Bengaluru: ರೈಲು ಬೋಗಿ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶು; ಮೈಮೇಲೆ ತುಂಡು ಬಟ್ಟೆಯಿಲ್ಲದೇ ನರಳಿ ಪ್ರಾಣಬಿಟ್ಟ ಮಗು
ಭುವನೇಶ್ವರದಿಂದ ಬೆಂಗಳೂರಿಗೆ ಬಂದಿದ್ದ ಪ್ರಶಾಂತಿ ಎಕ್ಸ್‌ಪ್ರಸ್ ರೈಲು ಬೋಗಿಯ ಕಸದ ತೊಟ್ಟಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಬೆಂಗಳೂರು (ಜೂ.27): ಒಡಿಶಾದ ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರ ಡಸ್ಟ್‌ಬಿನ್‌ನಲ್ಲಿ ನವಜಾತ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗು ಹುಟ್ಟಿದಾಕ್ಷಣ ಅದನ್ನು ಕಸದ ಡಬ್ಬಿಗೆ ಬೇಸಾಡಲಾಗಿದ್ದು, ಮೈಮೇಲೆ ತುಂಡು ಬಟ್ಟೆಯಿಲ್ಲದೇ ಮಗು ನರಳಿ ನರಳಿ ಪ್ರಾಣ ಬಿಟ್ಟಿರಬಹುದು ಎಂದು ರೈಲ್ವೆ ಪೊಲೀಸರು ಅಂದಾಜಿಸಿದ್ದಾರೆ.
ಯಲಹಂಕ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನ ಡಸ್ಟ್‌ಬಿನ್‌ನಲ್ಲಿ ನವಜಾತ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗು ಜನಿಸಿದ ಸುಮಾರು ನಾಲ್ಕೈದು ಗಂಟೆಗಳ ನಂತರ ಅದನ್ನು ಕಸದ ತೊಟ್ಟಿಯಲ್ಲಿ ಬೀಡಾಡಿ ಹೋಗಿದ್ದಾರೆ. ಅಷ್ಟಕ್ಕೂ ಮಗುವಿಗೆ ಕಸದ ತೊಟ್ಟಿಯಲ್ಲಿ ಕೈ-ಕಾಲು ಆಡಿಸಲೂ ಆಗದಂತಹ ಸಣ್ಣ ಜಾಗದಲ್ಲಿ ನರಳಿದೆ. ಕಸದ ಡಬ್ಬಿಯಲ್ಲಿ ಮಗುವನ್ನು ಹಾಕಿ ಅದನ್ನು ಮುಚ್ಚಿ ಹೋದ ಹಿನ್ನೆಲೆಯಲ್ಲಿ ಉಸಿರಾಡಲೂ ಸಮಸ್ಯೆಯಾಗಿ, ಚಳಿ ಗಾಳಿಗೆ ಹಾಗೂ ಕಸದ ತೊಟ್ಟಿಯಲ್ಲಿದ್ದ ಜಿರಳೆಗಳು ಹಾಗೂ ಕ್ರಿಮಿ, ಕೀಟಗಳ ಕಚ್ಚುವಿಕೆಯಿಂದ ನರಳಿ ಮಗು ಪ್ರಾಣ ಬಿಟ್ಟಿದೆ.
6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ; ದೂರು ಕೊಡದಂತೆ ಮನೆ, ಬಂಗಾರದ ಆಮಿಷವೊಡ್ಡಿದ
ಬೆಂಗಳೂರಿನ ಯಲಹಂಕ ರೈಲು ನಿಲ್ದಾಣ ದಲ್ಲಿ ನಿನ್ನೆ ಮುಂಜಾನೆ ನಡೆದ ಘಟನೆ ನಡೆದಿದೆ. ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಕಸದ ಬುಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಕಂಡ ಪ್ರಯಾಣಿಕರು ಮಮ್ಮಲ ಮರುಗಿದ್ದಾರೆ. ಪ್ರಯಾಣಿಕರ ಮಾಹಿತಿಯಿಂದ ಸ್ಥಳಕ್ಕೆ ರೇಲ್ವೆ ಪೋಲಿಸರು ಭೇಟಿ ನೀಡಿ ಮಗುವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಅದಾಗಲೇ ಮಗು ಸಾವನ್ನಪ್ಪಿತ್ತು. ಇನ್ನು ಮೃತ ನವಜಾತ ಶಿಶುವಿನ ದೇಹವನ್ನ ಬೆಂಗಳೂರು ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ರೈಲ್ವೆ ಪೊಲೀಸರು ಮಗು ಮೃತದೇಹ ಪತ್ತೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಾಲ್ಕು ದಿನದ ಹಿಂದೆ ಮನೆ ಬಾಗಿಲ ಬಳಿ ನವಜಾತ ಶಿಶು ಬೀಸಾಡಿದ್ದ ತಾಯಿ:
ಕಳೆದ ನಾಲ್ಕು ದಿನಗಳ ಹಿಂದೆ ವಿಜಯಪುರದಲ್ಲಿ ನವಜಾತ ಶಿಶುವನ್ನು ಮನೆಯ ಹೊಸ್ತಿಲು ಬಳಿ ಎಸೆದು ಹೋಗಿದ್ದ ಘಟನೆ ನಡೆದಿತ್ತು. ವಿಜಯಪುರ ನಗರದ ಚಾಲುಕ್ಯ ನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿತ್ತು. ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ.ಪೊಲೀಸ್ ಪಾಟೀಲ ಎಂಬುವವರ ಮನೆಯ ಹೊಸ್ತಿಲಲ್ಲಿ ನಸುಕಿನ ಜಾವ ನವಜಾತ ಶಿಶು ಇಟ್ಟು ಪರಾರಿ ಆಗಿದ್ದಾರೆ. ಇನ್ನು ಈ ಮಗುವಿನ ಕರುಳಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ ಕ್ಲಿಪ್ ಹಾಕಿರುವುದು ಕೂಡ ಹಾಗೆಯೇ ಇದೆ.
ಸಿದ್ದರಾಮಯ್ಯ ಎದುರಲ್ಲೇ ಡಿಕೆಶಿಯನ್ನು ಸಿಎಂ ಮಾಡುವಂತೆ ಆಗ್ರಹಿಸಿದ ಒಕ್ಕಲಿಗ ಸ್ವಾಮೀಜಿ
ಗಂಡು ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಇವೆ. ಮನೆಯಲ್ಲಿ ಬಾಡಿಗೆಗೆ ಇರುವ ವೇಳೆ ವಿದ್ಯಾರ್ಥಿನಿಯರು ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಗುವನ್ನು ಕಂಡು ಬೆಚ್ಚಿದ ವಿದ್ಯಾರ್ಥಿನಿಯರು ಅನಾರೋಗ್ಯದ ಕಾರಣದಿಂದ ಎಸೆದು ಹೋಗಿರುವ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಪರಿಶೀಲನೆ ಮಾಡಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆಗೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.