ಕಂಪ್ಲಿ(ಮಾ.04): ದೇಶದಲ್ಲಿ ಗ್ಯಾಸ್, ದಿನಸಿ ಸಾಮಾನು, ಪೆಟ್ರೋಲ್, ಡಿಸೇಲ್ಬೆಲೆ ಗಗನಕ್ಕೇರಿದ್ದು, ಈ ಕುರಿತು ಜನಸಾಮಾನ್ಯರು ಸರ್ಕಾರದ ವಿರುದ್ಧ ಎಷ್ಟೇ ಹೋರಾಟಗಳನ್ನು ನಡೆಸಿದರೂ ಪ್ರಯೋಜನವಿಲ್ಲ. ಇದಕ್ಕೆಲ್ಲ ಪರಿಹಾರ ದೊರಕಬೇಕು ಎಂದರೆ ಒಂದೇ ಮಾರ್ಗ, ಅದು ಕಾಂಗ್ರೆಸ್‌ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಎಂದು ಕೊರ್ಲಗುಂದಿ ಕ್ಷೇತ್ರ ಜಿಪಂ ಸದಸ್ಯ ನಾರಾ ಭರತ್‌ ರೆಡ್ಡಿ ಹೇಳಿದ್ದಾರೆ. 

ಪಟ್ಟಣದ ಎನ್‌ಎಸ್‌ಯುಐ ಅಧ್ಯಕ್ಷ ಎಂ. ಅಮಿತ್‌ ಗೌಡ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಕಬಳಿಸುವ ದುರುದ್ದೇಶದಿಂದ ಮಾಜಿ ಶಾಸಕ ಟಿ.ಎಚ್. ಸುರೇಶ್‌ ಬಾಬು ನೂತನ ವಿಜಯನಗರ ಜಿಲ್ಲೆಯಿಂದ ಕಂಪ್ಲಿ ಕೈಬಿಡುವುದಕ್ಕೆ ಕಾರಣೀಭೂತರಾಗಿದ್ದಾರೆ. ಸಕ್ಕರೆ ಕಾರ್ಖಾನೆ ಜಾಗ ಇಲ್ಲಿನ ರೈತರ ಸ್ವತ್ತು. ಅದನ್ನು ಲೂಟಿ ಮಾಡಲು ನಾವು ಬಿಡುವುದಿಲ್ಲ. ಮುಂಬರುವ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು.

ರಾಸಲೀಲೆ ಬಾಂಬ್ : ಪದೆ ಪದೆ ಇದಕ್ಕಾಗೇ ಮಾಜಿ ಸಿಎಂ ಒಬ್ರು ವೈನಾಡ್‌ಗೆ ಹೋಗ್ತಿದ್ದಾರೆ

ಮುಂಬರುವ ಜಿಪಂ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಬಿಜೆಪಿಗೆ ಬಿಟ್ಟು ಕೊಡದೆ ಎಲ್ಲ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಜಯಗಳಿಸುತ್ತ​ದೆ. ಅಲ್ಲದೇ ಕಂಪ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಕಾರಣಕ್ಕೂ ಸುರೇಶ್‌ ಬಾಬು  ಗೆಲ್ಲುವುದಿಲ್ಲ. ಶಾಸಕ ಸ್ಥಾನ ಅವರಿಗೆ ಕನಸಾಗಿಯೇ ಉಳಿಯುತ್ತದೆ. ಜೆ.ಎನ್. ಗಣೇಶ್ಶಾಸಕರಾದಾಗಿನಿಂದ ಕಂಪ್ಲಿ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಾರೆ ಎಂದು ತಿಳಿಸಿದರು.

ಆನಂತರ ಕಂಪ್ಲಿಯ ಕಾಂಗ್ರೆಸ್ಯುವ ಮುಖಂಡ, ಜಿಪಂ ಸದಸ್ಯ ನಾರಾ ಭರತ್ರೆಡ್ಡಿ ಅವ​ರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಇಟಿಗಿ ಬಸವರಾಜಗೌಡ, ಪುರಸಭೆ ಸದಸ್ಯ ಪಿ. ಮೌಲಾ, ಬಳ್ಳಾರಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ, ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ, ಬ್ಲಾಕ್ಯುವ ಕಾಂಗ್ರೆಸ್ತಾಲೂಕು ಅಧ್ಯಕ್ಷ ಶಶಿ, ಉಪಾಧ್ಯಕ್ಷ ಯು​ಸೂ​ಫ್, ಪ್ರಧಾನ ಕಾರ್ಯದರ್ಶಿ ಜಿ. ಗುರು, ಮುಖಂಡರಾದ ಬಳೆ ಮಲ್ಲಿಕಾರ್ಜುನ, ಪ್ರಮುಖರಾದ ಚೇತನ್, ಖಾಜಾ ಹುಸೇನ್, ಮಣ್ಣೂರು ವೀರೇಶ್, ಶಂಭು, ಫಾರೂಕ್, ರಿಯಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.