ನಿವಾರ್ ಆತಂಕ, ತಮಿಳುನಾಡಲ್ಲಿ ಮಳೆ, ಧರೆಗುರುಳಿದ ಮರಗಳು!

First Published Nov 25, 2020, 2:39 PM IST

'ನಿವಾರ್' ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿಯ ಕರಾವಳಿ ಭಾಗಗಳತ್ತ ವೇಗವಾಗಿ ಚಲಿಸುತ್ತಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಮಾಡುವ ಆತಂಕ ಮೂಡಿಸಿದೆ. ಗಂಟೆಗೆ 100-110 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ. ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅನೇಕ ಮರಗಳು ಧರೆಗುರುಳಿವೆ. ಅತ್ತ ಸಮುದ್ರದ ಬದಿಯ ಮೀನುಗಾರರನ್ನೂ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ಬುಧವಾರ ಬೆಳಿಗ್ಗೆ ಚೆನ್ನೈನಲ್ಲಿ ಭಾರಿ ಮಳೆಯಾಗಿದೆ. ಸೈಕ್ಲೋನ್ ಇನ್ನೂ ನಗರ ಭಾಗಕ್ಕೆ ಅಪ್ಪಳಿಸುವ ಮುನ್ನವೇ ಮಳೆಯ ಆರ್ಭಟ ಜೋರಾಗಿದೆ.

ಬುಧವಾರ ಮಧ್ಯಾಹ್ನದ ಬಳಿಕ ಚಂಡಮಾರುತವು ತಮಿಳು ಮತ್ತು ಪುದುಚೆರಿಯ ಕರಾವಳಿಯನ್ನು ಹಾದುಹೋಗಲಿದೆ.

ಗಂಟೆಗೆ 145ಕಿಮೀ ವೇಗದವರೆಗೆ ಮಾಮಲ್ಲಪುರಂ ಮತ್ತು ಕಾರೈಕಲ್ ನಡುವೆ ಚಂಡಮಾರುತವು ಭಾರಿ ಪ್ರಮಾಣದಲ್ಲಿ ಅಪ್ಪಳಿಸಲಿದೆ.

ಈಗಾಗಲೇ ಗಾಳಿ ಮಳೆಗೆ ಅನೇಕ ಮರಗಳು ಧರೆಗುರುಳಿದ್ದು, ತೆರವು ಕಾರ್ಯವೂ ಆರಂಭವಾಗಿದೆ.

ಮಂಗಳವಾರ ಬೆಳಿಗ್ಗೆ 8.30ರಿಂದ ಬುಧವಾರ ಬೆಳಿಗ್ಗೆ 5.30ರ ಅವಧಿಯಲ್ಲಿಯೇ ಚೆನ್ನೈನ ಮತ್ತು ಮೀನಬಕ್ಕಂನಲ್ಲಿ 120 ಮಿಮೀ ಮಳೆ ಸುರಿದಿದೆ.

ನುಂಗಂಬಕ್ಕಮ್‌ನಲ್ಲಿ 145 ಮಿಮೀ ಮಳೆ ಸುರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆಂಬಾರಂಬಕ್ಕಮ್ ಜಲಾಶಯದಿಂದ ಸುಮಾರು 1,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ಈಗಾಗಲೇ ತಮಿಳುನಾಡು ಮತ್ತು ಪುದುಚೆರಿಯ ಅನೇಕ ಕಡೆ ಭಾರಿ ಮಳೆಯಾಗುತ್ತಿದೆ. ಇದು ಇನ್ನೆರಡು ದಿನಗಳ ಕಾಲ ಮತ್ತಷ್ಟು ಆರ್ಭಟಿಸಲಿದೆ. ಮಳೆಯಿಂದ ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಅನೇಕ ಮರಗಳು ಧರೆಗುರುಳುವ, ಭೂಕುಸಿತ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ. ಮಳೆ ಗಾಳಿಯ ತೀವ್ರತೆಗೆ ಕಟ್ಟಡ ಕುಸಿತ, ವಿದ್ಯುತ್ ಸಂಪರ್ಕ ಕಡಿತ, ದೂರವಾಣಿ ಸಂಪರ್ಕಗಳ ಕಡಿತಗಳು ಉಂಟಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮಿಳುನಾಡು ಮತ್ತು ಪುದುಚೆರಿಗಳಲ್ಲಿ ಈಗಾಗಲೇ ಪರಿಸ್ಥಿತಿಯನ್ನು ಎದುರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮಿಳುನಾಡಿನಲ್ಲಿ ಬುಧವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಪುಡುಕೊಟ್ಟೈ, ನಾಗಪಟ್ಟಿಣಂ, ಕುಡ್ಡಲೋರ್, ವಿಳ್ಳುಪುರಂ, ತಂಜಾವೂರ್, ಚೆಂಗಲ್ಪೇಟ್ ಮತ್ತು ತಿರುವಳ್ಳೂರ್‌ಗಳಲ್ಲಿ ಬಸ್ ಸೇವೆಗಳನ್ನು ಮಂಗಳವಾರದಿಂದಲೇ ಸ್ಥಗಿತಗೊಳಿಸಲಾಗಿದೆ. ದಕ್ಷಿಣ ರೈಲ್ವೆ ಕೂಡ ನವೆಂಬರ್ 24-26ರವರೆಗೆ ಅನೇಕ ರೈಲುಗಳ ಸಂಚಾರವನ್ನು ನಿಲ್ಲಿಸಿದೆ.

ಪುದುಚೆರಿಯಲ್ಲಿ ಮಂಗಳವಾರ ಸಂಜೆಯಿಂದ ಗುರುವಾರದವರೆಗೆ ಸಾರ್ವಜನಿಕರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಔಷಧ, ಪೆಟ್ರೋಲ್-ಡೀಸೆಲ್ ಮತ್ತು ದಿನಸಿ ಸಾಮಗ್ರಿಗಳಂತಹ ಅಗತ್ಯ ವಸ್ತುಗಳ ಸೇವೆ ಹೊರತಾಗಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?