Asianet Suvarna News Asianet Suvarna News

ಹೊಸ ಆದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ

ಬಾಕಿ ಇರುವ ಮುಂಬಡ್ತಿ ಹಾಗೂ ಅನುಕಂಪದ ನೇಮಕಾತಿ ಹೊಸ ಆದೇಶದಿಂದ ಸಾವಿರಾರು ಅಂಗನವಾಡಿ ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

New order unfair to Anganwadi workers snr
Author
First Published Jan 8, 2023, 6:18 AM IST

 ತುಮಕೂರು :  ಬಾಕಿ ಇರುವ ಮುಂಬಡ್ತಿ ಹಾಗೂ ಅನುಕಂಪದ ನೇಮಕಾತಿ ಹೊಸ ಆದೇಶದಿಂದ ಸಾವಿರಾರು ಅಂಗನವಾಡಿ ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶನಗಳಿಗೆ ಸಂಬಂದಿಸಿ ಡಿ.3 ರಂದು ಪರಿಷ್ಕತ ಅಯ್ಕೆ ಮಾರ್ಗ ಸೂಚಿಗಳನ್ನು ಮಾಡಲಾಗಿದೆ. ಇದರಿಂದ ಈ ಹಿಂದೆ 23-09-2017, ಮತ್ತು 19-01-2019 ರ ತಿದ್ದುಪಡಿ ಮಾರ್ಗಸೂಚಿಗಳಲ್ಲಿ ಎಸ್‌ಎಸ್‌ಎಲ್‌ಸಿ ಪಾಸದ ಮತ್ತು ಅನುಭವದ ಇರುವ ಅಂಗನವಾಡಿ ಸಹಾಯಕಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರ ಮುಂಬಡ್ತಿಗೆ ಅನ್ವಯವಾಗುತ್ತಿದೆ. ಹಾಗಾಗಿ ಪರಿಷ್ಕತ ಅದೇಶವನ್ನು ಅನ್ವಯಿಸಬಾರದು ಎಂದು ಬೇಡಿಕೆಯೋಂದಿಗೆ ನೂರಾರು ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್‌ ವರಲಕ್ಷ್ಮಿ ಮಾತನಾಡಿ, ಹೊಸ ಅದೇಶದಿಂದ. ಸಾವಿರಾರು ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯವಾಗುತ್ತಿದೆ. ಅದ್ದರಿಂದ ಪರಿಷ್ಕೃತ ಅದೇಶವನ್ನು ತಿದ್ದುಪಡಿ ಮಾಡಬೇಕು ಮತ್ತು ವಯೋಮಿತಿ ಆಧಾರದಲ್ಲಿ ಮುಂಬಡ್ತಿ ನೀಡಬೇಕು. ಕೇಂದ್ರ ಸರ್ಕಾರÊ 01-08-2022 ರಿಂದ ಸಕ್ಷಮ್‌ ಅಂಗನವಾಡಿ ಕೇಂದ್ರಗಳ ಮಾರ್ಗಸೂಚಿಯನ್ನು ನೀಡಿದೆ. ಈ ಮಾರ್ಗ ಸೂಚಿಗಳನ್ನು ಭಾರತದ ಇತರೆ ಯಾವ ರಾಜ್ಯಗಳಲ್ಲಿಯು ಅಳವಡಿಸಿಲ್ಲ, ಅದರೆ ಕರ್ನಾಟಕ ಸರ್ಕಾರ ಇದರ ಸಾಧಕ - ಭಾಧಕಗಳನ್ನು ಪರಿಶಿಲಿಸದೆ ತಕ್ಷಣವೆ ಜಾರಿಮಾಡಲು ಹೊರಟಿರುವುದು ಯಾಕಾಗಿ ಎಂದು ಪ್ರಶ್ನಿಸಿದರು .

ಸಂಘದ ಜಿಲ್ಲಾ ಪ್ರಧಾನ ಕಾಯದರ್ಶಿ ಗುಲ್ಜಾರ್‌ ಬಾನು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಆರ್ಹತೆಯಿರುವ ಸಹಾಯಕಿರಯರು ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2 ವರ್ಷಗಳಿಂದ ಮುಂಬ್ತಡಿ ಕೊಟ್ಟಿಲ್ಲ, ಅನುಕಂಪದ ಅಧಾರದ ನೇಮಕಾತಿ ಸಹ ವರ್ಷಗಟ್ಟಲೆ ಅಲಿಸಿ ಈ ಹೊಸ ಅದೇಶ ಎಂದು ಹೇಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷೆ ಕಮಲ ಮತ್ತು ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್‌ ಮುಜೀಬ್‌ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಖಜಾಂಚಿ ಅನುಸೂಯ, ತುರುವೆಕೇರ ತಾಲೂಕು ಅಧ್ಯಕ್ಷೆ, ವಸಂತ ಕುಮಾರಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌. ಕೆ ಸುಬ್ರಮಣ್ಯ ಮಾತನಾಡಿದರು. ತಿಪಟೂರಿನ ಮಮತ, ಗುಬ್ಬಿ ತಾಲೂಕು ಅಧ್ಯಕ್ಷೆ ಅನಸೂಯ, ಪಾವಗಡ ತಾಲೂಕಿನ ಶಿವಗಂಗಮ್ಮ, ಕೊರಟಗೆರೆ ನಾಗರತ್ನ ಇದ್ದರು.

ಪಟ್ಟುಬಿಡದ ಪ್ರತಿಭಟನಾಕಾರರು

ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀಧರ್‌ ಅವರು ಮನವಿ ಪತ್ರ ಸ್ವಿಕರಿಸಿ ಪ್ರತಿಭಟನೆ ಕೈಬಿಡಲು ಸೂಚಿಸಿದರು ಒಪ್ಪದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸಿದರು. ರಾಜ್ಯ ಅಧ್ಯಕ್ಷ ಎಸ್‌.ವರಲಕ್ಷ್ಮಿ ಅವರು, ರಾಜ್ಯದ ನಿರ್ದೇಶನ ಬರದ ಹೊರತು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಸ್ಪಷ್ಟಿಕರಣ ನೀಡಿದ ನಂತರ ಪ್ರತಿಭಟನೆ ಹಿಂಪಡೆದುಕೊಂಡರು.

Follow Us:
Download App:
  • android
  • ios