Asianet Suvarna News Asianet Suvarna News

new year celebration : ಹೊಸ ವರ್ಷಾಚರಣೆ: ಗೋಕರ್ಣಕ್ಕೆ ಒಂದೂವರೆ ಲಕ್ಷ ಪ್ರವಾಸಿಗರು ಭೇಟಿ!

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆರು ಸ್ಥಳಗಳಿಗೆ ಹೊಸ ವರ್ಷಾಚರಣೆ ವೇಳೆ ವಿದೇಶಿಗರನ್ನು ಒಳಗೊಂಡು 1.41 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ಡಿ.30, 31ರಂದು 1,41,401 ಪ್ರವಾಸಿಗರು ಆಗಮಿಸಿದ್ದು, ಇವರಲ್ಲಿ 91 ವಿದೇಶಿಗರು ಸೇರಿದ್ದಾರೆ.

New year celebration One and a half lakh tourists visit gokarna rav
Author
First Published Jan 3, 2023, 1:32 PM IST

ಜಿ.ಡಿ.ಹೆಗಡೆ

 ಕಾರವಾರ ಜ.3): ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆರು ಸ್ಥಳಗಳಿಗೆ ಹೊಸ ವರ್ಷಾಚರಣೆ ವೇಳೆ ವಿದೇಶಿಗರನ್ನು ಒಳಗೊಂಡು 1.41 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ಡಿ.30, 31ರಂದು 1,41,401 ಪ್ರವಾಸಿಗರು ಆಗಮಿಸಿದ್ದು, ಇವರಲ್ಲಿ 91 ವಿದೇಶಿಗರು ಸೇರಿದ್ದಾರೆ. 2022ರ ಜನವರಿಯಿಂದ ಅಕ್ಟೋಬರ್‌ವರೆಗೆ 7,64,885 ಪ್ರವಾಸಿಗರು ಆಗಮಿಸಿದ್ದರು. ಕಳೆದ ಸಾಲಿನಲ್ಲಿ ಕೋವಿಡ್‌ ಕಾರಣದಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿತ್ತು. ಪ್ರವಾಸಿಗರ ಆಗಮನ ಸಾಕಷ್ಟುಕಡಿಮೆಯಾಗಿತ್ತು.

ಪ್ರಮುಖವಾಗಿ ಮುರುಡೇಶ್ವರ(Murdershwar), ಗೋಕರ್ಣ(gokarna), ಕುಡ್ಲೆ(Kudla), ಓಂ ಕಡಲ ತೀರ, ಕಾರವಾರ ಹಾಗೂ ದಾಂಡೇಲಿಗೆ ಆಗಮಿಸಿದ್ದಾರೆ. ಮುರುಡೇಶ್ವರಕ್ಕೆ 21,638 ಸ್ಥಳೀಯ, 18 ವಿದೇಶಿ, ಒಟ್ಟು 21,615, ಗೋಕರ್ಣ ಮುಖ್ಯ ಕಡಲ ತೀರಕ್ಕೆ 34,533 ಸ್ಥಳೀಯ, 18 ವಿದೇಶಿ, ಒಟ್ಟು 34,551, ಕುಡ್ಲೆ ಕಡಲ ತೀರಕ್ಕೆ 21,874 ಸ್ಥಳೀಯ, 29 ವಿದೇಶಿ, ಒಟ್ಟು 21,903, ಓಂ ಕಡಲ ತೀರಕ್ಕೆ 19,555 ಸ್ಥಳೀಯ, 19 ವಿದೇಶಿ, ಒಟ್ಟು 19,574, ಕಾರವಾರಕ್ಕೆ 23,445 ಸ್ಥಳೀಯ, 8 ವಿದೇಶಿ, ಒಟ್ಟು 23,453, ದಾಂಡೇಲಿ 20,265 ಸ್ಥಳೀಯ, 4 ವಿದೇಶಿ ಒಟ್ಟು 20,269 ಪ್ರವಾಸಿಗರು ಎರಡು ದಿನದಲ್ಲಿ ಭೇಟಿ ನೀಡಿದ್ದಾರೆ.

Gokarna Beach :ಗೋಕರ್ಣಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಬೆಂಗಳೂರಿನ ಯುವಕ 50 ಅಡಿ ಆಳಕ್ಕೆ ಬಿದ್ದು ಗಂಭೀರ ಗಾಯ

ಕುಡ್ಲೆ, ಓಂ ಕಡಲ ತೀರಗಳು ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ(Mahabaleshwar temple) ಹಿಂದುಗಳ ಪವಿತ್ರ ಸ್ಥಳದಲ್ಲಿ ಒಂದಾಗಿದೆ. ಹೀಗಾಗಿ ಇಲ್ಲಿಗೆ ಪೂಜೆ ಪುನಸ್ಕಾರಕ್ಕೆ ಆಗಮಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಜತೆಗೆ ಗೋಕರ್ಣದ ಕಡಲ ತೀರದಲ್ಲಿ ಜಲಸಾಹಸಿ ಕ್ರೀಡೆಗಳು ಕೂಡ ಇರುವುದರಿಂದ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ.

ಮುರುಡೇಶ್ವರ ಪೌರಾಣಿಕತೆಯ ಜತೆಗೆ ಆಧುನಿಕತೆ ಸೇರಿಕೊಂಡಿದೆ. ಸರ್ಕಾರ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಜಲಸಾಹಸಿ ಕ್ರೀಡೆ, ಸ್ಕೂಬಾ ಡೈವಿಂಗ್‌ ಇಲ್ಲಿನ ನಡೆಯುವುದರಿಂದ ವ್ಯಾಪಕವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ದಾಂಡೇಲಿಯಲ್ಲಿ ನಿಸರ್ಗದತ್ತವಾಗಿ ಬಂದ ಅರಣ್ಯ ಪ್ರದೇಶವಿದ್ದು, ಇಲ್ಲಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಚಾರಣ, ಫೈರ್‌ ಕ್ಯಾಂಪ್‌ ಒಳಗೊಂಡು ವಿವಿಧ ಚಟುವಟಿಕೆಗಳನ್ನು ಇಷ್ಟಪಡುವವರು ಸಾಕಷ್ಟುಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಜಿಲ್ಲೆಯಲ್ಲಿ ಪ್ರಕೃತಿದತ್ತವಾದ ಸಾಕಷ್ಟುಪ್ರವಾಸಿತಾಣಗಳಿದ್ದು, ಆದರೆ ಪ್ರವಾಸಿಗರ ಪಾಲಿಗೆ ಇವುಗಳು ಅಗೋಚರವಾಗಿದೆ. ಪ್ರವಾಸೋದ್ಯಮದಲ್ಲಿ ಇನ್ನಷ್ಟುಅಭಿವೃದ್ಧಿಯಾದರೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಮತ್ತಷ್ಟುಅಧಿಕವಾಗಲಿದೆ.

ಅರೆಬರೆ ಉಡುಪು ಧರಿಸಿ ಸಂಚರಿಸಬೇಡಿ: ಗೋಕರ್ಣ ಮಹಾಬಲೇಶ್ವರ ದೇಗುಲ ಸಮಿತಿಯ ವಿವಾದಿತ ಬ್ಯಾನರ್..!

ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳ ಕುರಿತು ಸಾಕಷ್ಟುಪ್ರಚಾರ ಮಾಡಿದೆ. ವೆಬ್‌ಸೈಟ್‌ ತೆರೆಯಲಾಗಿದೆ. ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಷ್ಟ್ರೀಯ ಮಟ್ಟದಲ್ಲೂ ಪ್ರಚಾರ ನೀಡಲಾಗಿದೆ. ಹೀಗಾಗಿ ಈ ಬಾರಿ ಪ್ರವಾಸಿಗರು ಹೆಚ್ಚು ಆಗಮಿಸಿದ್ದಾರೆ.

ಜಯಂತ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ

ಪ್ರವಾಸಿಗರ ಹಾಟ್‌ಸ್ಪಾಟ್‌ ಉತ್ತರಕನ್ನಡ

2017ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 15,504, 2018ರಲ್ಲಿ 15,392, 2019ರಲ್ಲಿ 16,446, 2020ರಲ್ಲಿ 3,367, 2021ರಲ್ಲಿ 392, 2022 ಜನವರಿಯಿಂದ ಅಕ್ಟೋಬರ್‌ವರೆಗೆ ಕೇವಲ 4666 ವಿದೇಶಿ ಪ್ರವಾಸಿಗರು ಆಗಮಿಸಿದ್ದರು. 2017ರಲ್ಲಿ 24,60,006, 2018ರಲ್ಲಿ 43,90,189, 2019ರಲ್ಲಿ 48,77,058, 2020ರಲ್ಲಿ 18,53,665, 2021ರಲ್ಲಿ 35,19,161, 2022ರಲ್ಲಿ 76,48,845 ಭಾರತೀಯ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದಾರೆ.

Follow Us:
Download App:
  • android
  • ios