ಗಮನಿಸಿ, ಫೆ.13ರಿಂದ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ
ಫೆಬ್ರವರಿ13 ರಿಂದ ಬೆಂಗಳೂರಿನಲ್ಲಿ ಏರೋ ಶೋ - 2023 ಆರಂಭವಾಗಲಿದ್ದು ಫೆ.17ರವರೆಗೆ ಇರಲಿದೆ. ಈ ಹಿನ್ನೆಲೆ ನಗರದ ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಹಾಗೂ ಸಂಚಾರ ನಿಷೇಧ ಹೇರಿ ನಗರ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ.
ಕಿರಣ್.ಕೆ.ಎನ್ ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಫೆ.11): ಇದೇ 13 ರಿಂದ ಬೆಂಗಳೂರು ನಗರದಲ್ಲಿ ಆರಂಭವಾಗಲಿರುವ ಏರೋ ಇಂಡಿಯಾ ಶೋ - 2023 ಹಿನ್ನೆಲೆ ನಗರದ ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಹಾಗೂ ಸಂಚಾರ ನಿಷೇಧ ಹೇರಿ ನಗರ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ನಗರದೊಳಗೆ ಪ್ರವೇಶಿಸದಂತೆ ಲಾರಿ ಟ್ರಕ್ , ಖಾಸಗಿ ಬಸ್ , ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನ ಹಾಗು ಟ್ರ್ಯಾಕ್ಟರ್ ನಿಷೇಧಿಸಲಾಗಿದೆ.
ಬೆಂಗಳೂರು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ನಿಷೇಧ ನಗರದ ಬಳ್ಳಾರಿ ರಸ್ತೆಯಲ್ಲಿ - ಮೇಕ್ರಿ ಸರ್ಕಲ್ ನಿಂದ ಎಂ ವಿಐಟಿ ಗೇಟ್ ವರೆಗೂ ಎರಡೂ ದಿಕ್ಕಿನಲ್ಲಿ ಲಾರಿ ಟ್ರಕ್ , ಖಾಸಗಿ ಬಸ್ , ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನ ನಿಷೇಧ ಮಾಡಲಾಗಿದೆ. ಬಿಎಂಟಿಸಿ ಕೆಎಸ್ ಆರ್ ಟಿಸಿ ಹೊರತುಪಡಿಸಿ ಈ ಆದೇಶ ಅನ್ವಯವಾಗಲಿದೆ.
ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳ - ಹೆಣ್ಣೂರು ಕ್ರಾಸ್ ವರೆಗೆ ಎರಡೂ ದಿಕ್ಕಿನಲ್ಲಿ, ನಾಗವಾರ ಜಂಕ್ಷನ್ ನಿಂದ - ಥಣಿಸಂದ್ರ ಮುಖ್ಯರಸ್ತೆ - ಬಾಗಲೂರು ಮುಖ್ಯರಸ್ತೆ - ರೇವಾ ಕಾಲೇಜ್ ಜಂಕ್ಷನ್ ವರೆಗೆ ವಿಸ್ತರಿಸಲಾಗಿದೆ. ಬೆಂಗಳೂರು ತುಮಕೂರು ರಸ್ತೆಯಲ್ಲಿ ಚಿಕ್ಕಬಾಣಾವರ ಕಡೆಯಿಂದ ಹೆಸರಘಟ್ಟ - ಯಲಹಂಕ ರಸ್ತೆಯಲ್ಲಿ ಬೃಹತ್ ವಾಹನಗಳ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳು:
ಬೆಂಗಳೂರು ನಗರದಲ್ಲಿ ಕೆಲವೊಂದು ಪರ್ಯಾಯ ಮಾರ್ಗಗಳನ್ನು ಸವಾರರಿಗೆ ಸೂಚಿಸಲಾಗಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಬರುವ ವಾಹನಗಳು ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ - ದಾಬಸ್ ಪೇಟೆ ಮೂಲಕ ಸಂಚರಿಸವುದು. ಕೆ ಆರ್ ಪುರಂ - ಹೊಸೂರು - ಚೆನ್ನೈ - ಬೆಂಗಳೂರು ಮಾರ್ಗದ ಮುಖಾಂತರ ಹೊಸಕೋಟೆ ರಸ್ತೆಯಲ್ಲಿ ಸಂಚರಿಸುವುದು .
ತುಮಕೂರು ರಸ್ತೆಯಿಂದ ಬರುವ ವಾಹನಗಳು - ಸಿಎಂಟಿಐ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು - ಸುಮನಹಳ್ಳಿ - ನಾಯಂಡಹಳ್ಳಿ ಸರ್ಕಲ್ - ಕನಕಪುರ ರಸ್ತೆ ಮೂಲಕ ಸಂಚಾರ ಮಾಡುವಂತೆ ತಿಳಿಸಲಾಗಿದೆ.
Aero India 2023: 'ಏರೋ ಇಂಡಿಯಾ 2023'ದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಭಾಗಿ
ಪಾರ್ಕಿಂಗ್ ನಿಷೇಧಿತ ಏರಿಯಾಗಳು
ಏರೋ ಶೋ ಹಿನ್ನಲೆ ಗಣ್ಯ ವ್ಯಕ್ತಿಗಳು ಸಂಚರಿಸುವ ಮಾರ್ಗಗಳಲ್ಲಿ ಗಾಡಿ ಪಾರ್ಕಿಂಗ್ ನಿಷೇಧಿಸಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ನಗರದ ನಾಗೇನಹಳ್ಳಿ ಗೇಟ್ ನಿಂದ ಗಂಟಿಗಾಟನಹಳ್ಳಿ ಮಾರ್ಗವಾಗಿ - ಬಳ್ಳಾರಿ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಮೇಕ್ರಿ ಸರ್ಕಲ್ ನಿಂದ ದೇವನಹಳ್ಳಿವರೆಗೆ ಎರಡು ಬದಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಗೊರಗುಂಟೆಪಾಳ್ಯದಿಂದ - ಹೆಣ್ಣೂರು ಕ್ರಾಸ್ ಜಂಕ್ಷನ್ ವರೆಗೆ ಎರಡೂ ಬದಿ ನಿಷೇಧ ಏರಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ.
Aero indian 2023: ಅಮೆರಿಕ ನಿಯೋಗಕ್ಕೆ ಎಲಿಜಬೆತ್ ಜೋನ್ಸ್ ನಾಯಕತ್ವ
ಬಾಗಲೂರು ಮುಖ್ಯ ರಸ್ತೆಯಿಂದ - ರೇವಾವರೆಗೆ ಎರಡೂ ಬದಿ ಹಾಗು ನಾಗವಾರ ಜಂಕ್ಷನ್ ನಿಂದ ಬಾಗಲೂರು ಜಂಕ್ಷನ್ ವರೆಗೆ ಪಾರ್ಕಿಂಗ್ ನಿಷೇಧ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 13 ರಿಂದ ಏರ್ ಶೋ ಇರುವ ಎಲ್ಲಾ ದಿನವೂ ಕೂಡ ಈ ನಿಯಮ ಅನ್ವಯವಾಗಲಿದೆ. ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ನಿಯಮ ಅನ್ವಯವಾಗಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.