'11 ಬಾರಿ ಮನವಿಗೂ ಸ್ಪಂದಿಸದ ಸಿಎಂ'

ಸಿಎಂ ಯಡಿಯೂರಪ್ಪಗೆ 11 ಬಾರಿ ಮನವಿ ಮಾಡಿದ್ರೂ ಅವರು ಯಾವುದೇ ರೀತಿ ಸ್ಪಂದನೆ  ಮಾಡಿಲ್ಲ ಎಂದು ಮುಖಂಡರೋರ್ವರು ದೂರಿದ್ದಾರೆ. 

Nekara leader Lakshminarayan Slams CM BS Yediyurappa snr

ದೊಡ್ಡಬಳ್ಳಾಪುರ (ನ.29): ನೇಕಾರರ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ 11 ಬಾರಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ನೇಕಾರ ಮುಖಂಡ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀ ನಾರಾಯಣ ಆರೋಪಿಸಿದರು.

162 ಪ್ರಶ್ನೆಗಳನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಕೇಳಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಸರ್ಕಾರ ಕೆಲ ಜಾತಿಗಳಿಗೆ ಹಾಲು ನೀಡಿದರೆ ಕೆಲ ಜಾತಿ ವಿಷ ನೀಡುತ್ತಿದೆ. ಜಾತಿ-ಜಾತಿಗಳನ್ನು ಎತ್ತಿ ಕಟ್ಟುವ ಕೆಲಸ ಸರ್ಕಾರ ಮಾಡುತ್ತಿದೆ. ನೇಕಾರರ ಬಾಯಿಗೆ ಮಣ್ಣು ಹಾಕಿ 198 ಕೋಟಿ ಉಳಿಸಿಕೊಂಡು ವೀರಶೈವ ನಿಗಮಕ್ಕೆ ಕೊಡಬೇಕಾಗಿತ್ತಾ ಎಂದು ಪ್ರಶ್ನಿಸಿದರು. 

 ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಚಿವ ರಮೇಶ್ ಜಾರಕಿಹೊಳಿಗೆ ನಡೆಗೆ ಆಕ್ರೋಶ ...

ರಾಜ್ಯದಲ್ಲಿ ಶೇ. 8.35 ನೇಕಾರರ ಸಮುದಾಯ ಇದೆ. ವೀರಶೈವ ಲಿಂಗಾಯತ ಸಮುದಾಯಕ್ಕೆ 500 ಕೋಟಿ ನೀಡಿದರೆ ನಮ್ಮ ಸಮುದಾಯಕ್ಕೆ 250 ಕೋಟಿ ನೀಡಬೇಕಾಗುತ್ತದೆ. ನೇಕಾರರ ಕುಂದು ಕೊರತೆಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿ, ಮುಖ್ಯಮಂತ್ರಿ ಉತ್ತರದ ನಂತರ ರಾಜ್ಯವ್ಯಾಪಿ ಪಾದಯಾತ್ರೆಯ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದರು.

Latest Videos
Follow Us:
Download App:
  • android
  • ios