Asianet Suvarna News Asianet Suvarna News

ನರೇಂದ್ರ ಮೋದಿ ಜಗತ್ತು ಕಂಡ ಶ್ರೇಷ್ಠ ನಾಯಕ; ಸಿ.ಸಿ.ಪಾಟೀಲ್

ನರೇಂದ್ರ ಮೋದಿ ಜಗತ್ತು ಕಂಡ ಶ್ರೇಷ್ಠ ನಾಯಕ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಆಡಳಿತಕ್ಕಾಗಿ ಒಂದು ದಿನವೂ ರಜೆಯಿಲ್ಲದೇ, ವಿಶ್ರಾಂತಿ ಪಡೆಯದೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಪಸ್ಸಿನ ಫಲ, ಹಲವಾರು ಸತ್ಪುರುಷರ ಆಶೀರ್ವಾದದಿಂದ ದೇಶದ ಸಂಸ್ಕೃತಿ ಹಾಗೂ ಸಮಾಜವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.

Narendra Modi greatest leader in the world says cc patil at naragunda rav
Author
First Published Sep 18, 2022, 2:13 PM IST

ನರಗುಂದ (ಸೆ.18) : ಭಾರತ ಒಳಗೊಂಡಂತೆ ಜಗತ್ತು ಕಂಡ ಶ್ರೇಷ್ಠ ನಾಯಕ, ದಾರ್ಶನಿಕ ರಾಜಕಾರಣಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡದ್ದು ನಮ್ಮೆಲ್ಲರ ಪುಣ್ಯ. ಮೋದಿಜಿ ಜನ್ಮದಿನದ ನಿಮಿತ್ಯ 15 ದಿನಗಳ ಕಾಲ ನಡೆಯುವ ಸೇವಾ ಪಾಕ್ಷಿಕದಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ. ಪಾಟೀಲ ಹೇಳಿದರು. ಅವರು ಶನಿವಾರ ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧೇಶ್ವರ ಗೋಶಾಲೆ ಆವರಣದಲ್ಲಿ ಬಿಜೆಪಿ ಲಯ®್ಸ… ಕ್ಲಬ್‌ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಹಗರಣಗಳಿಗೆ ಅವಕಾಶವಿಲ್ಲ; ಶಾಸಕ ಅರುಣ್ ಪೂಜಾರ

ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಆಡಳಿತಕ್ಕಾಗಿ ಒಂದು ದಿನವೂ ರಜೆಯಿಲ್ಲದೇ, ವಿಶ್ರಾಂತಿ ಪಡೆಯದೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಪಸ್ಸಿನ ಫಲ, ಹಲವಾರು ಸತ್ಪುರುಷರ ಆಶೀರ್ವಾದದಿಂದ ದೇಶದ ಸಂಸ್ಕೃತಿ ಹಾಗೂ ಸಮಾಜವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷ ಕರೆಕೊಟ್ಟಂತೆ ಕಾರ್ಯಕರ್ತರು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿಕೊಳ್ಳದೇ, ದೇಶದಲ್ಲಿ ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಮತ್ತು ತಮ್ಮೆಲ್ಲರ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸದೇ ಪರಿಸರದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಆಚರಣೆ ಮಾಡಿಕೊಳ್ಳಬೇಕು ಎಂದರು.

ನರಗುಂದ ವಿಧಾಸಭಾ ಮತಕ್ಷೇತ್ರದಲ್ಲಿನ ಸಿದ್ದೇಶ್ವರ ಗೋಶಾಲೆಯಲ್ಲಿ 150ಕ್ಕೂ ಹೆಚ್ಚು ದೇಶಿ ತಳಿಯ ಗೋವುಗಳಿರುವ ಪ್ರದೇಶದಲ್ಲಿ ಹಲವಾರು ಅರಣ್ಯ ಸಂಪತ್ತಿನ ಗಿಡಮರಗಳನ್ನು ಬೆಳೆಸಲು ಸಸಿಗಳನ್ನು ನೆಟ್ಟು ಚಾಲನೆ ನೀಡಲಾಗಿದೆ. ಮತ್ತು ಲಯ®್ಸ… ಕ್ಲಬ್‌ ಸಹಯೋಗದಲ್ಲಿ ವಿವಿಧ ಕಡೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ಉಚಿತ ಔಷಧಿ ವಿತರಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಸೆ. 17 ರಿಂದ ಅಕ್ಟೋಬರ್‌ 2ರ ವರೆಗೆ 15 ದಿನಗಳ ಕಾಲ ಸೇವಾಕಾರ್ಯ ಮಾಡುವ ಮೂಲಕ ಜನ್ಮದಿನ ಆಚರಿಸಬೇಕು ಎಂದರು.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಬೈರನಹಟ್ಟಿದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಲಯ®್ಸ… ಕ್ಲಬ್‌ ಅಧ್ಯಕ್ಷ ಉಮೇಶಗೌಡ ಪಾಟೀಲ, ಹನುಮಂತ ಹವಾಲ್ದಾರ, ಬಿ.ಬಿ. ಐನಾಪೂರ, ಎಸ್‌.ಎಸ್‌. ಪಾಟೀಲ, ಮಹೇಶ ಹಟ್ಟಿ, ಮಂಜು ಮೆಣಸಗಿ, ಯುವಮೋರ್ಚಾ ಅಧ್ಯಕ್ಷ ವಿಠ್ಠಲ ಹವಾಲ್ದಾರ, ಪ್ರಕಾಶ ಪಟ್ಟಣಶೆಟ್ಟಿ, ಪ್ರಶಾಂತ ಜೋಶಿ, ಸಿದ್ದೇಶ ಹೂಗಾರ, ಸಂತೋಷ ಹಂಚಿನಾಳ, ಪ್ರಕಾಶ ಹಾದಿಮನಿ, ಸತೀಶ ಪಾಟೀಲ, ಚನ್ನಯ್ಯ ಸಂಗಳಮಠ, ಚಂದ್ರ ದಂಡಿನ, ಶಂಕರಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios