ಬೆಂಗಳೂರು(wi.12): ಐದು ವಾರ್ಡ್‌ಗಳಲ್ಲಿ ಇಂದೋರ್‌ ಹಾಗೂ ನೆದರ್‌ಲ್ಯಾಂಡ್‌ ಮಾದರಿಯಲ್ಲಿ ಕಸ ವಿಲೇವಾರಿ ಮಾಡಲಾಗುವುದು. ಯಶಸ್ವಿಯಾದರೆ ನಗರದ 198 ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಹೇಳಿದ್ದಾರೆ.

ಇಂದೋರ್‌ ಹಾಗೂ ನೆದರ್‌ಲ್ಯಾಂಡ್‌ ಪ್ರತಿನಿಧಿಗಳೊಂದಿಗೆ ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಗರದ ಕಸ ವಿಲೇವಾರಿ ಕುರಿತು ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದೋರ್‌ ಹಾಗೂ ನೆದರ್‌ ಲ್ಯಾಂಡ್‌ ಪ್ರತಿನಿಧಿಗಳೊಂದಿಗೆ ನಗರ ಕಸ ವಿಲೇವಾರಿ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ಸಿಎಂ ಭೇಟಿ ಮಾಡಿದ ಹೊರಟ್ಟಿ: ರಹಸ್ಯ ಮಾತುಕತೆ!

ಪ್ರಾಯೋಗಿಕವಾಗಿ ನಗರದ ಐದು ವಾರ್ಡ್‌ಗಳಲ್ಲಿ ಇಂದೋರ್‌ ಹಾಗೂ ನೆದರ್‌ಲ್ಯಾಂಡ್‌ ಮಾದರಿಯನ್ನು ಮೂರು ತಿಂಗಳು ಕಸ ವಿಲೇವಾರಿ ನಡೆಸಲಾಗುವುದು. ಯಶಸ್ವಿಯಾದರೆ ನಂತರ ಎಲ್ಲ ವಾರ್ಡ್‌ಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.

ಅದಕ್ಕೂ ಮುನ್ನ ನಗರದ ಪೌರಕಾರ್ಮಿಕರ ಸಂಘದ ಪ್ರತಿನಿಧಿಗಳ ತಂಡವನ್ನು ಇಂದೋರ್‌ಗೆ ಕಳುಹಿಸಿಕೊಡಲಾಗುವುದು. ಈ ಮೂಲಕ ಅಲ್ಲಿ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಲಾಗುವುದು ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಈ ವೇಳೆ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ರಂದೀಪ್‌, ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಮತ್ತಿತರರು ಹಾಜರಿದ್ದರು.

ಬಿಜೆಪಿಗೆ ಬಂದ್ಮೇಲೂ ‘ಬಂಡಾಯಗಾರರ’ ಒಗ್ಗಟ್ಟು: ‘ಅರ್ಹ’ ಶಾಸಕರಿಂದ ಬಿಎಸ್‌ವೈಗೆ ಹಲವು ಬೇಡಿಕೆ!