆ.