ಬೆಂಗಳೂರು (ಅ.20): ಮಳೆಯಿಂದಾಗಿ ಆಡುಗೋಡಿ ಬಳಿಯ ರಾಜೇಂದ್ರನಗರ ಕೊಳಗೇರಿಯಲ್ಲಿ ಕುಸಿದು ಬಿದ್ದಿದ್ದ ವೃದ್ಧ ದಂಪತಿ ವಾಸಿಸುತ್ತಿರುವ ಮನೆಯೊಂದನ್ನು ನವ ಬೆಂಗಳೂರು ಫೌಂಡೇಷನ್‌ ಪುನರ್‌ ನಿರ್ಮಿಸಿಕೊಟ್ಟಿದೆ. ಸಂಸ್ಥೆಯ ಮುಖ್ಯಸ್ಥ ಅನಿಲ್‌ಶೆಟ್ಟಿಮನೆಯ ಬೀಗದ ಕೀ ಯನ್ನು ದಂಪತಿಗೆ ಹಸ್ತಾಂತರಿಸಿದರು.

ಇದೇ ವೇಳೆ ಕೊಳಗೇರಿಯ ಸ್ಥಳೀಯ ನಿವಾಸಿಗಳ ಕಷ್ಟಗಳಿಗೆ ಸ್ಪಂದಿಸಿದ ಅನಿಲ್‌ಶೆಟ್ಟಿ, ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಕೈಜೋಡಿಸುವುದಾಗಿ ಭರವಸೆ ನೀಡಿದರು. 

ರಾಮನಗರಕ್ಕಾಗಿ ಒಂದಾದ ಜನ : ಒಗ್ಗಟ್ಟಿನ ನಿರ್ಣಯ ...

ಒಟ್ಟಾಗಿ ಸೇರಿ ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಬಡವರು, ಅಸಹಾಯಕರಿಗೆ ಸಹಾಯ ಮಾಡುವುದು ಮಾನವ ಧರ್ಮ. ಆದ್ದರಿಂದ ಎಲ್ಲರೂ ಸೇರಿ ಸಮಾಜದ ಏಳ್ಗೆಗೆ ಶ್ರಮಿಸೋಣ ಎಂದು ಹೇಳಿದರು.