Asianet Suvarna News Asianet Suvarna News

Mysuru: ಗವಿಮಠದಲ್ಲಿ ನಿರಂಜನ ನಿರಾಭಾರಿ ಪಟ್ಟಾಧಿಕಾರ

*  10 ಲಕ್ಷ ರು. ದೇಣಿಗೆ ಘೋಷಿಸಿದ ಮುರುಘಾ ಶರಣರು
*  ಸ್ವಾಮೀಜಿಗಳು ಸಮಾಜದಲ್ಲಿ ಪರಿವರ್ತನೆ ತರಬೇಕು: ಸಿದ್ದು
*  ಷಡಕ್ಷರಿ ಸ್ವಾಮೀಜಿ ಭಾವಚಿತ್ರ ಅನಾವರಣಗೊಳಿಸಿದ ಎಚ್‌.ಸಿ.ಮಹದೇವಪ್ಪ 
 

Niranjana Nirabhari Successor Mahotsava Held Gavimatha in T Narasipura grg
Author
Bengaluru, First Published Feb 13, 2022, 8:18 AM IST

ಟಿ.ನರಸೀಪುರ(ಫೆ.13):  ತಾಲೂಕಿನ ಚಿದರವಳ್ಳಿಯ ಬೊಮ್ಮನಹಳ್ಳಿ ಗ್ರಾಮದ ಶ್ರೀಸಿದ್ಧರಹಳ್ಳಿ ಪಾರಮಾರ್ಥ ಗವಿಮಠದಲ್ಲಿ(Shri Siddharahalli Paramartha Gavimatha) ಶುಕ್ರವಾರ ನಿರಂಜನ ನಿರಾಭಾರಿ ಪಟ್ಟಾಧಿಕಾರ ಮಹೋತ್ಸವ ನಡೆಯಿತು.

ಕನಕಪುರ ಮರಳೇಗವಿಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ತಮ್ಮ ಲಿಂಗ ಹಸ್ತದಿಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ(Mallikarjun Swamy) ಅವರಿಗೆ ಷಟಸ್ಥಲ ಬ್ರಹ್ಮೋಪದೇಶ, ಚಿನ್ಮಯಾನುಗ್ರಹ ದೀಕ್ಷೆ ನೇರವೇರಿಸಿ ನೂತನ ಅಭಿದಾನದೊಂದಿಗೆ ಪಟ್ಟಾಧಿಕಾರ(Successor) ನೆರವೇರಿಸಿದರು.

ಮಹಾಂತ ಮಠಕ್ಕೆ ಮಹಿಳಾ ಪೀಠಾಧಿಕಾರಿ: ನೀಲ್ಲಮ್ಮ ತಾಯಿಯ ಷಷ್ಠಬ್ಧಿ ಸಮಾರಂಭದ ಫೋಟೋಸ್

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಸ್ವಾಮೀಜಿಗಳು ಮನುಷ್ಯತ್ವವಿರುವ ವ್ಯಕ್ತಿಗಳನ್ನು ರೂಪಿಸುವ ಧರ್ಮ ಜಾಗೃತಿ(Religious Awareness) ಮೂಡಿಸಿ, ಸಮಾಜದಲ್ಲಿ ಪರಿವರ್ತನೆ ತರಬೇಕು. ಹುಟ್ಟುವ ಯಾವುದೇ ವ್ಯಕ್ತಿ ಇಂತಹ ಜಾತಿಯಲ್ಲಿ ಹುಟ್ಟುತ್ತೇವೆ ಅಂತ ಅರ್ಜಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಹೆತ್ತವರು ಇರುವ ಜಾತಿಯನ್ನು ಹೇಳಿಕೊಳ್ಳುತ್ತೇವೆ. ಜಾತಿಯನ್ನು ಹೇಳಿಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದು ಹೇಳಿದರು.

ಕುವೆಂಪು(Kuvempu) ಅವರು ಹೇಳುವಂತೆ ಹುಟ್ಟುವ ಮಗು ವಿಶ್ವಮಾನವರಾಗಿ ಹುಟ್ಟಿ, ಬೆಳೆಯುತ್ತ ಅಲ್ಪಮಾನವ ಆಗಿ ಬಿಡುತ್ತದೆ. ಬಸವಾದಿ ಶರಣರ ಪರಂಪರೆಯ ಹಿನ್ನೆಲೆಯಲ್ಲಿ ಧರ್ಮ(Religion) ಜಾಗೃತಿಯನ್ನು ಮೂಡಿಸುತ್ತಿರುವ ಮಠಗಳು ಹಾಗೂ ಸ್ವಾಮೀಜಿಗಳು ಎಂತಹ ಸಂದರ್ಭದಲ್ಲಿಯೂ ವೈದಿಕ ಧರ್ಮದ ಕಡೆಗೆ ವಾಲಬಾರದೆಂದು ಮನವಿ ಮಾಡಿದರು.

ಚಿತ್ರದುರ್ಗ(Chitradurga) ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು(Dr Shivamurthy Murugha Sharanaru) ಮಾತನಾಡಿ, ರಾಜಕಾರಣವು(Politics) ಧರ್ಮ ಪ್ರದಕ್ಷಿಣೆ ಮಾಡುತ್ತಿರುವ ಕಾಲಘಟ್ಟದಲ್ಲಿ ಧಾರ್ಮಿಕ ಕೇಂದ್ರಗಳಾಗಿರುವ ಮಠಗಳು ಬಸವತತ್ವ ಬೋಧಿಸುವುದನ್ನು ಅಜೆಂಡಾವನ್ನಾಗಿ ಮಾಡಿಕೊಳ್ಳಬೇಕು ಎಂದರು. ಸಿದ್ಧರಹಳ್ಳಿ ಪಾರಮಾರ್ಥ ಗವಿಮಠ ಉತ್ತಮವಾಗಿ ಬೆಳೆಯಲಿ ಎಂದು ಆರ್ಥಿಕ ನೆರವಾಗಿ 10 ಲಕ್ಷ ರು.ಗಳ ದೇಣಿಗೆ ಘೋಷಿಸಿ ಹಾರೈಸಿದರು.

ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ(Dr HD Mahadevappa) ಷಡಕ್ಷರಿ ಸ್ವಾಮೀಜಿ ಭಾವಚಿತ್ರವನ್ನು, ಶಾಸಕ ಎಂ.ಅಶ್ವಿನ್‌ಕುಮಾರ್‌ ಬಾಲ ಷಡಕ್ಷರಿ ಸ್ವಾಮೀಜಿ ಭಾವಚಿತ್ರವನ್ನು ಅನಾವರಣಗೊಳಿಸಿದರು.

ಹರಿಹರ ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ರಾಜ್ಯದ ಹಲವು ಪ್ರಮುಖ ಮಠಾಧೀಶರು ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾನ್ಯ, ಯುವ ಮುಖಂಡ ಸುನಿಲ್‌ ಬೋಸ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

5ರ ಬಾಲಕಗೆ ಶರಣ ಬಸವ ಪೀಠದ ಪಟ್ಟಾಧಿಕಾರ

ಕಲಬುರಗಿ:  ಶರಣ ಬಸವೇಶ್ವರ ದಾಸೋಹ ಪೀಠದ(Sharana Basaveshwara Matha) ಅತಿ ಕಿರಿಯ ಪೀಠಾಧಿಪತಿ ಎಂದೇ ಹೆಸರಾಗಿರುವ 5 ವರ್ಷದ ಬಾಲಕ ಚಿ.ದೊಡ್ಡಪ್ಪ ಅಪ್ಪಾಜಿಗೆ(Doddappa Appalji) ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿರುವ ಡಾ. ಶರಣಬಸವಪ್ಪ ಅಪ್ಪ(Dr Sharanabasappa Appa) ಅವರು ಫೆ.07 ರಂದು ಮಧಾಹ್ನ 1ಕ್ಕೆ ನೆರವೇರಿದ ಧಾರ್ಮಿಕ ಸಮಾರಂಭದಲ್ಲಿ ಪಟ್ಟಾಧಿಕಾರ ಹಸ್ತಾಂತರಿಸಿದರು.

ಜಮಖಂಡಿ: ಮರೆಗುದ್ದಿ ಮಹಾಂತ ಮಠಕ್ಕೆ ಮಹಿಳಾ ಪೀಠಾಧಿಕಾರಿ

ಈ ಪ್ರಕ್ರಿಯೆಯೊಂದಿಗೆ 2 ಶತಮಾನಗಳಿಂದಲೂ ಈ ನೆಲದ ದಾಸೋಹ ಪರಿಕಲ್ಪನೆಯ ಸನ್ನಿಧಾನ ಎಂದೇ ಹೆಸರಾಗಿರುವ ಶರಣಬಸವೇಶ್ವರ ಸಂಸ್ಥಾನದಲ್ಲಿ ನವ ಯುಗಕ್ಕೆ ಮುನ್ನುಡಿ ಬರೆಯಲಾಯಿತು. ದಾಸೋಹ ಮಹಾಮನೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು 9ನೇ ಪೀಠಾಧಿಪತಿಯಾಗಿರುವ(Successor) ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಗೆ ಹಿರಿಯ ಗುರುಗಳ ಸಮ್ಮುಖದಲ್ಲಿ ದಾಸೋಹ ಮಹಾಮನೆಯ ಸಂಪೂರ್ಣ ಜವಾಬ್ದಾರಿಯನ್ನು ಧಾರ್ಮಿಕ ವಿಧಿ-ವಿಧಾನಗಳನ್ನು ಈಡೇರಿಸುವ ಅಧಿಕಾರ ಅನುಗ್ರಹಿಸಿದ್ದರು. 

2017ರ ನ.1ರಂದು ಜನಿಸಿದ ದೊಡ್ಡಪ್ಪ ಅಪ್ಪಾಜಿ ಅವರು 200 ವರ್ಷಗಳ ಹಿಂದೆ ಸ್ಥಾಪಿಸಿದ ಶರಣ ಬಸವೇಶ್ವರ ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳಲ್ಲಿ ಅತ್ಯಂತ ಕಿರಿಯ ಪೀಠಾಧಿಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

Follow Us:
Download App:
  • android
  • ios