Asianet Suvarna News Asianet Suvarna News

Nikhil Kumaraswamy: ಜನರ ಪ್ರೀತಿ-ಅಭಿಮಾನಕ್ಕೆ ನಾನು ಚಿರಋುಣಿ

ಜಿಲ್ಲೆಯ ಜನರ, ಪ್ರೀತಿ ವಿಶ್ವಾಸಕ್ಕೆ ನಾನು ಮತ್ತು ನಮ್ಮ ಕುಟುಂಬ ಚಿರಋುಣಿಯಾಗಿದೆ. ಈ ಕಾರಣಕ್ಕಾಗಿಯೇ ಎಷ್ಟೇ ಕೆಲಸವಿದ್ದರೂ ಜಿಲ್ಲೆಯಲ್ಲಿ ನಡೆಯುವ ಕಾರ‍್ಯಕ್ರಮಗಳಲ್ಲಿ ಭಾಗವಹಿಸುವ ಉತ್ಸುಕತೆ ತೋರುತ್ತೇವೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

Nikhil Kumaraswamy Thanked Fans for their Love in Mandya gvd
Author
Bangalore, First Published Mar 29, 2022, 3:30 AM IST | Last Updated Mar 29, 2022, 3:30 AM IST

ಮಂಡ್ಯ (ಮಾ.29): ಜಿಲ್ಲೆಯ ಜನರ, ಪ್ರೀತಿ ವಿಶ್ವಾಸಕ್ಕೆ ನಾನು ಮತ್ತು ನಮ್ಮ ಕುಟುಂಬ ಚಿರಋುಣಿಯಾಗಿದೆ. ಈ ಕಾರಣಕ್ಕಾಗಿಯೇ ಎಷ್ಟೇ ಕೆಲಸವಿದ್ದರೂ ಜಿಲ್ಲೆಯಲ್ಲಿ ನಡೆಯುವ ಕಾರ‍್ಯಕ್ರಮಗಳಲ್ಲಿ ಭಾಗವಹಿಸುವ ಉತ್ಸುಕತೆ ತೋರುತ್ತೇವೆ ಎಂದು ಜೆಡಿಎಸ್‌ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumarswamy) ತಿಳಿಸಿದರು. ತಾಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾಮದಲ್ಲಿ ಹಿರಿಯಮ್ಮ ದೇವಿ ಗೆಳೆಯರ ಬಳಗ, ಜೋಡೆತ್ತಿನಗಾಡಿ ಅಭಿಮಾನಿಗಳು ಏರ್ಪಡಿಸಿದ್ದ ಎರಡನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆಯ ಸಿಎಸ್‌ಪಿ ಕಪ್‌ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆಗೆ ಬಂದರೆ ಪ್ರೀತಿ, ಅಭಿಮಾನ ತುಂಬಾನೇ ಹೆಚ್ಚಾಗಿರುತ್ತೆ. ಆ ಪ್ರೀತಿಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ. ನಾನಾಗಲೀ, ನಮ್ಮ ತಂದೆ, ತಾತನವರು ಜಿಲ್ಲೆಯ ಮೇಲೆ ವಿಶೇಷ ಅಭಿಮಾನವನ್ನು ಇಟ್ಟಿದ್ದಾರೆ ಎಂದರು. ಕೋವಿಡ್‌ ಬಳಿಕ ಗ್ರಾಮೀಣ ಭಾಗದಲ್ಲಿ ಮೈ ನವಿರೇಳಿಸುವಂತಹ ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಯುತ್ತಿದೆ. ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ರೋಮಾಂಚನಕಾರಿ ಅನುಭವವಾಗಿರುತ್ತದೆ ಎಂದರು. ಇಂತಹ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಪುಟ್ಟರಾಜು ಅವರ ಹೆಸರಿನಲ್ಲಿ ಕೊಡಮಾಡುತ್ತಿರುವ ಕಪ್‌ಗೆ ತುಂಬಾ ಮೌಲ್ಯವಿದೆ. 

Nikhil Kumaraswamy: 'ಯದುವೀರ'ನಾದ ಸ್ಯಾಂಡಲ್‌ವುಡ್‌ನ ಯುವರಾಜ: ಫಸ್ಟ್ ಲುಕ್ ರಿವೀಲ್

ಏಕೆಂದರೆ ಪುಟ್ಟರಾಜು ಮತ್ತವರ ಕುಟುಂಬ ಈ ಕ್ಷೇತ್ರದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಯಾರೂ ಮಾಡದ ಜನಪರ ಕಾರ‍್ಯಗಳನ್ನು ಪುಟ್ಟರಾಜು ಅವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಾರ‍್ಯಕ್ರಮಕ್ಕೂ ಮುನ್ನ ಚಂದಗಾಲು ಗ್ರಾಮಸ್ಥರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಕ್ರೇನ್‌ ಮೂಲಕ ಬೃಹತ್‌ ಸೇಬಿನ ಹಾರ ಹಾಕಿ, ಹೂವುಮಳೆಗೈದು ಬರಮಾಡಿಕೊಂಡರು. 40ಕ್ಕೂ ಹೆಚ್ಚು ಜೋಡೆತ್ತಿನ ಸ್ಪರ್ಧಿಗಳು ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು. ಮೈನವರೇಳಿಸುವ ಜೋಡೆತ್ತಿನ ಓಟದ ಸ್ಪರ್ಧೆಯನ್ನು ಸುತ್ತಮುತ್ತಲ ಸಹಸ್ರಾರು ಮಂದಿ ವೀಕ್ಷಿಸಿದರು. ಮಿಂಚಿನ ಓಟದಲ್ಲಿ ಮುನ್ನುಗ್ಗುತ್ತಿದ್ದ ಜೋಡೆತ್ತು ಮತ್ತು ಸವಾರರನ್ನು ಹುರಿದುಂಬಿಸುವ ಘೋಷಣೆಗಳನ್ನು ಕೂಗುತ್ತಿದ್ದರು. 

ಸಿಳ್ಳೆ, ಕೇಕೆ, ಜೋರಾಗಿಯೇ ಇತ್ತು. ಇದರಿಂದ ಪ್ರೇರೇಪಿತರಾದ ಸ್ಪರ್ಧಾಳುಗಳು ಎತ್ತುಗಳಿಗೆ ಬಾರುಕೋಲಿನಿಂದ ಬೆದರಿಸಿ ಮುನ್ನುಗುತ್ತಿದ್ದುದು ವಿಶೇಷವಾಗಿತ್ತು. ಶಾಸಕ ಸಿ.ಎಸ್‌. ಪುಟ್ಟರಾಜು, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಲೋಕೇಶ್‌, ವಕೀಲ ಚಂದಗಾಲು ಶ್ರೀಧರ್‌, ಮನ್‌ಮುಲ್‌ ಅಧ್ಯಕ್ಷ ಬಿ.ರಾಮಚಂದ್ರ, ನಿರ್ದೇಶಕ ಎಚ್‌.ಟಿ. ಮಂಜು, ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ. ರಾಮು, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಚಂದ್ರು ಹಲವರಿದ್ದರು.

Karnataka JDS ಅನಿತಾ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಅಧಿಕೃತ ಘೋಷಣೆ

ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಎಚ್‌.ಡಿ.ರೇವಣ್ಣ ಕಾರಣ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಅವರ ದೊಡ್ಡಪ್ಪ(ಎಚ್‌.ಡಿ.ರೇವಣ್ಣ) ಕಾರಣರಾಗಿದ್ದಾರೆ. ನಿಖಿಲ್ ಬಗ್ಗೆ ಗೌರವ ಇದೆ, ಅವರು ಸುಮ್ಮನೆ ಮಾತಾಡೋದು ತಪ್ಪು. ನಿಖಿಲ್ ಚಿಕ್ಕ ರಾಜಕಾರಣಿ, ಕುಮಾರಸ್ವಾಮಿ ಸುಪುತ್ರರು. ಪ್ರತಿಯೊಂದು ಮಾಹಿತಿ ಪಡೆದು ಮಾತನಾಡಬೇಕು ಅಂತ ನಿಖಿಲ್‌ಗೆ ಸಚಿವ ಕೆ.ಸಿ.ನಾರಾಯಣ ಗೌಡ ಟಾಂಗ್‌ ಕೊಟ್ಟಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದ ಮೈತ್ರಿ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪ ಎಚ್‌.ಡಿ.ರೇವಣ್ಣ PWD ಮಿನಿಸ್ಟರ್ ಆಗಿದ್ದರು. ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟಿದ್ದೇನೆ ಅಂತ ಹೇಳುತ್ತಿದ್ದಾರೆ. ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ?.ಒಂದೇ ಒಂದು ತೋರಿಸಲಿ ಎನರ್ಜಿ ಮಿನಿಸ್ಟರ್ ಆಗಿ ಅಂತ ಖಾರವಾಗಿ ಮಾತನಾಡಿದ್ದಾರೆ. 

Latest Videos
Follow Us:
Download App:
  • android
  • ios