ಪೊದೆಯೊಂದರಲ್ಲಿ ನವಜಾತ‌ ಹೆಣ್ಣು ಶಿಶುವಿನ ಶವ ಪತ್ತೆ ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದ ಬಳೆಪೇಟೆ - ವೈ.ಕೆ.ಮೊಳೆಗೆ ಹೋಗುವ ಹೆದ್ದಾರಿಯಲ್ಲಿ ಪತ್ತೆ

ಚಾಮರಾಜನಗರ (ಆ.29): ಪೊದೆಯೊಂದರಲ್ಲಿ ನವಜಾತ‌ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. 

ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದ ಬಳೆಪೇಟೆ - ವೈ.ಕೆ.ಮೊಳೆಗೆ ಹೋಗುವ ಹೆದ್ದಾರಿಯಲ್ಲಿ ಶಿಶುವಿನ ಶವ ಇಂದು ಸಾರ್ವಜನಿಕರಿಗೆ ಕಂಡು ಬಂದಿದೆ. 

ಹಾವೇರಿ: 108 ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಹುಟ್ಟಿದ ಕೂಡಲೇ ನವಜಾತ ಹೆಣ್ಣು ಶಿಶುವನ್ನು ಪೊದೆಯಲ್ಲಿ ಎಸೆದು ಹೋಗಿದ್ದಾರೆ. ಶನಿವಾರ ರಾತ್ರಿ ವೇಳೆ ಮಗು ಜನಿಸುವ ಸಾಧ್ಯತೆ ಇದೆ. 

ಗಾಳಿ ಚಳಿಯಲ್ಲಿ ಮಗುವನ್ನು ಹೊಕ್ಕಳ ಬಳ್ಳಿಯನ್ನೂ ಕತ್ತರಿಸದೇ ಎಸೆದು ಹೊಗಿದ್ದು, ಮಗು ಮೃತಪಟ್ಟಿದೆ. ರಾತ್ರಿಯೇ ಮಗುವನ್ನು ಎಸೆದು ಹೋಗಿರುವ ಕಾರಣ, ಮೃತಪಟ್ಟಿರುವ ಸಾಧ್ಯತೆ ಇದೆ. 

ಸ್ಥಳಕ್ಕೆ ಚಾಮರಾಜನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.