ಹೊಸಪೇಟೆಗೆ ಹೊಸ ಸಕ್ಕರೆ ಕಾರ್ಖಾನೆ ಸಿಹಿ: ಕಬ್ಬು ಬೆಳೆಗಾರರು ಫುಲ್ ಖುಷಿ

ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ ಎಂಬ ಗುಲ್ಲನ್ನು ವಿಜಯನಗರ ಕ್ಷೇತ್ರಾದ್ಯಂತ ಹರಿಬಿಡಲಾಗಿತ್ತು. ಇದಕ್ಕೆ ಈಗ ಪ್ರತ್ಯಾಸ್ತ್ರ ಎಂಬಂತೆ ಆನಂದ ಸಿಂಗ್‌ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರದಿಂದ ಪರವಾನಗಿ ಪಡೆದಿದ್ದಾರೆ. ಜತೆಗೆ ಸಚಿವ ಸಂಪುಟದಲ್ಲೂ ಒಪ್ಪಿಗೆ ದೊರೆತಿದೆ!

New sugar factory in  Hospet Sweet Sugarcane growers are happy at bellary rav

ಕೃಷ್ಣ ಎನ್‌. ಲಮಾಣಿ

 ಹೊಸಪೇಟೆ (ಮಾ.10) : ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ ಎಂಬ ಗುಲ್ಲನ್ನು ವಿಜಯನಗರ ಕ್ಷೇತ್ರಾದ್ಯಂತ ಹರಿಬಿಡಲಾಗಿತ್ತು. ಇದಕ್ಕೆ ಈಗ ಪ್ರತ್ಯಾಸ್ತ್ರ ಎಂಬಂತೆ ಆನಂದ ಸಿಂಗ್‌ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರದಿಂದ ಪರವಾನಗಿ ಪಡೆದಿದ್ದಾರೆ. ಜತೆಗೆ ಸಚಿವ ಸಂಪುಟದಲ್ಲೂ ಒಪ್ಪಿಗೆ ದೊರೆತಿದೆ!

ಎದುರಾಳಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದರಲ್ಲಿ ಸದಾ ಮುಂದಿರುವ ಆನಂದ ಸಿಂಗ್‌, ಸಕ್ಕರೆ ಕಾರ್ಖಾನೆ ದಾಳ ಉರುಳಿಸಿ; ಅವರನ್ನು ರಾಜಕೀಯವಾಗಿ ಹಣಿಯಲು ರಾಜಕೀಯ ಪಕ್ಷಗಳು ತಂತ್ರ ರೂಪಿಸಿದ್ದವು. ಇದಕ್ಕೆ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮಾಲೀಕರಾದ ಸಿದ್ದಾರ್ಥ ಮೊರಾರ್ಕ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಮತ್ತು ಕಾರ್ಖಾನೆ ಕಾರ್ಮಿಕ ಸಂಘಟನೆಗಳಿಂದಲೂ ಸ್ಪಷ್ಟೀಕರಣ ಕೊಡಿಸಲಾಗಿತ್ತು. ಆದರೂ ಸಕ್ಕರೆ ಕಾರ್ಖಾನೆ ಮುಚ್ಚಿಸಲಾಗಿದೆ ಎಂಬ ವಿಷಯ ಹೊಗೆಯಾಡುತ್ತಿತ್ತು. ಇದಕ್ಕೆ ಪ್ರತಿತಂತ್ರ ಹೆಣೆದ ಆನಂದ ಸಿಂಗ್‌ ತಮ್ಮ ಕ್ಷೇತ್ರಕ್ಕೆ ಹೊಸ ಕಾರ್ಖಾನೆಯನ್ನೇ ತಂದಿದ್ದಾರೆ. ಈ ಮೂಲಕ ರೈತರಿಗೆ ಉಡುಗೊರೆ ನೀಡಿದ್ದಾರೆ!.

ಹೊಸಪೇಟೆಯಿಂದ ಸಿದ್ದು ಕಣಕ್ಕಿಳಿದರೆ ಹೊಲ ಮಾರಿ 1 ಕೋಟಿ ನೀಡುವೆ: ಅಭಿಮಾನಿಯ ಆಫರ್‌

ಕಬ್ಬು ಬೆಳೆಗಾರರಿಗೆ ಅನುಕೂಲ:

ಹೊಸಪೇಟೆಯ ಚಿತ್ತವಾಡ್ಗಿಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಶಿಥಿಲಾವಸ್ಥೆಗೆ ತಲುಪಿ, ಕಬ್ಬು ನುರಿಸಲು ಆಗದೇ 2014- 15ನೇ ಸಾಲಿನಲ್ಲಿ ಸ್ಥಗಿತಗೊಂಡಿತು. ಈ ಕಾರ್ಖಾನೆ ಬಂದ್‌ ಆಗಿದ್ದರಿಂದ ರೈತರು ಹೊರ ಜಿಲ್ಲೆ ಕಾರ್ಖಾನೆ ಮೇಲೆ ಅವಲಂಬಿತರಾಗಿದ್ದರು. ಇದರಿಂದ ರೈತರಿಗೆ ಉತ್ತಮ ದರ ಸಿಗುತ್ತಿರಲಿಲ್ಲ. ಈ ಭಾಗದಲ್ಲಿ ವಾರ್ಷಿಕ 5ರಿಂದ 6 ಲಕ್ಷ ಟನ್‌ ಕಬ್ಬು ಬೆಳೆಯಲಾಗುತ್ತದೆ. ಈ ಕಬ್ಬನ್ನು ಮುಂಡರಗಿ ಕಾರ್ಖಾನೆ ಮತ್ತು ಶಾಮನೂರು ಶುಗ​ರ್‍ಸ್ಗೆ ಸಾಗಿಸಲಾಗುತ್ತಿತ್ತು. ಈಗ ಹೊಸಪೇಟೆಯ ಜಂಬುನಾಥನಹಳ್ಳಿಯಲ್ಲೇ ಹೊಸ ಕಾರ್ಖಾನೆ ತಲೆ ಎತ್ತಲಿರುವುದರಿಂದ ರೈತರು ಸಂಕಷ್ಟದಿಂದ ಪಾರಾಗುವ ದಿನಗಳು ದೂರ ಇಲ್ಲ.

ಹಂಪಿ ಶುಗರ್ಸ್‌ ಕಾರ್ಖಾನೆ:

ಹೊಸಪೇಟೆಯ ಜಂಬುನಾಥಹಳ್ಳಿ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಹಂಪಿ ಶುಗರಸ್‌ ಪ್ರೈ. ಲಿ. ಹೆಸರಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗಲಿದೆ. ಈ ಕಾರ್ಖಾನೆ ಆರಂಭಕ್ಕೆ ಸರ್ಕಾರ ಮಟ್ಟದಲ್ಲಿ ಸಚಿವ ಆನಂದ ಸಿಂಗ್‌ ಚರ್ಚಿಸಿ ಪರವಾನಗಿ ಪಡೆದಿದ್ದಾರೆ. ಈ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

82 ಎಕರೆಯಲ್ಲಿ ತಲೆ ಎತ್ತಲಿದೆ ಕಾರ್ಖಾನೆ:

ದಾವಣಗೆರೆ ಲೋಕಸಭೆ ಸದಸ್ಯ ಜಿ.ಎಂ. ಸಿದ್ದೇಶ್ವರ ಗ್ರೂಫ್ಸ್‌ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಿದೆ. .454.60 ಕೋಟಿ ಹೂಡಿಕೆಯಲ್ಲಿ ಜಂಬುನಾಥನಹಳ್ಳಿ ಪ್ರದೇಶದಲ್ಲಿ 82 ಎಕರೆ ಪ್ರದೇಶದಲ್ಲಿ ಈ ಕಾರ್ಖಾನೆ ನಿರ್ಮಾಣವಾಗಲಿದೆ. ಈಗಾಗಲೇ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಲ್ಲೂ ಈ ಕಾರ್ಖಾನೆ ಮಾಲೀಕರು ಹೊಸಪೇಟೆಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು ಆಸಕ್ತಿ ವಹಿಸಿ, ಸರ್ಕಾರದ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಹಲವು ಬಾರಿ ಹೊಸಪೇಟೆಗೆ ಆಗಮಿಸಿ, ಜಂಬುನಾಥನಹಳ್ಳಿ ಪ್ರದೇಶದಲ್ಲಿರುವ 82 ಎಕರೆ ಸರ್ಕಾರಿ ಜಾಗವನ್ನು ಕೂಡ ಕಾರ್ಖಾನೆ ಆಡಳಿತ ಮಂಡಳಿಯವರು ನೋಡಿಕೊಂಡು ಹೋಗಿದ್ದಾರೆ. ಈ ಕಾರ್ಖಾನೆಗೆ ಶೀಘ್ರವೇ ಭೂಮಿಪೂಜೆ ನೆರವೇರಲಿದೆ.

ವಿಜಯನಗರ: ನಾಲ್ಕು ಬಾರಿ ಗೆದ್ದದ್ದಾಯ್ತು, ಈ ಸಲ ಮಗನನ್ನ ಕಣಕ್ಕಿಳಿಸ್ತಾರಾ ಆನಂದ್‌ ಸಿಂಗ್‌?

ಹೊಸಪೇಟೆಯ ಜಂಬುನಾಥನಹಳ್ಳಿ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಗೊಂಡರೆ, ರೈತರ ಬಹುವರ್ಷಗಳ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಆನಂದ ಸಿಂಗ್‌, ಪ್ರವಾಸೋದ್ಯಮ ಸಚಿವರ

Latest Videos
Follow Us:
Download App:
  • android
  • ios