ಮಂಡ್ಯ[ಮೇ. 10]  10ರಿಂದ15ವರ್ಷ ರಾಜಕಾರಣ ಮಾಡಿದವರಿಗೂ  ನನ್ನ ಮೊದಲ ಚುನಾವಣೆ ಕೊಟ್ಟಷ್ಟು ಅನುಭವ ಕೊಡೋದಿಲ್ಲ. ನಾನು ಮಂಡ್ಯಕ್ಕೆ ಬರ್ತಿಲ್ಲ ಅಂತ ಪ್ರಶ್ನೆ‌ ಮಾಡ್ತಾರೆ, ನಾನು ಮಂಡ್ಯಕ್ಕೆ ಟೀ ಕುಡಿಯಲಿಕ್ಕೆ ಬರಲ,ಕಾಫಿ ಕುಡಿಯಲಿಕ್ಕೆ ಬರಲ್ಲ,ಕೆಲಸ ಮಾಡ್ಬೇಕು ಸುಮ್ನೆ ಬರೋದಲ್ಲ ಎನ್ನುತ್ತಲೇ  ಅಭಿಷೇಕ್ ಗೆ ಅಂಬರೀಶ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿ  ನಾನು ಸ್ಮಾರ್ಟ್ ಸ್ಕೂಲ್ ಮಾಡ್ತೀನಿ, ಉದ್ಯೋಗ ಸೃಷ್ಟಿ ಮಾಡ್ತೀನಿ ಅಂತ ಬುರುಡೆ ಬಿಡಲು ಹೇಳಿಲ್ಲ. ನನ್ನ ಮಾತುಗಳನ್ನ ನಿಜ ಮಾಡಲು ಕೆಲಸ ಮಾಡ್ತಿದ್ದೇನೆ. ಚುನಾವಣಾ ಸಮಯದಲ್ಲಿ ಹಲವೆಡೆ ಭೇಟಿ ಕೊಟ್ಟಿದ್ದೆ. ಕೆಲವೆಡೆ ಫ್ಯಾಕ್ಟರಿಗಳಿಗೆ ಕೆಲಸಕ್ಕೆಂದು ಮಹಿಳೆಯರು ಆಟೋಗಳಲ್ಲಿ ಹೋಗ್ತಾರೆ. ಪ್ರಚಾರದ ವೇಳೆ ತಾಯಂದಿರು ನಿನ್ನ ವಯಸ್ಸಿನ ಮಗನಿದ್ದಾನೆ ಅವನಿಗೆ ಕೆಲಸ ಸಿಕ್ಕಿಲ್ಲ ಅಂತ ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಪ್ರಯತ್ನದಲ್ಲಿದ್ದೇನೆ ಎಂದರು.

'ನಿಖಿಲ್ ಎಲ್ಲಿದ್ದೀಯಪ್ಪಾ' ವೋಟ್ ಹಾಕಿದ ವಿಡಿಯೋ ಫುಲ್ ವೈರಲ್

ನಾನು ಇನ್ನೂ ಮನೆ ಮಾಡಿಲ್ಲ ಅಂತ ಎಲ್ಲರು ಪ್ರಶ್ನೆ ಮಾಡ್ತಾರೆ. ನಾನು ಇಲ್ಲಿ ಬಾಡಿಗೆ ಮನೆ ಮಾಡಲು ಬಂದಿಲ್ಲ. ಸ್ವಂತ ಮನೆ ಮಾಡಿ ಇಲ್ಲೆ ಇರುತ್ತೇನೆ ಎಂದು ನಿಖಿಲ್‌ ಹೇಳುತ್ತಿದ್ದಂತೆಯೇ ಮಧ್ಯ ಮಾತನಾಡಿದ ಪುಟ್ಟರಾಜು ಹೆಣ್ಣು,ಹೊನ್ನು,ಮಣ್ಣು ಹಣೆಯಲ್ಲಿ ಬರೆದಿರಬೇಕು ಎಂದರು.

‘ನಿಖಿಲ್ ಎಲ್ಲಿದ್ದೀಯಪ್ಪ..’ಅದು ಅಮೇರಿಕದಲ್ಲಿ ಫೇಮಸ್ ಆಗಿದೆಯಂತೆ. ಈ ಟೈಟಲ್ಗೆ ಬಾರಿ ಡಿಮ್ಯಾಂಡ್ ಅಂದ್ರು. ಅದ್ಕೆ ನಾನು ಅದನ್ನು ಕೊಡ್ಬಿಟ್ಟೀರಿ.. ಅದು ನನ್ನ ಟೈಟಲ್.. ಪುಟ್ಟರಾಜಣ್ಣನೇ ಪ್ರೊಡ್ಯೂಸರ್ ಎಂದು ತಮಾಷೆಯಾಗಿಯೇ ನಿಖಿಲ್ ಹೇಳಿದರು. ಇದಕ್ಕೆ  ನಾನೇ ಪ್ರೊಡ್ಯೂಸರ್ ಎಂದು ವೇದಿಕೆ ಮೇಲೆಯೇ ಸಚಿವ ಪುಟ್ಟರಾಜು ದನಿಗೂಡಿಸಿದರು.