ನೂತನ ಅನುಭವ ಮಂಟಪ ನಿರ್ಮಾಣ ಕಲ್ಯಾಣ ಪರ್ವದ ಕೊಡುಗೆ: ಡಾ. ಮಾತೆ ಗಂಗಾದೇವಿ

ಶರಣರ ಈ ಕಾಯಕ ಭೂಮಿ ಅಭಿವೃದ್ಧಿ ಹೊಂದುವ ಮೂಲಕ 12ನೇ ಶತಮಾನದ ಗತ ವೈಭವ ಮತ್ತೆ ಕಾಣಬೇಕು ಎನ್ನುವುದೇ ಕಲ್ಯಾಣ ಪರ್ವದ ಮೂಲ ಆಶಯವಾಗಿದೆ ಎಂದ ಡಾ. ಮಾತೆ ಗಂಗಾದೇವಿ 

New Anubhav Mantapa Construction Kalyan Parva Contribution Dr Mate Mahadevi grg

ಬಸವಕಲ್ಯಾಣ(ಅ.09):  ಕಲ್ಯಾಣ ಪರ್ವ ಕಾರ್ಯಕ್ರಮದ ಪ್ರಭಾವದಿಂದಲೇ ಇಲ್ಲಿ ಸರ್ಕಾರದಿಂದ ಬಿಕೆಡಿಬಿ ರಚಿಸಿ ಶರಣ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಮುಂದಾಯಿತು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಡಾ. ಮಾತೆ ಗಂಗಾದೇವಿ ತಿಳಿಸಿದರು.

ಅವರು ನಗರದ ಹೊರವಲಯದ ಬಸವ ಮಹಾಮನೆಯಲ್ಲಿ ಆಯೋಜಿಸಿದ್ದ 21ನೇ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಧರ್ಮ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ಈ ಕಾಯಕ ಭೂಮಿ ಅಭಿವೃದ್ಧಿ ಹೊಂದುವ ಮೂಲಕ 12ನೇ ಶತಮಾನದ ಗತ ವೈಭವ ಮತ್ತೆ ಕಾಣಬೇಕು ಎನ್ನುವುದೇ ಕಲ್ಯಾಣ ಪರ್ವದ ಮೂಲ ಆಶಯವಾಗಿದೆ ಎಂದರು. 12ನೇ ಶತಮಾನದಲ್ಲಿ ಶರಣರು ವರ್ಷಕ್ಕೊಮ್ಮೆ ಗಣ ಪರ್ವ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಅದು ನಿಂತ ನಂತರ ಅಂದು ನಡೆಯುತ್ತಿದ್ದ ಗತ ವೈಭವದ ಗಣ ಪರ್ವ 21ನೇ ಶತಮಾನದಲ್ಲಿ ಕಲ್ಯಾಣ ಪರ್ವದ ರೂಪದಲ್ಲಿ ಮತ್ತೆ ಆರಂಭವಾಗಿದೆ. ಎರಡು ದಶಕಗಳ ಹಿಂದೆ ಲಿಂ. ಮಾತೆ ಮಹಾದೇವಿ ಅವರು ಕಲ್ಯಾಣ ಪರ್ವ ಆಚರಣೆಗೆ ಮುಂದಾಗುವ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ಸ್ಮರಿಸಿದರು.

ಮದರಸಾದಲ್ಲಿ ಭವಾನಿ ಪೂಜೆ, ಹಳೇ ಸಂಪ್ರದಾಯ: ರಾಮಕೃಷ್ಣ

ಕಾರ್ಯಕ್ರಮವನ್ನು ಉದ್ಘಾಟಿಸಿ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ್‌ ಮಾತನಾಡಿ, ಲಿಂ.ಮಾತೆ ಮಹಾದೇವಿ ಅವರು ಆರಂಭಿಸಿರುವ ಕಲ್ಯಾಣ ಪರ್ವಕ್ಕ ಸರ್ಕಾರದಿಂದ ನಯಾ ಪೈಸೆ ನೀರಿಕ್ಷಿಸದೇ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ 112 ಅಡಿ ಬಸವ ಪುತ್ಥಳಿಗೆ ಅನುದಾನ ಕಲ್ಪಿಸಲು ಒತ್ತಾಯಿಸಿ ಪಕ್ಷಾತೀತವಾಗಿ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡೊಡೊಣ ಎಂದರು.

ಆಳಂದನ ಮಾಜಿ ಶಾಸಕ ಬಿ. ಆರ್‌ ಪಾಟೀಲ್‌, ಬೆಳಗಾವಿಯ ನಾಗನೂರನ ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ, ಬೀದರ್‌ನ ಕಲ್ಯಾಣ ಕರ್ನಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀ, ಹಿರಿಯ ಸಾಹಿತಿ ಸೋಮನಾಥ ಯಾಳವಾರ, ಚಿಂತಕ ಡಾ. ಅಮರನಾಥ ಸೋಲಪೂರೆ, ಮತ್ತಿತರರು ಮಾತನಾಡಿದರು.

ಮಹಾರಾಷ್ಟ್ರ ಅಲ್ಲಮಗಿರಿ ಅಲ್ಲಮಪ್ರಭು ಯೋಗ ಪೀಠದ ಪೀಠಾಧ್ಯಕ್ಷ ಜಗದ್ಗುರು ಬಸವಕುಮಾರ ಸ್ವಾಮೀಜಿ, ಧಾರವಾಡ ಜಗದ್ಗುರು ಮಾತೆ ಜ್ಞಾನೇಶ್ವರಿ, ಕಲ್ಯಾಣ ಪರ್ವ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಸವಕಲ್ಯಾಣ ಶಾಸಕ ಶರಣು ಸಲಗರ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಆನಂದ ದೇವಪ್ಪ, ಶಿವರಾಜ ನರಶೆಟ್ಟಿ, ಸುನೀಲ ಪಾಟೀಲ್‌, ರೇವಣಸಿದ್ದಪ್ಪ ಜಲಾದೆ ಮತ್ತಿತರರು ಇದ್ದರು. ಹಾಸ್ಯ ಕಲಾದ ನವಲಿಂಗ ಪಾಟೀಲ್‌ ನಿರೂಪಿಸಿದರು.
 

Latest Videos
Follow Us:
Download App:
  • android
  • ios