ನಿಶ್ಚಿತಾರ್ಥದ ಬಳಿಕ ಪ್ರೀತಿಸಿದವನೊಂದಿಗೆ ವಿವಾಹ : ನವವಿವಾಹಿತೆ ಆತ್ಮಹತ್ಯೆಗೆ ಹಲವು ಶಂಕೆ?
- ಸಕಲೇಶಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ನವವಿವಾಹಿತೆ
- ನವವಿವಾಹಿತೆ ಮೃತದೇಹ ನಾಲ್ಕು ದಿನಗಳ ಬಳಿಕ ಇಂದು ಪತ್ತೆ
- ಹೇಮಾವತಿ ನದಿಗೆ ಹಾರಿ ನವವಿವಾಹಿತೆ ಪೂಜಾ ಆತ್ಮಹತ್ಯೆ
ಹಾಸನ (ಆ.08): ಸಕಲೇಶಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ನವವಿವಾಹಿತೆ ಮೃತದೇಹ ನಾಲ್ಕು ದಿನಗಳ ಬಳಿಕ ಇಂದು ಪತ್ತೆಯಾಗಿದೆ.
ಹೇಮಾವತಿ ನದಿಗೆ ಹಾರಿ ನವವಿವಾಹಿತೆ ಪೂಜಾ (20) ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ.5 ರಂದು ಸಕಲೇಶಪುರದಲ್ಲಿ ಘಟನೆ ನಡೆದಿದ್ದು ಇದೀಗ ಆಕೆಯ ಮೃತದೇಹ ಪತ್ತೆಯಾಗಿದೆ.
ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ಅಗ್ನಿಶಾಮಕ ದಳ ಶೋಧ ನಡೆಸಿದರು ಮೃತದೇಹ ಪತ್ತೆಯಾಗಿರಲಿಲ್ಲ. ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಕುಷ್ಟಗಿ: ಮದುವೆ ಆಗೋದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ
ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ ಸಕಲೇಶಪುರ ತಾಲೂಕಿನ ಅಶ್ವಥ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಎಂಟು ತಿಂಗಳ ಹಿಂದೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ನಿಶ್ಚಿತಾರ್ಥದ ಬಳಿಕ ಮನೆಯಿಂದ ಓಡಿ ಹೋಗಿ ಅಶ್ವಥ್ ಜೊತೆ ಮದುವೆಯಾಗಿದ್ದಳು.
ಆದರೆ ಪ್ರೀತಿಸಿದವನನ್ನೇ ಮದುವೆಯಾಗಿದ್ದ ಪೂಜಾ ಆತ್ಮಹತ್ಯೆ ಶರಣಾಗಿದ್ದಾಳೆ. ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ.