ಕೊರೋನಾ : ನಿವಾರಣೆಗೆ ನಿತ್ಯಾನಂದನಿಂದ ವಿಶೇಷ ವೃತ

ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ವಿಶೇಷ ವೃತ ಒಂದನ್ನು ನಡೆಸುತ್ತಿದ್ದಾನೆ. 

Nithyananda Swamiji Special Pooja For Control Coronavirus

ರಾಮನಗರ [ಮಾ.17]: ವಿಶ್ವವನ್ನು ಕಾಡುತ್ತಿರುವ ಕೊರೋನಾ ವೈರಸ್‌ ಸೋಂಕು ಮುಕ್ತಿಗೆ ತಾನೇ ಘೋಷಿಸಿಕೊಂಡಿರುವ ಕೈಲಾಸ ರಾಷ್ಟ್ರದಲ್ಲಿ 28 ದಿನಗಳ ಉಪವಾಸ ವ್ರತ ಮತ್ತು ವಿಶೇಷ ಪ್ರಾರ್ಥನೆಯನ್ನು ಆರಂಭಿಸಿರುವುದಾಗಿ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದ್ದಾರೆ.

ಸೋಮವಾರ ಇ-ಮೇಲ್‌ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿತ್ಯಾನಂದ ಸ್ವಾಮೀಜಿ ಮಾ.13ರಿಂದ ಉಪವಾಸ ವ್ರತ, ಧ್ಯಾನ ಮತ್ತು ಸ್ವಾಸ್ಥ್ಯ ಜೀವನಕ್ಕಾಗಿ ಮಹಾವಾಕ್ಯದ ಪಠಣ ಮತ್ತು ಪಚ್ಬೆೃ ಪತ್ತಿನಿ ವ್ರತಂ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಸತ್ಸಂಗದ ಕಾರ್ಯಕ್ರಮದ ಮೂಲಕ ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿರುವ ನಿತ್ಯಾನಂದ ಸ್ವಾಮೀಜಿ ಕೊರೋನಾ ವೈರಸ್‌ ಬಗ್ಗೆ ಆತಂಕ ಪಡಬಾರದು ಎಂದು ಸಲಹೆ ನೀಡಿದ್ದಾರೆ.

ಕಲಬುರಗಿ : ಸೋಂಕಿತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯಗೂ ಕೊರೋನಾ ಸೋಂಕು.

ತಮ್ಮ ಶಿಷ್ಯರೆಲ್ಲರೂ ಪಚ್ಬೆೃ ಪತ್ತಿನಿ ವ್ರತ ಆಚರಿಸುವಂತೆ ಸಲಹೆ ನೀಡಿದ್ದಾರೆ. ವ್ರತದ ಬಗ್ಗೆ ಮಾಹಿತಿ ನೀಡಿರುವ ಅವರು ಸಮಯಾಪುರದ ಮಾರಿಯಮ್ಮ ದೇವರನ್ನು ಉಲ್ಲೇಖಿಸಿದ್ದಾರೆ. ದೇವಿಗೆ ನೈವೈದ್ಯ ನೀಡುವ ಎಳೆನೀರು, ಬೆಲ್ಲದ ನೀರು, ಹೆಸರು ಬೇಳೆ ನೆನೆಸಿದ ನೀರು, ಮಜ್ಜಿಗೆ, ಕಬ್ಬಿನ ಹಾಲನ್ನು ಮಾತ್ರ ಉಪವಾಸದ ವೇಳೆ ಸೇವಿಸಬಹುದು ಎಂದು ತಮ್ಮ ಶಿಷ್ಯರಿಗೆ ಅಪ್ಪಣೆ ಕೊಟ್ಟಿದ್ದಾರೆ.

ಧ್ಯಾನದ ವೇಳೆ ಓಂ ನಿತ್ಯಾನಂದ ಪರಮಶಿವೋಹಮ್‌ ಎಂಬ ಮಹಾವಾಕ್ಯವನ್ನು ಪಠಿಸುವಂತೆಯೂ ಸೂಚನೆ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪದ್ಧತಿಯನ್ನು ಅನುಸರಿಸುವ ಮೂಲಕ ಕೋವಿಡ್‌ 19 ವೈರಸ್‌ನಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದ್ದಾರೆ. ಋುಷಿ ಮುನಿಗಳು ಸೂಚಿಸಿರುವ ಈ ಪರಿಹಾರೋಪಾಯಗಳಲ್ಲೆವು ವೈಜ್ಞಾನಿಕ ತಳಹದಿಯ ಮೇಲೆ ಇದೆ. ಪಚ್ಬೆೃ ಪತ್ತಿನ ವ್ರತದ ಆಚರಣೆ ಮತ್ತು ಮಹಾವಾಕ್ಯ ಪಠಣದಿಂದ ಮಾರಿಯಮ್ಮ ದೇವರು ಸಂತುಷ್ಟಳಾಗುವಳು ಎಂದು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯ ಕೊನೆಯಲ್ಲಿ ಅವರು ವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ತಮ್ಮ ಸಲಹೆ ಮತ್ತು ಪರಿಹಾರೋಪಾಯಗಳು ಬದಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವೈದ್ಯರ ಸಲಹೆ ಪಡೆಯುವಂತೆಯೂ ಅವರು ಸಲಹೆ ನೀಡಿದ್ದಾರೆ.

Latest Videos
Follow Us:
Download App:
  • android
  • ios