ಬೆಂಗಳೂರು (ನ.26):   ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ನಿವಾರ್ ಆರ್ಭಟ ಆರಂಭವಾಗಲಿದೆ.  ಬಂಗಾಳ ಕೊಲ್ಲಿಯಿಂದ ತಮಿಳುನಾಡಿನ ಕರಾವಳಿಗೆ ಬಂದು ಅಪ್ಪಳಿಸಿರೋ ನಿವಾರ್ ಚಂಡಮಾರುತದಿಂದ  ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. 

ನಿವಾರ್ ಚಂಡಮಾರುತ ಹಿನ್ನಲೆ ಈಗಾಗಲೇ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. 

ನಿವಾರ್ ಆತಂಕ, ತಮಿಳುನಾಡಲ್ಲಿ ಮಳೆ, ಧರೆಗುರುಳಿದ ಮರಗಳು! .

ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ,ಚಾಮರಾಜನಗರ, ಮಂಡ್ಯ,ತುಮಕೂರು ರಾಮನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್  ನೀಡಲಾಗಿದೆ. 

ಇಂದು ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಮಳೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದ್ದು, ಇಂದು ನಾಳೆ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರಕ್ಕೂ ಎಲ್ಲೋ ಅಲರ್ಟ್ ಹಿನ್ನಲೆ ನಗರದಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಬೆಳಗಿನಿಂದ ಮೋಡಕವಿದ ವಾತಾವರಣ, ತಂಡಿಗಾಳಿ ಇದೆ.