ಅವಳಿ ತಾಲೂಕುಗಳ ಮಹಿಳೆಯರ ಉದ್ಯೋಗದ ಅನುಕೂಲಕ್ಕಾಗಿ ಸರ್ಕಾರದ ಹಂತದಲ್ಲಿ ಕ್ಷೇತ್ರಕ್ಕೆ ಸುಮಾರು 20ಎಕರೆ ಜಮೀನಿನಲ್ಲಿ ಜವಳಿ ಪಾರ್ಕ್ ಮಂಜೂರಾತಿಗಾಗಿ ಈಗಾಗಲೇ ಸಿದ್ಧತೆ ಮಾಡಿದ್ದು ಈ ಸಂಬಂಧ ಜವಳಿ ಖಾತೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪರನ್ನು ಭೇಟಿ ಮಾಡಿದ್ದು, ಮಂಜೂರಾತಿ ಹಂತದಲ್ಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ದಾವಣಗೆರೆ (ಅ.19) : ಅವಳಿ ತಾಲೂಕುಗಳ ಮಹಿಳೆಯರ ಉದ್ಯೋಗದ ಅನುಕೂಲಕ್ಕಾಗಿ ಸರ್ಕಾರದ ಹಂತದಲ್ಲಿ ಕ್ಷೇತ್ರಕ್ಕೆ ಸುಮಾರು 20ಎಕರೆ ಜಮೀನಿನಲ್ಲಿ ಜವಳಿ ಪಾರ್ಕ್ ಮಂಜೂರಾತಿಗಾಗಿ ಈಗಾಗಲೇ ಸಿದ್ಧತೆ ಮಾಡಿದ್ದು ಈ ಸಂಬಂಧ ಜವಳಿ ಖಾತೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪರನ್ನು ಭೇಟಿ ಮಾಡಿದ್ದು, ಮಂಜೂರಾತಿ ಹಂತದಲ್ಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶಾಸಕ ರೇಣುಕಾಚಾರ್ಯ ಸಮ್ಮುಖ ಬಿಜೆಪಿ ಸೇರ್ಪಡೆಯಾದ ಮುಸ್ಲಿಮರು

ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಸೋಮವಾರ ಸುಮಾರು 58.70 ಲಕ್ಷ ರು.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಸೌಧ, ಗ್ರಾಮ ಪಂಚಾಯಿತಿ ಕಟ್ಟಡ ಲೋಕಾರ್ಪಣೆಗೊಳಿಸಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಗ್ರಾಮದ ಅನೇಕರು ಗ್ರಾಮದಲ್ಲಿ ಸ್ವಚ್ಛತೆ ಇಲ್ಲ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಸಮಾಧಾನಗೊಂಡು ಶಾಸಕರ ಗಮನಕ್ಕೆ ತರುತ್ತಿದ್ದಂತೆ ಕೂಡಲೇ ಶಾಸಕ ರೇಣುಕಾಚಾರ್ಯ ಸಂಬಂಧಿಸಿದ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಪಿಡಿಒಗಳಿಗೆ ದೀಪಾವಳಿ ಹಬ್ಬದೊಳಗೆ ಗ್ರಾಮದ ಸ್ವಚ್ಛಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪರಿಹಾರದ ಆದೇಶ:

ಕಾರ್ಯಕ್ರಮದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಧ್ಯಾಸುರಕ್ಷಾ ಯೋಜನೆ 11ಮಂದಿ ಫಲಾನುಭವಿಗಳಿಗೆ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ 2, ಅಂಗವಿಕಲ ವೇತನ 1, ವಿಧವಾ ವೇತನ 01, ಬೇಲಿಮಲ್ಲೂರು ವೃತ್ತದ ¶ೌತಿ ಖಾತೆ, ವಾರಸುದಾರರ ಅರ್ಜಿ 1, ಹೊನ್ನಾಳಿ ತಾಲೂಕಿನ ಸಾಗುವಳಿ ಚೀಟಿ ವಿತರಣೆ 05, ಬೇಲಿಮಲ್ಲೂರು ವೃತ್ತದ ಮಳೆ ಹಾನಿಯಿಂದ ವಾಸದ ಮನೆ ಹಾನಿಯಾಗುರುವ ಬಗ್ಗೆ ಪರಿಹಾರ 16 ಹೀಗೆ ಒಟ್ಟು 37 ಫಲಾನುಭವಿಗಳಿಗೆ ಪರಿಹಾರದ ಆದೇಶ ಪತ್ರಗಳ ವಿತರಿಸಲಾಗುತ್ತಿದೆ ಎಂದÜರು.

ಹೆಚ್ಚು ಸ್ಪಂದಿಸಿ ಕೆಲಸ ಮಾಡಿ:

ತಹಸೀಲ್ದಾರ್‌ ಎಚ್‌.ಜೆ.ರಶ್ಮಿ ಮಾತನಾಡಿ, ಸ್ಥಳೀಯ ಶಾಸಕರು ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ತಾಲೂಕು ಆಡಳಿತ ಕೂಡ ಅಭಿವೃದ್ಧಿ ವಿಚಾರಗಳಲ್ಲಿ ಹಾಗೂ ಜನ ಸಾಮಾನ್ಯರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಶಾಸಕರೊಂದಿಗೆ ಹೆಚ್ಚು ಸ್ಪಂದಿಸಿ ಕೆಲಸ ಮಾಡಲಾಗವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾ,.ಪಂ,. ಇ.ಒ.ರಾಮಭೋವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಹಿರಿಯ ಮುಖಂಡ, ವಿಶ್ರಾಂತ ಪ್ರಾಂಶುಪಾಲ ನರಸಪ್ಪ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷೆ ಮಂಜಮ್ಮ ಸಿದ್ದಪ್ಪ ಎನ್‌. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ನೀಲಮ್ಮ ಉಮೇಶ್‌ ಬಿ.ಎಸ್‌. ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಸವಿತಾ ಎಂ.ಡಿ.ಹಾಲೇಶಪ್ಪ ಚಂದ್ರಪ್ಪ, ಹನುಮಂತಪ್ಪ, ಜಯಪ್ಪ, ಜಿ.ಎಸ್‌.ಲಕ್ಷ್ಮಿ, ರತ್ನಮ್ಮ, ಕಮಲಮ್ಮ, ಅಣ್ಣಪ್ಪ, ಹನುಂತಪ್ಪ ಕೆ.ಎನ್‌. ಗೀತಮ್ಮ, ಶಾಂತಾಬಾಯಿ, ನಾಗರಾಜ್‌, ಮುಖಂಡರಾದ ಎನ್‌.ಸಿದ್ದಪ್ಪ, ಬಿ.ಎಸ್‌.ಉಮೇಶ್‌,ಪಿಡಿಒ ಅರುಣ್‌ ಕೆ. ಕಾರ್ಯದರ್ಶಿ ಎಚ್‌.ಕೆ.ವೀರಣ್ಣ ,. ಗ್ರಾ.ಪಂ.ಸಿಬ್ಬಂದಿಗಳು, ಬೇಲಿಮಲ್ಲೂರು, ಕೋಟೆಮಲ್ಲೂರು, ಮತ್ತು ವಿಜಯಪುರ ಗ್ರಾಮಸ್ಥರು ಇದ್ದರು.

ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಕಂಕಣ ಬದ್ದವಾಗಿದ್ದು ಈ ಭಾಗದಲ್ಲಿ ಸಿಸಿರಸ್ತೆ, ಸೇರಿ ಅನೇಕ ಅಭಿವೃದ್ಧಿ ಕೆಲಸಗಳ ಜೊತೆಗೆ ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಲಾಗುವುದು. ತಮ್ಮ ಏನೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ನಾನು ಅಧಿಕಾರಿಗಳಿಗೆ ಸೂಚಿಸಿ ನಿಮ್ಮ ಬೇಡಿಕೆ ಈಡೇರಿಸುವ ಜವಾಬ್ದಾರಿ ನನ್ನದು.

ಎಂ.ಪಿ.ರೇಣುಕಾಚಾರ್ಯ, ಶಾಸಕ

ರೇಣುಕಾಚಾರ್ಯ ಬಳಿ ಕೆಲಸಕ್ಕಿದ್ದ ಯುವಕನ ಮೇಲೆ ಹಲ್ಲೆ:

ಹಿಂದೂ ಮಹಾಗೌರಿಗಣೇಶ ಉತ್ಸವದ ಸಿದ್ಧತೆಯ 15ರಂದು ರಾತ್ರಿ ವೇದಿಕೆ ಬಳಿ ಶಾಸಕ ಎಂ.ಪಿ.ರೇಣಕಾಚಾರ್ಯ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್‌.ಮಹೇಶ್‌ ನಡುವೆ ಮಾತಿನ ಚಕಮಕಿ ನಡೆÜದಿದೆ. ಬಳಿಕ ಶಾಸಕರ ಬಳಿ ಕೆಲಸ ಮಾಡುತ್ತಿದ್ದ ಪ್ರಜ್ವಲ್‌ ಎಂಬಾತನ ಮೇಲೆ 17ರ ರಾತ್ರಿ ಪಟ್ಟಣದ ಬಸವೇಶ್ವರ ಸಮುದಾಯ ಭವನದ ಹತ್ತಿರ ಕೆಲ ಯುವಕರು ಹಲ್ಲೆ ಮಾಡಿರುವುದಾಗಿ ಪ್ರಜ್ವಲ್‌ ತಿಳಿಸಿದರು

.ಮೋದಿ ವಿಶ್ವ ಗುರು, ರಾಹುಲ್‌ ಪುಕ್ಕಲ ಗುರು: ಶಾಸಕ ರೇಣುಕಾಚಾರ್ಯ

ಹಲ್ಲೆ ನಡೆದ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಸಂಬಂಧ ಹೊನ್ನಾಳಿ ಪೊಲೀಸ್‌ ಠಾಣೆಗೆ ತಾನು ಅ.18ರ ಮಂಗಳವಾರ ದೂರು ನೀಡಿರುವುದಾಗಿ ಹಲ್ಲೆಗೊಳಗಾದ ಪ್ರಜ್ವಲ್‌ ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುವ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಥಳಕ್ಕೆ ಅಗಮಿಸಿ ಆರೋಗ್ಯವಿಚಾರಿಸಿದರು ಎಂದು ತಿಳಿಸಿದರು.