Asianet Suvarna News Asianet Suvarna News

ಐಸಿಸ್ ಲಿಂಕ್? : ಮಾಜಿ ಶಾಸಕ ದಿ. ಇದಿನಬ್ಬ ಪುತ್ರನ ಮನೆಗೆ NIA ದಾಳಿ

  • ಉಳ್ಳಾಲದಲ್ಲಿ ಮಾಜಿ ಶಾಸಕ, ಸಾಹಿತಿ ದಿ.ಇದಿನಬ್ಬ ಪುತ್ರನ ಮನೆಗೆ ಎನ್ ಐಎ ದಾಳಿ 
  • ಇದಿನಬ್ಬ ಮೊಮ್ಮಗಳು ಐಸಿಸ್ ಸೇರಿರುವ ಹಿನ್ನೆಲೆ ದಾಳಿ ನಡೆಸಿರುವ ಶಂಕೆ
  • ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾ ಮನೆಗೆ ದಾಳಿ
NIA raids at former MLA Idinabba son house in Ullal in connection with ISIS snr
Author
Bengaluru, First Published Aug 4, 2021, 12:17 PM IST
  • Facebook
  • Twitter
  • Whatsapp

 ಮಂಗಳೂರು (ಆ.04): ಉಳ್ಳಾಲದಲ್ಲಿ ಮಾಜಿ ಶಾಸಕ, ಸಾಹಿತಿ ದಿ.ಇದಿನಬ್ಬ ಪುತ್ರನ ಮನೆಗೆ ಎನ್ ಐಎ ದಾಳಿ ನಡೆಸಿದ್ದು, ಇದಿನಬ್ಬ ಮೊಮ್ಮಗಳು ಐಸಿಸ್ ಸೇರಿರುವ ಹಿನ್ನೆಲೆ ದಾಳಿ ನಡೆಸಿರಬಹುದೆನ್ನಲಾಗಿದೆ. 

ಮೂರು ವರ್ಷಗಳ ಹಿಂದೆ ನಿಗೂಢವಾಗಿ ಇದಿನಬ್ಬ ಮೊಮ್ಮಗಳ ಕುಟುಂಬ ನಾಪತ್ತೆಯಾಗಿತ್ತು.   ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾ ಪುತ್ರಿ ಅಜ್ಮಲ್ ಕುಟುಂಬ ನಾಪತ್ತೆಯಾಗಿದ್ದು ಇಸ್ಮಾಯಿಲ್ ಬಾಷಾ ಮನೆ ಮೇಲೆ ದಾಳಿ ನಡೆದಿದೆ.

ತಮಿಳ್ನಾಡಲ್ಲಿ ಶಂಕಿತ ಐಸಿಸ್‌ ಉಗ್ರ ಮಹಮ್ಮದ್‌ ಬಂಧನ!

ಕಳೆದ 2 ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು. ಈ 17 ಜನರ ಪೈಕಿ ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾ ಪುತ್ರಿ ಅಜ್ಮಲ್ ಕುಟುಂಬವೂ ಇತ್ತು. ಅಜ್ಮಲ್ ಳನ್ನ ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಎನ್ನುವವರ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. ವರ್ಷಗಳ ಹಿಂದೆ ಅಜ್ಮಲ್ ಗಂಡ ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗುತ್ತಿರುವುದಾಗಿ ಹೇಳಿ ಹೋದವರು ಇಂದಿನವರೆಗೂ ಸಂಪರ್ಕಕ್ಕೆ ಸಿಕ್ಕಲಿಲ್ಲ.

ಶ್ರೀಲಂಕಾದಿಂದ ಮಸ್ಕತ್ ಹಾಗೂ ಕತಾರ್ ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಸಿಸ್ ಸೇರಿದ್ದಾರೆಂದು ಮಾಹಿತಿ ಇತ್ತು. ವೈದ್ಯರಾಗಿರುವ ಸಿಯಾಝ್‍ನ ಸಹೋದರ ಕೂಡ ಹೆಂಡತಿ ಮತ್ತು ಮಗುವಿನೊಂದಿಗೆ ತೆರಳಿದ್ದ. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. 

ಅದೇ ತನಿಖೆಯ ಭಾಗವಾಗಿ ಅಜ್ಮಲ್ ತಂದೆ ಇಸ್ಮಾಯಿಲ್ ಭಾಷಾ ಮನೆಗೆ ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾಹಿತಿಯೂ ಆಗಿದ್ದ ದಿ.ಇದಿನಬ್ಬ ಮೂರು ಬಾರಿ ಕಾಂಗ್ರೆಸ್ ನಿಂದ ಉಳ್ಳಾಲ ಶಾಸಕರಾಗಿ ಆಯ್ಕೆಯಾಗಿದ್ದರು.

Follow Us:
Download App:
  • android
  • ios