ಉತ್ತರಕನ್ನಡ(ಜೂ.21): ನವಲಗುಂದ ಶಾಸಕ ಗೋಕರ್ಣ ಬೀಚ್‌ನಲ್ಲಿ ಸಮುದ್ರ ಸ್ನಾನ ನಡೆಸಿ ಜಪ ನಡೆಸಿದ್ದಾರೆ. ಕೊರೋನಾ ವೈರಸ್ ಕಾಟದಿಂದ ಜನರ ಓಡಾಟ, ವ್ಯವಹಾರಗಳು ಕಡಿಮೆಯಾಗಿದ್ದು, ಈ ಸಂದರ್ಭ ಶಾಸಕ ಬೀಚ್‌ಗೆ ಹೋಗಿದ್ದಾರೆ.

ಕುಟುಂಬ ಸಮೇತ ಗೋಕರ್ಣ ಬೀಚ್‌ನಲ್ಲಿ ಜಪ ನಡೆಸುತ್ತಿರುವ ಬಿಜೆಪಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ದೋಷ ನಿವಾರಣೆ ಹಾಗೂ ಪುಣ್ಯ ಪ್ರಾಪ್ತಿಗಾಗಿ ಗೋಕರ್ಣ ಬೀಚ್‌ನಲ್ಲಿ ಕುಳಿತು ಜಪ‌ ನಡೆಸುತ್ತಿದ್ದಾರೆ.

ಬಿಜೆಪಿ ನಾಯಕರ ಯೋಗಾಸನದ ಫೋಟೋಸ್‌

ಸುವರ್ಣ ನ್ಯೂಸ್ ಕ್ಯಾಮೆರಾ ಕಾಣುತ್ತಿದ್ದಂತೇ ಕಾಂಟ್ರವರ್ಸಿ ಆಗುತ್ತೆ. ಶೂಟಿಂಗ್ ಮಾಡದಂತೆ ವಿನಂತಿಸಿದ ಶಾಸಕ ವಿನಂತಿಸಿದ್ದಾರೆ. ಗ್ರಹಣದ ಹಿನ್ನೆಲೆಯಲ್ಲಿ ಗೋಕರ್ಣ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಶಂಕರ್ ಪಾಟೀಲ್ ಜಪ ಮಾಡಿದ್ದಾರೆ.

ದೇವಳ ಪ್ರವೇಶದ ಮುನ್ನ ಗೋಕರ್ಣ ಬೀಚ್‌ನಲ್ಲಿ ಕುಟುಂಬ ಸಮೇತ ದೇವರ ಧ್ಯಾನ, ಜಪ ಮಾಡಿದ್ದಾರೆ. ಇದೀಗ ಎಲ್ಲೆಡೆ ಸೂರ್ಯಗ್ರಹಣವನ್ನು ಮುಂಜಾಗೃತಾ ಕ್ರಮಗಳೊಂದಿಗೆ ವೀಕ್ಷಿಸಲಾಗುತ್ತಿದೆ.