ದಾವಣಗೆರೆ(ಜು.27): ಚನ್ನಗಿರಿ: ತಾಲೂಕಿನ ಮಾವಿನಕಟ್ಟೆಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶ್ರೀನಿವಾಸಪುರ, ಗೋಪನಾಳ್‌, ಗೌಳಿನಗರ, ಅಮ್ಮನಗುಡ್ಡ ಗ್ರಾಮಗಳಲ್ಲಿ ಮಲೇರಿಯ ಮತ್ತು ಡೆಂಘೀ ಪ್ರಕರಣಗಳು ಕಂಡು ಬಂದಿದೆ.

ಈ ಗ್ರಾಮಗಳಲ್ಲಿ ವಲಸೆ ಹೋಗಿ ಬರುವ ಜನರಿಂದ ಡೆಂಘೀ ಮತ್ತು ಮಲೇರಿಯಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆ ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣಕ್ಕಾಗಿ ಈ ಗ್ರಾಮಗಳ ಜನರಿಗೆ 157 ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಯಿತು.

ಶಿವಮೊಗ್ಗದ ಆನಂದಪುರದಲ್ಲಿ 10 ಡೆಂಘೀ ಪ್ರಕರಣ: ಫಾಗಿಂಗ್

ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಗ್ರಾಮದ ಪ್ರತಿಯೊಬ್ಬ ಜನರು ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳಬೇಕು ಸೊಳ್ಳೆಗಳು ಉತ್ಫತ್ತಿಯಾಗದಂತೆ ಹೆಚ್ಚಿನ ಕಾಳಜಿ ವಹಿಸಿದಾಗ ಕೀಟ ಜನ್ಯ ರೋಗಗಳಿಂದ ಮುಕ್ತರಾಗ ಬಹುದು ಎಂದು ಹೇಳಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭು, ಮಾವಿನ ಕಟ್ಟೆಆರೋಗ್ಯ ಕೇಂದ್ರದ ಡಾ.ರಾಘವೇಂದ್ರ, ಹಿರಿಯ ಆರೋಗ್ಯ ಸಹಾಯಕ ಲೋಕೇಶ್‌, ಗುತ್ಯಮ್ಮ, ತಿಮ್ಮಪ್ಪ, ವೀಣಾ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.