ಬೆಂಗಳೂರು (ನ.26):  ನಿವಾರ್ ಚಂಡಮಾರುತಕ್ಕೆ ಕರ್ನಾಟಕ ಜನತೆ ಭಯಪಡುವ ಅಗತ್ಯ ಇಲ್ಲ. ಕರ್ನಾಟಕದಲ್ಲಿ ಅತೀ ವೇಗದ ಗಾಳಿ ಬೀಸುವುದಿಲ್ಲ.  ಕರ್ನಾಟಕಕ್ಕೆ ಯಾವುದೇ ಹಾನಿಯನ್ನುಂಟು ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಕರ್ನಾಟಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.  ಬೆಂಗಳೂರಿನಲ್ಲಿ ಕೂಡ ತುಂತುರು ಸಹಿತ ಮಳೆ ಹಾಗೂ ಮೋಡ ಕವಿದ ವಾತಾವರಣವಿರಲಿದೆ.  ತುಂತುರು ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 28 ರತನಕ ಇದೇ ವಾತಾವರಣ ವಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ನಿವಾರ್ ಚಂಡಮಾರುತ ತಮಿಳುನಾಡು ಹಾಗೂ ಆಂಧ್ರ ಭಾಗಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡತ್ತದೆ.  ಈಗಾಗಲೇ ತಮಿಳುನಾಡಿಗೆ ಗಾಳಿ ಅಪ್ಪಳಿಸಿದ್ದು,  ಆಂಧ್ರದ ಕಡೆ ಗಾಳಿಯು ಮುಖ ಮಾಡಿದೆ.   ಗಾಳಿಯ ವೇಗ ದುರ್ಬಲಗೊಳ್ಳತ್ತಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಇಲಾಖೆಯ ಕಿರಿಯ ವಿಜ್ಞಾನಿ ಗವಾಸ್ಕರ್ ಹೇಳಿದ್ದಾರೆ. 

ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ ನಿವಾರ್‌ ಚಂಡಮಾರುತ: ಭಾರೀ ಮಳೆ ..
 
ಇನ್ನು ಚೆನೈನಲ್ಲಿ ನಿವಾರ್ ಚೆಂಡಮಾರುತ ಹಿನ್ನೆಲೆ ಬೆಂಗಳೂರಿನಲ್ಲಿ ಕೂಲ್ ವೆದರ್ ಜೊತೆಗೆ ಜಿಟಿ ಜಿಟಿ ಮಳೆ ಇದೆ. ನಗರದಲ್ಲಿ ತುಂತುರು ಮಳೆ ಹಿನ್ನೆಲೆ ವಾಹನ ಸವಾರರು ಪರದಾಡುತ್ತಿದ್ದಾರೆ.  ಕೆ ಆರ್ ಸರ್ಕಲ್ ನಲ್ಲಿ ಟ್ರಾಫಿಕ್ ಇಲ್ಲದಿದ್ದರೂ ಸಮಸ್ಯೆಯಾಗುತ್ತಿದೆ.  ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.   ತುಂತುರು ಮಳೆಯಲ್ಲೆ ವಾಹನ ಸವಾರರು ನೆನೆಯುತ್ತಿದ್ದಾರೆ.