ಕೋಲಾರ(ಫೆ.25): ಉಗ್ರರ ಜೊತೆ ನಂಟು ಹೊಂದಿದ್ದ ಆರೋಪದಡಿ ಬಂಧಿತರಾಗಿದ್ದ ಕೋಲಾರ ಮೂಲದ ಆರೋಪಿಗಳ ಮನೆಗಳಿಗೆ ಹೈದರಾಬಾದ್‌ನ ಎನ್‌ಐಎ ತಂಡ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

ಹೈದರಾಬಾದ್‌ನ ನ್ಯಾಷನಲ್‌ ಇನ್ವೆಸ್ಟಿಗೇಷನ್‌ ಆಫ್‌ ಆ್ಯಂಟಿ ಟೆರರಿಸಂ(ಎನ್‌ಐಎ) ವಿಭಾಗದ ಡಿ.ಎಸ್‌.ಪಿ ಶ್ರೀನಿವಾಸರಾವ್‌ ನೇತೃತ್ವದ ಆರು ಜನರ ತಂಡ ಇಂದು ಮುಂಜಾನೆ 3.30 ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಹಿತಿ ಕಲೆಹಾಕಿದ ಎನ್‌ಐಎ

ನಗರದ ಬೀಡಿ ಕಾಲೋನಿಯಲ್ಲಿರುವ ಅವರ ಮನೆ ಮತ್ತು ಅಂತರಗಂಗೆ ಬೆಟ್ಟದ ತಪ್ಪಲಲ್ಲಿರುವ ಖಾದ್ರೀಪುರದ ಗ್ರಾಮದ ಬಳಿ ಇರುವ ತೋಟದ ಮನೆಗಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ತೆರಳಿದ್ದಾರೆ. ಕಳೆದ ಜನವರಿಯ ಮೊದಲ ವಾರದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಕೋಲಾರ ಮೂಲದ ಮಹಮ್ಮದ್‌ ಜಹೀದ್‌ ಮತ್ತು ಸಲೀಂ ವಾಸದ ಮನೆ ಇಬ್ಬರನ್ನು ಚೆನ್ನೈನ ಪೋಲಿಸರು ಬಂಧಿಸಿದ್ದರು.

 

ಮನೆ ಸೇರಿದಂತೆ ಅವರ ಸಂಬಂಧಿಕರ ಮನೆಗಳಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ 3.30 ಕ್ಕೆ ಭೇಟಿ ನೀಡಿರುವ ತಂಡ ಮಹಜರು ಮಾಡಿ ಅಧಿಕಾರಿಗಳು ವಾಪಸ್‌ ತೆರಳಿದ್ದಾರೆ.