ಬೆಳೆಯುತ್ತಿರುವ ಮುಧೋಳ ನಗರಕ್ಕೆ ಬೇಕಿದೆ ಗ್ರಾಮೀಣ ಪೊಲೀಸ್ ಠಾಣೆ
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕ್ಷೇತ್ರಕ್ಕೆ ಬೇಕಿದೆ ಗ್ರಾಮೀಣ ಪೊಲೀಸ್ ಠಾಣೆ| ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಣ ಅಪರಾಧ ಪ್ರಕರಣ, ಅಪಘಾತ ತಡೆಗೆ ಗ್ರಾಮೀಣ ಪೊಲೀಸ್ ಠಾಣೆ ಅಗತ್ಯ|ಕಬ್ಬು ಕಟಾವು ಹಂಗಾಮಿನಲ್ಲಿ 10 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು, ಸಾವಿರಕ್ಕೂ ಅಧಿಕ ಕಬ್ಬು ತುಂಬುವ ಟ್ರ್ಯಾಕ್ಟರ್ ಹಾಗೂ ಮಹಾರಾಷ್ಟ್ರದಿಂದ ಬರುತ್ತಾರೆ|
ವಿಶ್ವನಾಥ ಮುನವಳ್ಳಿ
ಮುಧೋಳ[ಡಿ.25]: ಮುಧೋಳ ಶರವೇಗದಲ್ಲಿ ಎಲ್ಲರಂಗದಲ್ಲೂ ಬೆಳೆದಿದೆ ಹಾಗೂ ಬೆಳೆಯುತ್ತಿದೆ. ಜನದಟ್ಟಣೆ ಅಧಿಕವಾಗುತ್ತಿದೆ. ಹೀಗಾಗಿ ಪಟ್ಟಣದಲ್ಲಿಯೂ ಅಪರಾಧ ಪ್ರಕರಣ, ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಅಗತ್ಯವಾಗಿದೆ. ಕ್ಷೇತ್ರದ ಶಾಸಕರೇ ರಾಜ್ಯದ ಡಿಸಿಎಂ ಆಗಿದ್ದಾರೆ. ಹೀಗಾಗಿ ಗ್ರಾಮೀಣ ಪೊಲೀಸ್ ಠಾಣೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
2014ರಲ್ಲಿ ನಗರಸಭೆಯಾಗಿ ಪರಿವರ್ತನೆ ಹೊಂದಿದೆ. ಆದರೆ ಜನಸಂಖ್ಯೆ ಹಾಗೂ ವಾಹನ ದಟ್ಟನೆಗೆ ತಕ್ಕಂತೆ ಪೊಲೀಸ್ ವ್ಯವಸ್ಥೆ ಇಲ್ಲ. ನಗರಕ್ಕೆ ಪ್ರತ್ಯೇಕ ಹಾಗೂ ಗ್ರಾಮೀಣ ಪ್ರತ್ಯೇಕ ಪೊಲೀಸ್ ಠಾಣೆಯ ಅಗತ್ಯತೆ ಬಹಳಷ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಿದ ಗ್ರಾಮಗಳಾದ ಬಳ್ಳೂರ,ಹಂಚಿನಾಳ,ಗುಡದಿನ್ನಿ,ಯಡಹಳ್ಳಿ,ಗಿರಗಾಂವ ಗ್ರಾಮಗಳಿಗೆ ನಗರಕ್ಕೆ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಪ್ರತ್ಯೇಕ ಗ್ರಾಮಗಳಾಗಿದ್ದರೂ ನಗರದ ವ್ಯಾಪ್ತಿಯಲ್ಲಿವೆ. ನಗರ ಬೆಳೆಯುತ್ತಿದೆ. 30ಕ್ಕೂ ಹೆಚ್ಚು ಬಡಾವಣೆಗಳು ತಲೆಯತ್ತಿ ನಿಂತಿವೆ. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಸುಮಾರು 35 ಶಿಕ್ಷಣ ಸಂಸ್ಥೆಗಳು, 30ಕ್ಕೂ ಅಧಿಕ ವಿವಿಧ ರೀತಿಯ ಸಂಘ, ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಕಬ್ಬಿನ ಬೆಲೆಯ ಸಲುವಾಗಿ ಹಾಗೂ ಇನ್ನುಳಿದ ನಾನಾ ಕಾರಣ ಹೋರಾಟ,ಪ್ರತಿಭಟನೆ ನಡೆಯುತ್ತಲೆ ಇರುತ್ತವೆ. ಅದಕ್ಕಾಗಿ ಇಲ್ಲಿ ಪ್ರತ್ಯೇಕ ಪೊಲೀಸ್ ಠಾಣೆಯ ಅಗತ್ಯತೆ ಇದೆ.
ಪೊಲೀಸ್ ಠಾಣೆ ಅಗತ್ಯ:
ನಗರದಲ್ಲಿ ವಿಜಯಪುರ, ಬೆಳಗಾವಿ ಹಾಗೂ ರಾಯಚೂರ-ನಿಪ್ಪಾಣಿ ಹೆದ್ದಾರಿಗಳಿವೆ. ತಾಲೂಕಿನಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳು,ಬೃಹತ್ ಸಿಮೆಂಟ್ ಉದ್ಯಮಗಳು ಇರುವುದರಿಂದ ಜನರ,ಕಾರ್ಮಿಕ ವಾಹನ ಸಂಖ್ಯೆಅಧಿಕವಾಗುತ್ತ ನಡೆದಿದೆ. ಕಬ್ಬು ಕಟಾವು ಹಂಗಾಮಿನಲ್ಲಿ 10 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು, ಸಾವಿರಕ್ಕೂ ಅಧಿಕ ಕಬ್ಬು ತುಂಬುವ ಟ್ರ್ಯಾಕ್ಟರ್ ಹಾಗೂ ಮಹಾರಾಷ್ಟ್ರದಿಂದ ಬರುತ್ತಾರೆ. ಕಲಬುರ್ಗಿ,ಬೆಳಗಾವಿ, ರಾಯಚೂರ, ನಿಪ್ಪಾಣಿ ಹೆದ್ದಾರಿಗಳಿವೆ. ಇದರಿಂದ ಸಹಜವಾಗಿ ಸಂಚಾರದಟ್ಟಣೆ ಅಧಿಕವಾಗುತ್ತದೆ. ಅಪಘಾತಗಳು ನಿರಂತರವಾಗಿ ಪೊಲೀಸರು ಸಂಚಾರ ನಿಯಂತ್ರಿಸಲು ಹರಸಹಾಸ ಮಾಡುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಗ್ರಾಮೀಣದಲ್ಲಿ ಹಲವಾರು ಪ್ರಕರಣ ನಡೆಯುತ್ತಲೆ ಇರುತ್ತವೆ. ನಗರ ಹಾಗೂ ಗ್ರಾಮೀಣ ಠಾಣೆ ಒಂದೇ ಇರುವುದರಿಂದ ನಿತ್ಯ ಹಲವಾರು ಜನರು ನ್ಯಾಯಕ್ಕಾಗಿ ಬರುವುದರಿಂದ ನಗರ ಹಾಗೂ ಗ್ರಾಮೀಣ ಭಾಗ ನಿಭಾಯಿಸುವುದು ಇರುವುದರಿಂದ ಜನರಿಗೆ ಪರಿಣಾಮಕಾರಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ ಇರುವುದರಿಂದ ಇಲ್ಲಿನ ನಗರ ಹಾಗೂ ಪ್ರತ್ಯೇಕ ಠಾಣೆ ಅಗತ್ಯಇದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಇಲ್ಲಿ ಪ್ರತ್ಯೇಕ ಠಾಣೆಗಳಿಗೆ ಬೇಕಾಗಿರುವ ಕಟ್ಟಡ ಸಿದ್ಧವಾಗಿದೆ. ನಗರದಲ್ಲಿ ಠಾಣೆ ಇದೆ. ಸಿಪಿಐ ಕಚೇರಿಯಲ್ಲಿ ಸಿಪಿಐ ಕಚೇರಿಯಲ್ಲಿ ಮುಧೋಳ ಠಾಣೆ ನಿರ್ಮಿಸಲಾಗಿದೆ. ಆದರೆ ಅದು ದೂರವಾಗುವುದೆಂದು ಈ ಮೊದಲಿನ ಠಾಣೆಯನ್ನೆ ಉಪಯೋಗಿಸುತ್ತಿದ್ದು, ಪೊಲೀಸ್ ಠಾಣೆ ಖಾಲಿ ಇದೆ. ಅಲ್ಲಿ ಗ್ರಾಮೀಣ ಠಾಣೆ ಆರಂಭಿಸಲು ಯಾವುದೇ ತೊಂದರೆ ಇಲ್ಲ. ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಗ್ರಾಮೀಣ ಹಾಗೂ ನಗರ ಠಾಣೆ ಮಾಡಲು ಜನರ ಆಗ್ರಹವಾಗಿದೆ.
ಮುಧೋಳ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ವಿವರ
ವರ್ಷ ಗ್ರಾಮೀಣ ಭಾಗದ ಪ್ರಕರಣಗಳು ನಗರದ ಪ್ರಕರಣಗಳು
2013 94 144
2014 92 164
2015 129 201
2016 121 124
2017 150 117
2018 134 123
2019 (ಸೆಪ್ಟೆಂಬರವರೆಗೆ) 89 63
ಮುಧೋಳ ಠಾಣೆಯಲ್ಲಿ ದಾಖಲಾದ ರಸ್ತೆ ಅಪಘಾತ ಪ್ರಕರಣಗಳ ವಿವರ
ವರ್ಷ ಮರಣ ಗಾಯಾಳುಗಳು
2013 32 44
2014 23 29
2015 25 40
2016 30 28
2017 26 47
2018 33 46
2019 (ಸೆಪ್ಟಂಬರವರೆಗೆ) 17 40
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ರಮದಿಂದ ನಗರದ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದೆ ಹಾಗೂ ಬೈಪಾಸ್ ರಸ್ತೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ನಗರದ ಹಾಗೂ ಗ್ರಾಮೀಣ ಠಾಣೆಯನ್ನು ಮಾಡಬೇಕು ಎಂದು ವರ್ತಕ ಸುರೇಶ ಉದಪುಡಿ ಹೇಳಿದ್ದಾರೆ.
ಮುಧೋಳಕ್ಕೆ ನಗರ ಹಾಗೂ ಪ್ರತ್ಯೇಕ ಠಾಣೆ ಅವಶ್ಯಕತೆ ಇದನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗಮನಕ್ಕೆ ತಂದು ಶೀಘ್ರ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ ಅವರು ತಿಳಿಸಿದ್ದಾರೆ.