ಸಿದ್ದು ಕೊಂಡಾಡಿ ಗೌಡರ ಕುಟುಂಬದ ಮೇಲೆ ವಾಗ್ದಾಳಿ ಮಾಡಿದ ಸ್ವಾಮೀಜಿ

ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ಮಾಡಿರುವ ನಿರಂಜನಾನಂದಪುರಿ ಸ್ವಾಮೀಜಿ  ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ನೆರೆ ಸಂತ್ರಸ್ತರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

Niranjanandapuri Swamiji Warns BS Yediyurappa Over Karnataka Floods

ಬಾಗಲಕೋಟೆ [ಆ.28]: ರಾಜ್ಯದಲ್ಲಿ ದೇವೇಗೌಡರ ಕುಟುಂಬ ಮತ್ತೊಂದು ಬಾರಿ ಹುಟ್ಟಿ ಬಂದರೂ ಕೂಡ ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಸಾಧ್ಯವಿಲ್ಲ ಎಂದು ಕಾಗಿಲೆನೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. 

ಬಾಗಲಕೋಟೆಯಲ್ಲಿ ಮಾತನಾಡಿದ  ನಿರಂಜನಾನಂದಪುರಿ ಸ್ವಾಮೀಜಿ  ಸಿದ್ದರಾಮಯ್ಯ ಎಂದಿಗೂ ಸಿದ್ದರಾಮಯ್ಯನೇ. ಮತ್ತೊಬ್ಬ ಸಿದ್ದರಾಮಯ್ಯ ಹುಟ್ಟಲು ಸಾಧ್ಯವಿಲ್ಲ. ಸಿದ್ದರಾಮಯ್ಯರಿಗೆ ಸರಿಸಾಟಿ ಯಾರು ಅಲ್ಲ. ಪಕ್ಷದಲ್ಲಿ ಅವರ ವಿರುದ್ಧ ಯಾವುದೇ ಬೆಳವಣಿಗೆ ನಡೆದರೂ ಟಗರು ಹೇಗೆ ಗುಮ್ಮುತ್ತೆ ಎನ್ನುವುದು ಕಾದು ನೋಡಿ ಎಂದಿದ್ದಾರೆ. 

ಸಿದ್ದರಾಮಯ್ಯರಿದ್ದಾಗ ಸಚಿವ ಸಂಪುಟ ಅನುಭವ ಮಂಟಪದಂತಿತ್ತು. ಸದ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ಯಾವುದಕ್ಕೂ ಹೋಲಿಸಲು ಇಷ್ಟಪಡುವುದಿಲ್ಲ. ಸದ್ಯ ರಾಜ್ಯದಲ್ಲಿ ಜನ ಯಡಿಯೂರಪ್ಪ ಅವರನ್ನು ಸಿಎಂ ಎಂದು  ಅಂತ ಒಪ್ಪಿಕೊಂಡಿದ್ದಾರೆ. ಎಲ್ಲರನ್ನೂ ತನ್ನ ಮಕ್ಕಳಂತೆ ನೋಡಬೇಕು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆರೆಗೆ ಸರ್ಕಾರ ಸ್ಪಂದಿಸದಿದ್ದರೆ ಹಿಂದುಳಿದ, ದಲಿತ ಮಠಾಧೀಶರು ವಿಧಾನಸೌಧ ಮುಂದೆ ಧರಣಿ ಎಚ್ಚರಿಕೆ ಕೂರುತ್ತೇವೆ. ಕೇಂದ್ರ  ರಾಜ್ಯ ಸರ್ಕಾರ ರಾಜ್ಯದ ನೆರೆಗೆ ಸ್ಪಂದಿಸಬೇಕು.  ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ನೆರೆಗೆ ಪರಿಹಾರ ಕೊಡುವತ್ತ ಗಮನ ಹರಿಸಬೇಕು ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

Latest Videos
Follow Us:
Download App:
  • android
  • ios