Gruhalakshmi scheme donation: ಬಾದಾಮಿಯ ನೀಲಮ್ಮ ಹೊಸಮನಿ ಅವರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ലഭಿಸಿದ ಸಹಾಯಧನವನ್ನು ಕೂಡಿಟ್ಟು, ಒಟ್ಟು ₹25,000 ಹಣವನ್ನು ಕನಕ ಪಂಚಮಿ ಕಾರ್ಯಕ್ರಮಕ್ಕೆ ದಾನ ಮಾಡಿದ್ದಾರೆ. ವೈಯಕ್ತಿಕ ಅಗತ್ಯಗಳಿಗಿಂತ ಸಮಾಜಮುಖಿ ಕಾರ್ಯಕ್ಕೆ ಆದ್ಯತೆ ನೀಡಿದ ಮಹಿಳೆ.

ಬಾದಾಮಿ, (ಅ. 27): ಪಟ್ಟಣದ ನೀಲಮ್ಮ ಭೀಮನಗೌಡ ಹೊಸಮನಿ ಅವರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಬರುತ್ತಿದ್ದ ₹2000 ಸಹಾಯಧನವನ್ನು ಕೂಡಿಟ್ಟು ಒಟ್ಟು ₹25,000 ರೂ.ಗಳನ್ನು ಕನಕ ಪಂಚಮಿ ಕಾರ್ಯಕ್ರಮಕ್ಕೆ ದಾನ ನೀಡಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ಗೃಹಲಕ್ಷ್ಮಿ ಹಣದಿಂದ ಟಿವಿ, ಫ್ರಿಜ್ ಖರೀದಿಸದೇ ದಾನ

ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಯರಿಗೆ ತಿಂಗಳಿಗೆ ₹2000 ನೀಡಲಾಗುತ್ತಿದ್ದು, ಬಹುತೇಕ ಮಹಿಳೆಯರು ಈ ಹಣವನ್ನು ಕುಟುಂಬ ನಿರ್ವಹಣೆ ಅಥವಾ ವೈಯಕ್ತಿಕ ಅಗತ್ಯಗಳಿಗೆ ಬಳಸಿಕೊಳ್ಳುತ್ತಾರೆ. ಆದರೆ ನೀಲಮ್ಮ ಅವರು ಈ ಹಣವನ್ನು ಸಮಾಜಮುಖಿ ಕಾರ್ಯಕ್ಕೆ ಮೀಸಲಿಟ್ಟು, ಕನಕ ಪಂಚಮಿ ಕಾರ್ಯಕ್ರಮದ ಸಂಘಟಕರಿಗೆ ಹಸ್ತಾಂತರಿಸಿದ್ದಾರೆ.

ಸರ್ಕಾರದ ಸಹಾಯಧನ ಸಮಾಜಕ್ಕೆ:

ಸರ್ಕಾರದ ಸಹಾಯವನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳದೇ ಸಮಾಜಕ್ಕೆ ಹಿಂತಿರುಗಿಸಿದ್ದಾರೆ. ಈ ದಾನ ಸ್ಥಳೀಯ ಸಮುದಾಯದಲ್ಲಿ ಮೆಚ್ಚುಗೆ ಗಳಿಸಿದ್ದು, ಕನಕ ಪಂಚಮಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾಗಲಿದೆ. ನೀಲಮ್ಮ ಅವರ ಈ ಸಾಮಾಜಿಕ ಕಾಳಜಿ ಇತರರಿಗೆ ಸ್ಫೂರ್ತಿಯಾಗಿದೆ.