ಬೆಂಗಳೂರು: ನೂತನ ವರ್ಷಕ್ಕೆ ಬರಲಿದೆ ಹೊಸ ಮೆಟ್ರೋ ರೈಲು

ಬಿಎಂಆರ್‌ಸಿಎಲ್ 2019ರಲ್ಲೇ ಚೀನಾದ ಸಿಆರ್‌ಆರ್‌ಸಿ ಕಂಪನಿ ಜೊತೆಗೆ ನೇರಳೆ, ಹಸಿರು ಮಾರ್ಗಕ್ಕೆ 21 ರೈಲು ಮತ್ತು ಹಳದಿ ಮಾರ್ಗಕ್ಕಾಗಿ 15 ಸೇರಿ ಒಟ್ಟೂ 36 ರೈಲುಗಳನ್ನು ಪೂರೈಸುವಂತೆ ಒಪ್ಪಂದ ಮಾಡಿ ಕೊಂಡಿತ್ತು. ಸಿಆರ್‌ಆರ್‌ಸಿ ಭಾರತದ ಟಿಆರ್ ಎಎಲ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡು ರೈಲುಗಳನ್ನು ಪೂರೈಸುತ್ತಿದೆ. 

New Metro Train will come in the New Year 2025 in Bengaluru grg

ಬೆಂಗಳೂರು(ಡಿ.21):  ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕಾಗಿ ಚೀನಾ ದಿಂದ ಪ್ರೊಟೋಟೈಪ್ (ಮೂಲಮಾದರಿ) ರೈಲು ಜನವರಿ 10ರ ವೇಳೆಗೆ ಪೀಣ್ಯ ಡಿಪೋ ತಲುಪಲಿದ್ದು, ಕೆಲ ದಿನಗಳ ಕಾಲ ವಿವಿಧ ತಪಾಸಣೆಗೆ ಒಳಪಟ್ಟು ಬಳಿಕ ಹಳಿಗಿಳಿಯಲಿದೆ. ರೈಲುಗಳ ಕೊರತೆ ಸಮಸ್ಯೆ ನಿವಾರಣೆಯಾಗಲಿದ್ದು, ಸದಾ ಗಿಜಿಗುಟ್ಟುವ ನಿಲ್ದಾಣ, ರೈಲಿಗೆ ಕಾಯುವಿಕೆ, ಜನದಟ್ಟಣೆ ನಿವಾರಣೆ ಆಗಬಹುದು. ಹೊಸ ರೈಲುಗಳ ಬರುವಿಕೆ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಸಿಕ್ಕಂತಾಗಿದೆ. 

ಪೀಣ್ಯ ಡಿಪೋ ತಲುಪುವ ಬೋಗಿಗಳನ್ನು ಜೋಡಿಸಿ ರೈಲು ರೂಪಿಸಿಕೊಳ್ಳುತ್ತೇವೆ. ಡಿಟಿಜಿ (ಡಿಸ್ಟೆನ್ಸ್ ಟು ಗೋ) ತಂತ್ರಜ್ಞಾನದ ರೈಲಾದರೂ ಹೊಸ ಕಂಪನಿಯಿಂದ ಬರುತ್ತಿ ರುವ ಈ ರೈಲುಗಳನ್ನು ಮುಖ್ಯ ಟ್ರ್ಯಾಕ್‌ಗೆ ತರುವ ಮುನ್ನ ವಿವಿಧ ತಪಾಸಣೆಗೆ ಒಳಪಡಿ ಸಬೇಕಾಗುತ್ತದೆ. ರಾತ್ರಿ ವೇಳೆ ಪ್ರಾಯೋಗಿಕ ಸಂಚಾರ ನಡೆಸಲಿದ್ದೇವೆ. ಬಳಿಕ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯಿಂದ (ಆರ್‌ಡಿಎಸ್‌ಒ) ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಬಳಿಕ ವಾಣಿಜ್ಯ ಸಂಚಾರ ಆರಂಭಿಸಲಾಗುವುದು. 

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಸಂಚಾರ ಇನ್ನಷ್ಟು ತಡ, ಟೆಕ್ಕಿಗಳಿಗೆ ಭಾರೀ ನಿರಾಸೆ!

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನೇರಳೆ (43.49ಕಿಮೀ), ಹಸಿರು ( 33.5 ಕಿಮೀ) ಸೇರಿ ಪ್ರಸ್ತುತ 77 ಕಿಮೀ ಮೆಟ್ರೋ ಮಾರ್ಗ ನಿರ್ವಹಿಸುತ್ತಿದೆ. ಪ್ರಸ್ತುತ ನೇರಳೆಗೆ 33, ಹಸಿರು ಮಾರ್ಗಕ್ಕೆ 24 ಸೇರಿ 57 ರೈಲುಗಳಿವೆ. 5 ರೈಲುಗಳನ್ನು ನಿರ್ವ ಹಣೆಗೆ ಮೀಸಲಿಟ್ಟು 52 ರೈಲುಗಳು ಮಾತ್ರ ಪ್ರತಿನಿತ್ಯ ವಾಣಿಜ್ಯ ಸಂಚಾರ ನಡೆಸುತ್ತಿವೆ. 2021ರ ವೇಳೆಗೆ ಮೆಟ್ರೋಗೆ ಹೆಚ್ಚುವರಿ 20 ರೈಲು ಸೇರ್ಪಡೆ ಆಗಬೇಕಿತ್ತು. ಹೊಸ ರೈಲು ವಿಳಂಬವಾದ ಕಾರಣ ರೈಲು ಕೊರ ತೆಯಿಂದ ಪ್ರಯಾಣಿಕರು ತೊಂದರೆಗೀಡಾಗಿದ್ದರು. 

2019ರಲ್ಲೇ 36 ರೈಲು ಪೂರೈಕೆ ಒಪ್ಪಂದ: 

ಬಿಎಂಆರ್‌ಸಿಎಲ್ 2019ರಲ್ಲೇ ಚೀನಾದ ಸಿಆರ್‌ಆರ್‌ಸಿ ಕಂಪನಿ ಜೊತೆಗೆ ನೇರಳೆ, ಹಸಿರು ಮಾರ್ಗಕ್ಕೆ 21 ರೈಲು ಮತ್ತು ಹಳದಿ ಮಾರ್ಗಕ್ಕಾಗಿ 15 ಸೇರಿ ಒಟ್ಟೂ 36 ರೈಲುಗಳನ್ನು ಪೂರೈಸುವಂತೆ ಒಪ್ಪಂದ ಮಾಡಿ ಕೊಂಡಿತ್ತು. ಸಿಆರ್‌ಆರ್‌ಸಿ ಭಾರತದ ಟಿಆರ್ ಎಎಲ್ (ಕಲ್ಕತ್ತಾದ ರೈಲು ತಯಾರಿಕಾ ಕಂಪನಿ) ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡು ರೈಲುಗಳನ್ನು ಪೂರೈಸುತ್ತಿದೆ. 

ಈ ವರ್ಷದ ಆಗಸ್ಟ್ ವೇಳೆಗೆ ಪ್ರೋಟೋಟೈಪ್ ರೈಲು ಬರಬೇಕಿತ್ತು. ಆದರೆ, 5 ತಿಂಗಳ ವಿಳಂ ಬದ ಬಳಿಕ ಈ ರೈಲು ಬರುತ್ತಿದೆ. ಪಾಲುದಾರಿಕೆ ಒಪ್ಪಂದದಂತೆ ಉಳಿದ 20 ರೈಲುಗಳನ್ನು ಟಿಆರ್‌ಎಸ್‌ಎಲ್ ಪೂರೈಸಲಿದೆ. ಇವು ಜನವರಿಗೆ ಒಂದು-ಎರಡರಂತೆ ನಮ್ಮ ಮೆಟ್ರೋಗೆ ಸೇರ್ಪಡೆ ಆಗಲಿದ್ದು, ನೇರಳೆ, ಹಸಿರು ಮಾರ್ಗದಲ್ಲಿ ಸಂಚರಿಸಲಿವೆ. 

ಯಾವುದೇ ಹೊಸ ಕಂಪನಿಯಿಂದ ರೈಲು ಬಂದರೂ ಅದನ್ನು ತಪಾಸಣೆ ಮಾಡಿಕೊಳ್ಳಬೇಕು. ನೇರಳೆ ಮಾರ್ಗಕ್ಕೆ ಬಂದ ರೈಲನ್ನು ಪ್ರಾಯೋಗಿಕ ಸಂಚಾರ ನಡೆಸಿ, ಆರ್‌ಡಿಎಸ್‌ಒ ಅನುಮತಿ ಪಡೆದು ಸಂಚರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಸಿಪಿಆರ್‌ ಯಶವಂತ ಚೌಹಾಣ್ ತಿಳಿಸಿದ್ದಾರೆ.  

ಮೆಟ್ರೋಗೆ ದನಿ ನೀಡುವಾಗ್ಲೇ ಟೈಮ್ ಬಾಂಬ್‌ ಇರೋದು ಗೊತ್ತಿತ್ತು, ವಿಗ್‌ ಧರಿಸಿದ್ಲು; ಅಪರ್ಣಾರ ನೆನೆದ ನಾಗರಾಜ್ ವಸ್ತಾರೆ

ಜ.15ಕ್ಕೆ ಹಳದಿ ಮಾರ್ಗಕ್ಕೆ 2ನೇ ರೈಲು 

ಹಳದಿ ಮಾರ್ಗಕ್ಕೆ ಟಿಆರ್‌ಎಸ್ಎಸ್ಎಲ್ ಕಂಪನಿ ತನ್ನ ಮೊದಲ ರೈಲನ್ನು (ಬೋಗಿಗಳು) ಕಳಿಸಿದ್ದು ಇದು ಕೂಡ ಜನವರಿ 15ರ ವೇಳೆಗೆ ಹೆಬ್ಬಗೋಡಿ ಮೆಟ್ರೊ ಡಿಪೋವನ್ನು ತಲುಪಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. 

ಈಗಾಗಲೇ ಈ ಮಾರ್ಗಕ್ಕಾಗಿ ಫೆಬ್ರವರಿಯಲ್ಲಿ ಚೀನಾದಿಂದ ಚಾಲಕ ರಹಿತವಾಗಿಯೂ ಸಂಚರಿಸಬಹುದಾದ ಪ್ರೊಟೋಟೈಪ್ ರೈಲು ಬಂದಿದೆ. ಸಿಬಿಟಿಸಿ (ಕಮ್ಯೂನಿಕೇಶನ್ಸ್ ಬೇಸ್ಟ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನದಿಂದ ಸಂಚರಿಸಲಿದೆ. ಕಾ ಮೂರನೇ ರೈಲು ಬಂದ ಬಳಿಕ ಸಿಎಂಆರ್‌ಎಸ್, ರೈಲ್ವೆ ಮಂಡಳಿಯ ಒಪ್ಪಿಗೆ ಪಡೆದು 13 ನಿಮಿಷಕ್ಕೊಂದರಂತೆ ಆವರ್ತನದಲ್ಲಿ ವಾಣಿಜ್ಯ ಸಂಚಾರ ಆರಂಭಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

Latest Videos
Follow Us:
Download App:
  • android
  • ios