ಜನರನ್ನು ಮೌಢ್ಯದ ಕೂಪದಲ್ಲಿಡಲು ಬಾಬಾಗಳ ಪ್ರಭುತ್ವ; ವಿಚಾರವಾದಿ ನರೇಂದ್ರ ನಾಯಕ್

ಭಾರತದಲ್ಲಿ ಜನರನ್ನು ಮೌಡ್ಯದ ಕೂಪದಲ್ಲಿಯೇ ಇಡಲು ಬಾಬಾಗಳ ಪ್ರಭುತ್ವವೇ ಸೃಷ್ಟಿಮಾಡಿಕೊಂಡಿದೆ ಎಂದು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್‌ ಆಕ್ರೋಶ ವ್ಯಕ್ತಪಡಿಸಿದರು.

Narendra nayak outraged agains  those who fill people with stupidity at hassan rav

ಹಾಸನ (ಆ.5) :  ಭಾರತದಲ್ಲಿ ಜನರನ್ನು ಮೌಡ್ಯದ ಕೂಪದಲ್ಲಿಯೇ ಇಡಲು ಬಾಬಾಗಳ ಪ್ರಭುತ್ವವೇ ಸೃಷ್ಟಿಮಾಡಿಕೊಂಡಿದೆ ಎಂದು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್‌ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ(IndiaScience Committee)ಯು ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕಸಾಪ ಭವನದಲ್ಲಿ ಆಯೋಜಿಸಿದ್ದ ‘ವೈಜ್ಞಾನಿಕ ಭಾರತಕ್ಕಾಗಿ ವಿಜ್ಞಾನದ ನಡಿಗೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಸತ್ಯನಾರಾಯಣರಾಜು ಎಂಬ ವ್ಯಾಪಾರಿ ಜನರಿಗೆ ಮಂಕುಬೂದಿ ಎರಚಿ ಸತ್ಯಸಾಯಿಬಾಬಾ ಎಂಬ ಮೋಸಗಾರ ಸಂತನನ್ನು ಸೃಷ್ಟಿಸಲಾಗಿದೆ. ಈತ ಕೊಡುವ ಬೂದಿ, ಚೈನುಗಳು, ಉಂಗುರಗಳು ಕಪಟ ನಾಟಕಗಳಾಗಿದ್ದು ಆ ನಾಟಕಕ್ಕೆ ಪವಾಡದ ಸರ್ಟಿಫಿಕೇಟ್‌ ನೀಡಲು ಸರ್ಕಾರದ ನೇತಾರರೇ ಪಾಲುದಾರರಾಗಿದ್ದಾರೆ. ಅದರ ವಿಡಿಯೋ ದೂರದರ್ಶನದ ಮೂಲಕ ಪ್ರಸಾರ ಮಾಡಿ ಪ್ರಚಾರ ಗಿಟ್ಟಿಸಿಕೊಂಡದ್ದು ದುರಂತ ಎಂದರು. ಅಲ್ಲದೇ, ಸತ್ಯ ಸಾಯಿಬಾಬಾ ಪವಾಡದ ಕೈಚಳಕದ ವಿಡಿಯೋ ತುಣುಕುಗಳನ್ನು ತೋರಿಸಿ ವಿವರಿಸಿದರು.

ಈಗ ಆಧುನಿಕ ತಂತ್ರಜ್ಞಾನ ಬಳಸಿ ಮೋಸ ಮಾಡುವ ಪವಾಡ ಪುರುಷÜರು ಹೇರಳವಾಗಿ ಹುಟ್ಟಿಕೊಂಡಿದ್ದಾರೆ. ಕಾನ್ಪುರ ಐಐಟಿಯಲ್ಲಿ ರವಿಶಂಕರ್‌ ಗುರೂಜಿ ಹಿಮಾಲಯದ 28 ಗಿಡ ಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ದೇಹದ ಶಕ್ತಿಯನ್ನು ಹೆಚ್ಚುಮಾಡುತ್ತವೆ ಎಂದು ಸುಶಿಕ್ಷಿತ ವಿದ್ಯಾರ್ಥಿಗಳನ್ನು ಮಂಗಮಾಡಿ ನೂರಾರು ಬಾಟಲ್‌ ತೈಲಮಾರಿ ಹಣ ಮಾಡಿಕೊಂಡರು. ಕೆಲ ದಿನಗಳ ನಂತರ ನಾನು ಅದೇ ಕಾಲೇಜಿನಲ್ಲಿ ಆ ತೈಲದ ಮೋಸವನ್ನು ಅದೇ ಮಾದರಿಯಲ್ಲಿ ಪ್ರಯೋಗ ಮಾಡಿ ಬಯಲು ಮಾಡಿದೆ ಎಂದರು.

ಮೌಢ್ಯಾಚರಣೆ ವಿರೋಧಿ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಎಷ್ಟುಬಾರಿ ಹೋಗಿದ್ದಾರೆ?

ಈ ವೇಳೆ ಬಾಬಾ ರಾಮದೇವ ತುಳಸಿ ಎಲೆಗಳನ್ನು ಮೊಬೈಲ್‌ ಜೊತೆ ಇಟ್ಟುಕೊಂಡರೆ ರೇಡಿಯೇಶನ್‌ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಜನರ ಮುಂದೆಯೇ ಪ್ರಯೋಗದ ಮೂಲಕ ಉತ್ತರಿಸಿದರು. ಯಾವುದೇ ಎಲೆಗಳಿಂದ, ಬಟ್ಟೆಯಿಂದ, ತೈಲದಿಂದ, ಮಂತ್ರದಿಂದ ರೇಡಿಯೇಷನ್‌ ತಡೆಯಲು ಆಗುವುದಿಲ್ಲ. ಹಾಗೇನಾದರೂ ತಡೆಯಬೇಕಿದ್ದರೆ ಅಲ್ಯೂಮಿನಿಯಂ ಫಾಯಿಲ್‌ಅನ್ನು ಮೊಬೈಲ್‌ಗೆ ಸುತ್ತಿಟ್ಟರೆ ಬ್ಲಾಕ್‌ ಆಗುತ್ತದೆ. ಮಾತ್ರವಲ್ಲ ಅದು ಮೊಬೈಲ್‌ ಅಥವ ಇನ್ನಾವುದೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಹಾಳು ಮಾಡುತ್ತದೆ ಎಂದು ಪ್ರಯೋಗ ಸಮೇತ ತೋರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರದ ಪ್ರಸೂತಿ ತಜ್ಞೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷೆ ಡಾ. ಎ.ಸಾವಿತ್ರಿ, ಹುಣ್ಣಿಮೆ-ಅಮಾವಾಸ್ಯೆಗೂ, ಗ್ರಹ -ಗ್ರಹಣಗಳಿಗೂ ಹಾಗೂ ಸ್ತಿ್ರೕರೋಗ ಮತ್ತು ಪ್ರಸೂತಿ ವಿಭಾಗಕ್ಕೂ ಅವಿನಾಭಾವ ಸಂಬಂಧ ಇದೆ. ಪ್ರತಿ ಹುಣ್ಣಿಮೆ ಅಮಾವಾಸ್ಯೆಗಳೆಂದು ನಮ್ಮ ವಿಭಾಗ ಖಾಲಿ ಹೊಡೆಯುತ್ತಿರುತ್ತದೆ. ಯಾರೂ ಕೂಡ ಹೆರಿಗೆಗೆ ಬರುವುದಿಲ್ಲ. ಹಾಗೆಯೇ ಗ್ರಹಣಗಳಾದಾಗಂತೂ ಹೆಚ್ಚು ಕಡಿಮೆ ಬಾಗಿಲು ಹಾಕಿರುವ ಪರಿಸ್ಥಿತಿ ಇರುತ್ತದೆ ಎಂದರು. ವೈಜ್ಞಾನಿಕ ಮನೋಧರ್ಮವನ್ನು ಜನರಲ್ಲಿ ಸರಳವಾಗಿ ಬಿತ್ತಿ ಮೌಢ್ಯಗಳನ್ನು ದೂರೀಕರಿಸಿದರೆ ಮಾತ್ರ ಜನತೆ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಜನ ವಿಜ್ಞಾನ ಚಳುವಳಿಯ ಅಗತ್ಯತೆಯ ಕುರಿತು ಮಾತನಾಡಿದ ಬಿಜಿವಿಎಸ್‌ ಕಾರ್ಯದರ್ಶಿ ಡಾ.ಎಚ್‌.ಆರ್‌.ಸ್ವಾಮಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನರೆಡೆಗೆ ಕೊಂಡೊಯ್ಯುವ ಉದ್ದೇಶದಿಂದ ಭಾರತ ಜ್ಞಾನ ವಿಜ್ಞಾನ ಸಮಿತಿ ಎಂಬ ಹೆಸರಿನೊಂದಿಗೆ ಜನಪರ ಕಾಳಜಿ ಇದ್ದ ಬಹುತೇಕ ಜನ ಸೇರಿ ಜನ ಜ್ಞಾನ ವಿಜ್ಞಾನ ಜಾತಾ ಪ್ರಾರಂಭಿಸಿದರು. ಇಲ್ಲಿಯವರೆಗೂ ದೇಶದಲ್ಲಿ ವಿಜ್ಞಾನವನ್ನು ಒಂದು ಚಳುವಳಿ ಎಂದು ಗುರುತಿಸಲಾಗಿರಲಿಲ್ಲ. ಆದರೆ ಈ ಜಾತಾ ಮತ್ತು ಅದರ ಪ್ರತಿಫಲವಾಗಿ ಹುಟ್ಟಿಕೊಂಡ ಸಾಕ್ಷರತಾ ಆಂದೋಲನ ಸಾಕ್ಷರತಾ ಜಾತಾ ವಿಜ್ಞಾನವನ್ನು ಕೂಡ ಒಂದು ಚಳುವಳಿಯಾಗಿ ಕೊಂಡಯ್ಯಬೇಕು ಎನ್ನುವ ಅನಿವಾರ್ಯತೆಯನ್ನು ಸೃಷ್ಟಿಸಿತು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಲ್‌.ಮಲ್ಲೇಶಗೌಡ ಕೂಡಾ ಮಾತನಾಡಿದರು.

ಮೌಢ್ಯಕ್ಕೆ ಬ್ರೇಕ್ ಹಾಕಿದ ಸಿಎಂ ಸಿದ್ದರಾಮಯ್ಯ, 5 ವರ್ಷದ ನಂತರ ಮತ್ತೇ ಓಪನ್ ಆಯ್ತು ದಕ್ಷಿಣ ದ್ವಾರ!

ಈ ಸಂದರ್ಭ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷæ್ಣೕಗೌಡ, ಬಿಜಿವಿಎಸ್‌ ಜಿಲ್ಲಾಧ್ಯಕ್ಷ ಗುರುರಾಜು, ಕಾರ್ಯದರ್ಶಿ ಅಹಮದ್‌ ಹಗರೆ ಉಪಸ್ಥಿತರಿದ್ದರು. ವಿಜ್ಞಾನ ಸಂವಹನ ಸಂಚಾಲಕಿ ಪ್ರಮೀಳ ನಿರ್ವಹಿಸಿ, ವಂದಿಸಿದರು. ಬಿಜಿವಿಎಸ್‌ ಜಿಲ್ಲಾ ಉಪಾಧ್ಯಕ್ಷೆ ಸಿ.ಸೌಭಾಗ್ಯ ಸ್ವಾಗತಿಸಿದರು. ರೈತ ಸಂಘದ ವಸಂತ ಕುಮಾರ್‌ ವೈಚಾರಿಕ ಗೀತೆ ಹಾಡಿದರು.

Latest Videos
Follow Us:
Download App:
  • android
  • ios