Asianet Suvarna News Asianet Suvarna News

ಚಿಕ್ಕಮಗಳೂರು: ಕೆಲಸ, ಕಾರ್ಯ ಬಿಟ್ಟು ನೆಟ್‌ವರ್ಕ್‌ಗೆ ಕಾಯ್ತಿದ್ದಾರೆ ಜನ..!

ದಿನಗೂಲಿ ಮಾಡೋರು, ಅದರಿಂದಲೇ ಜೀವನ ಸಾಗಿಸೋ ಜನ ದಿನಪೂರ್ತಿ ನೆಟ್‌ವರ್ಕ್‌ಗಾಗಿ ಕಾದು ತಮ್ಮ ದಿನವನ್ನೇ ಹಾಳು ಮಾಡುವಂತಹ ಪರಿಸ್ಥಿತಿ ಬಂದಿದೆ. ಚಿಕ್ಕಮಗಳೂರಿನ ಕೊಪ್ಪದ ಜನರು ಕೆಲಸ, ಕಾರ್ಯ ಬಿಟ್ಟು ನೆಟ್‌ವರ್ಕ್ ಬಂತಾ ಅಂತ ಸರ್ಕಾರಿ ಆಸ್ಪತ್ರೆ ಕಚೇರಿಯಲ್ಲಿ ಕುಳಿತಿದ್ದಾರೆ.

Network Problem In Chikkamagaluru
Author
Bangalore, First Published Jul 30, 2019, 10:49 AM IST
  • Facebook
  • Twitter
  • Whatsapp

ಚಿಕ್ಕಮಗಳೂರು(ಜು.30): ಕೊಪ್ಪದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಾಗಿ ಜನ ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ಕಾಯುವಂತಾಗಿದೆ. ದಿನಗೂಲಿ ಬಿಟ್ಟು ನೆಟ್‌ವರ್ಕ್‌ಗಾಗಿ ಕಾಯೋ ಸ್ಥಿತಿ ನಿರ್ಮಾಣವಾಗಿದೆ ಎಂದು ಅನೇಕರು ಅಳಲು ತೋಡಿಕೊಂಡಿದ್ದಾರೆ.

ಬಗೆಹರಿಯುತ್ತಿಲ್ಲ ನೆಟ್‌ವರ್ಕ್‌ ಸಮಸ್ಯೆ:

ಗ್ರಾಮೀಣ ಪ್ರದೇಶದಿಂದ ಆರೋಗ್ಯ ಕಾರ್ಡ್‌ ಮಾಡಲು ಬಂದಿದ್ದು, ಕೂಲಿ ಕೆಲಸ ಬಿಟ್ಟು ದಿನಗಟ್ಟಲೇ ಇಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ನೆಟ್‌ವರ್ಕ್ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತ್ತೆ ಮತ್ತೆ ಬರಬೇಕಾಗುತ್ತದೆ. ದಿನನಿತ್ಯದ ಕಾಯಕ ಮಾಡಿದಲ್ಲಿ ಮಾತ್ರ ಜೀವನ ನಿರ್ವಹಣೆ ಸಾಧ್ಯ. ಇಂಥ ಪರಿಸ್ಥಿತಿಯಲ್ಲಿ ಈಗ ನೆಟ್‌ವರ್ಕ್ ಇಲ್ಲದೇ ಎಲ್ಲದಕ್ಕೂ ಸಮಸ್ಯೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ಡೆಂಘೀ ವಿರೋಧಿ ಮಾಸಾಚರಣೆ, ಸೊಳ್ಳೆ ಪರದೆ ವಿತರಣೆ

ಸರ್ವರ್ ಪ್ರಾಬ್ಲೆಮ್:

ನೆಟ್‌ವರ್ಕ್ ಸಮಸ್ಯೆ ಅತಿಯಾಗಿದ್ದರಿಂದ ಒಬ್ಬರ ಕಾರ್ಡ್‌ ತಯಾರಿಸಲು 5 ನಿಮಿಷ ತಗಲುತ್ತಿದ್ದ ಸಮಯ ಸರ್ವರ್‌ ಪ್ರಾಬ್ಲಮ್‌ನಿಂದಾಗಿ ಈಗ 30 ನಿಮಿಷದಷ್ಟುಬೇಕಾಗುತ್ತದೆ. ಇದರಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಸಿಬ್ಬಂದಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ತಮ್ಮ ಕುಟುಂಬದೊಂದಿಗೆ ಸೋಮವಾರ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ಪಡೆದುಕೊಂಡರು. ಸರ್ವರ್‌ ಪ್ರಾಬ್ಲಮ್‌ನ ಬಿಸಿ ಇವರಿಗೂ ತಟ್ಟಿದ್ದು ವಿಶೇಷ.

Follow Us:
Download App:
  • android
  • ios