ಮುಖ್ಯ ಆರಕ್ಷಕನಿಂದಲೇ ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ‘ಸ್ಫೋಟಕ’ ಬೆದರಿಕೆ

ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ಎಂಬವರು ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ಸ್ಫೋಟಕವನ್ನಿಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ಎಎನ್‌ಎಫ್‌ ಕ್ಯಾಂಪ್‌ನಲ್ಲಿ ನಡೆದಿದೆ.

Naxal senior police threat bombing anti naxal force camp in udupi

ಕಾರ್ಕಳ(ಮೇ 17): ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ಎಂಬವರು ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ಸ್ಫೋಟಕವನ್ನಿಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ಎಎನ್‌ಎಫ್‌ ಕ್ಯಾಂಪ್‌ನಲ್ಲಿ ನಡೆದಿದೆ.

ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಂಬವರು ಅಂಜಿ ಎಂಬ ಹೆಸರಿನ ಶ್ವಾನವನ್ನು ಹಿಡಿದುಕೊಂಡು ಕಾರ್ಕಳ ಎಎನ್‌ಎಫ್‌ ಕ್ಯಾಂಪ್‌ನ ಗೇಟ್‌ನ ಎದುರುಗಡೆ ಅಡ್ಡಲಾಗಿ ಕುತಳಿತುಕೊಂಡು, ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಇಲಾಖಾ ಪಿಸ್ತೂಲನ್ನು ಹೊರತೆಗೆದು ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೈಷಮ್ಯದಿಂದ ಗೇಟ್‌ ಬಳಿ ಪಹರೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ವಿಡಿಯೋ ವೈರಲ್‌

ಬಳಿಕ ಪೊಲೀಸ್‌ ನಿರೀಕ್ಷಕಾದ ಸುನಿಲ್‌ ಅವರು ಆನಂದ ಅವರನ್ನು ಸಮಾಧಾನಪಡಿಸಿ ಪಿಸ್ತೂಲನ್ನು ವಶಕ್ಕೆ ತೆಗೆದುಕೊಂಡರು. ಇದಾದ ಬಳಿಕ ಕುಪಿತಗೊಂಡ ಆರೋಪಿ ಆನಂದ್‌, ಎಲ್ಲಿಂದಲೋ ತಂದ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ತನ್ನ ಚೀಲದಲ್ಲಿಟ್ಟಿಕೊಂಡಿದ್ದು, ಅದನ್ನು ಎಎನ್‌ಎಫ್‌ ಕ್ಯಾಂಪ್‌ನ ಮುಂಭಾಗದ ಗೇಟ್‌ ಬಳಿ ಕುಳಿತುಕೊಂಡು ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಆನಂದ ಪಾಟೀಲ್‌ ವಿರುದ್ಧ ಪೊಲೀಸ್‌ ನಿರೀಕ್ಷಕ ಸುನಿಲ್‌ ಕುಮಾರ್‌ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios