ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಕುರಾನ್‌ ಸರ್ಕಲ್‌ನ ಶಂಕಿತರ ತೀವ್ರ ವಿಚಾರಣೆ| ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದ ಎನ್ಐಎ ಅಧಿಕಾರಿಗಳು| ವಿಚಾರಣೆ ಬಳಿಕ ಮತ್ತಷ್ಟು ವಿಷಯಗಳು ಬಹಿರಂಗವಾಗುವ ಸಾಧ್ಯತೆ| 

ಬೆಂಗಳೂರು(ಅ.11): ನಗರದಲ್ಲಿ ಸೆರೆಯಾದ ಐಸಿಸ್‌ ಶಂಕಿತ ಉಗ್ರರಾದ ಅಹ್ಮದ್‌ ಅಬ್ದುಲ್‌ ಖಾದರ್‌ ಮತ್ತು ಇರ್ಫಾನ್‌ ನಾಸೀರ್‌ನನ್ನು ಎನ್‌ಐಎ ಅಧಿಕಾರಿಗಳು ದೆಹಲಿಗೆ ಕರೆದೊಯ್ದಿದ್ದು, ತೀವ್ರ ವಿಚಾರಣೆಗೊಳಿಸಿದ್ದಾರೆ.

"

ಇತ್ತೀಚೆಗೆ ಐಸಿಸ್‌ ಸಂಘಟನೆಗೆ ಆ್ಯಪ್‌ ಅಭಿವೃದ್ಧಿ ಪಡಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಡಾ.ಅಬ್ದುಲ್‌ ರೆಹಮಾನ್‌ ಅಲಿಯಾಸ್‌ ಡಾ.ಬ್ರೇವ್‌ನನ್ನು ವಿಚಾರಣೆಗೊಳಪಡಿಸಿದಾಗ ಅಬ್ದುಲ್‌ ಖಾದರ್‌ ಮತ್ತು ಇರ್ಫಾನ್‌ ನಾಸೀರ್‌ನ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ದೆಹಲಿಗೆ ಕರೆದೊಯ್ಯಲಾಗಿದ್ದು, ವಿಚಾರಣೆಗೊಳಪಡಿಸಿದ್ದಾರೆ. ‘ಕುರಾನ್‌ ಸರ್ಕಲ್‌’ ಸದಸ್ಯರನ್ನು ಮುಖಾಮುಖಿಯಾಗಿ ಸಿರಿಯಾ ಯಾತ್ರೆ ಕುರಿತು ಪ್ರಶ್ನಿಸಿ ಹಲವು ಮಾಹಿತಿ ಪಡೆದುಕೊಳ್ಳಲು ಎನ್‌ಐಎ ಅಧಿಕಾರಿಗಳು ಮುಂದಾಗಿದ್ದಾರೆ.

ಶಂಕಿತ ಐಸಿಸ್‌ ಉಗ್ರರ ಬಂಧನ: ‘​ಕು​ರಾನ್‌ ಸರ್ಕಲ್‌’ ಸದ​ಸ್ಯ​ರಿ​ಗೆ NIA ತಲಾ​ಶ್‌

ಸಿರಿಯಾ ಯಾತ್ರೆ ಕುರಿತು ಹಲವು ಪ್ರಶ್ನೆಗಳಿಗೆ ಎಐಎ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ‘ಕುರಾನ್‌ ಸರ್ಕಲ್‌’ ಸದಸ್ಯರಿಗೆ ಆರ್ಥಿಕ ಸಹಕಾರ ಸಿಗುವ ಬಗ್ಗೆ ವಿಷಯ ಕ್ರೋಢೀಕರಿಸಲಾಗಿದೆ. ಈಗಾಗಲೇ ಹಲವು ಮಹತ್ವದ ಮಾಹಿತಿಯನ್ನು ಕಲೆ ಹಾಕಲಾಗಿದೆ. ಬಂಧಿತರ ಬ್ಯಾಂಕ್‌ನ ಮಾಹಿತಿಯನ್ನು ಶೋಧಿಸಿ ವಹಿವಾಟಿನ ಕುರಿತು ದಾಖಲೆ ಜಪ್ತಿ ಮಾಡಲಾಗಿದ್ದು, ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ಬಳಿಕ ಮತ್ತಷ್ಟು ವಿಷಯಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.