Asianet Suvarna News Asianet Suvarna News

ರಾಸಲೀಲೆ ಬಾಂಬ್ : ಪದೆ ಪದೆ ಇದಕ್ಕಾಗೇ ಮಾಜಿ ಸಿಎಂ ಒಬ್ರು ವೈನಾಡ್‌ಗೆ ಹೋಗ್ತಿದ್ದಾರೆ

ಮಾಜಿ ಮುಖ್ಯಮಂತ್ರಿಯೋರ್ವರು ಪದೇ ಪದೇ ವೈನಾಡ್‌ಗೆ ಭೇಟಿ ನೀಡುತ್ತಿದ್ದಾರೆ. ಅವರು ಇದೇ ಕಾರಣಕ್ಕೆ ಅಲ್ಲಿಗೆ ಹೋಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. 

Rajashekhar Mulali Talks  About Karnataka Former CM Sex Scandal snr
Author
Bengaluru, First Published Mar 4, 2021, 7:43 AM IST

ಬಳ್ಳಾರಿ (ಮಾ.04):  ಸಚಿವ ರಮೇಶ್‌ ಜಾರಕಿಹೊಳಿ ಅವರು ಮಹಿಳೆಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿರುವ ವೀಡಿಯೋಗಳಂತೆಯೇ ರಾಜ್ಯದ 19 ರಾಜಕೀಯ ನಾಯಕರ ಅಶ್ಲೀಲ ಸಿಡಿಗಳಿವೆ ಎಂದು ಹೇಳಲಾಗುತ್ತಿದೆ. ಇದನ್ನೇ ಇಟ್ಟುಕೊಂಡು ಕೆಲವರು ಆಟವಾಡುತ್ತಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಅಶ್ಲೀಲದ ವೀಡಿಯೋಗಳನ್ನು ಬಳಸಿಕೊಳ್ಳುವವರಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಣ್ಣಾ ಫೌಂಡೇಶನ್‌ ಅಧ್ಯಕ್ಷ ರಾಜಶೇಖರ ಮುಲಾಲಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯದಲ್ಲಿರುವ ಶೇ. 70ರಷ್ಟುಮಂದಿ ಈ ರೀತಿಯ ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ರಾಜಕೀಯ ನಾಯಕರು, ಗಣ್ಯರ ಗೌಪ್ಯ ಸಂಗತಿಗಳನ್ನು ವೀಡಿಯೋ ಮಾಡುವ ಏಜೆನ್ಸಿಗಳೇ ಕೆಲಸ ಮಾಡುತ್ತಿವೆ. ರಮೇಶ್‌ ಜಾರಕಿಹೊಳಿ ಅವರಿಗೆ ಸೇರಿದ ಎನ್ನಲಾದ ವೀಡಿಯೋ ನೋಡಿದಾಗ ಅನೇಕ ಅನುಮಾನಗಳು ಹುಟ್ಟುತ್ತವೆ. ಹಳೆಯ ವೀಡಿಯೋ ಎಂದು ಕಂಡು ಬರುತ್ತದೆ. ಒಪ್ಪಿತ ಲೈಂಗಿಕ ಕ್ರಿಯೆ ಎಂಬ ಅನುಮಾನ ಮೂಡಿಸುತ್ತದೆ. ವೀಡಿಯೋ ಬಹಿರಂಗ ಹಿಂದೆ ರಾಜಕೀಯ ಷಡ್ಯಂತ್ರ್ಯ ನಡೆದಿರುವ ಗುಮಾನಿಗಳಿವೆ ಎಂದರು.

ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ತನಿಖೆ ಮಾಡುವುದು ಕೂಡ ರಾಜ್ಯ ಸರ್ಕಾರ. ಈ ಹಿಂದೆ ಮಾಜಿ ಸಚಿವ ರೇಣುಕಾಚಾರ್ಯ, ಹಾಲಪ್ಪ, ಎಚ್‌.ವೈ. ಮೇಟಿ, ಕಳಕಪ್ಪ ಬಂಡಿ ಸೇರಿದಂತೆ ಅನೇಕರ ಸಿಡಿಗಳ ಕಥೆ ಏನಾಯ್ತು? ಎಂದು ಪ್ರಶ್ನಿಸಿದರು.

MLA,MP ಸೇರಿದಂತೆ ಹಲವರ ಸಿ.ಡಿ. ಇವೆ: ಹೊಸ ಬಾಂಬ್ ಸಿಡಿಸಿದ ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ...

ರಮೇಶ್‌ ಜಾರಕಿಹೊಳಿ ಅಶ್ಲೀಲ ವಿಡಿಯೋ ಬಹಿರಂಗ ಪ್ರಕರಣದಲ್ಲಿ ಸಂತ್ರಸ್ತೆ ಮಹಿಳೆ ದೂರು ಕೊಟ್ಟಿಲ್ಲ. ಸಂತ್ರಸ್ತೆಯ ಗಂಡನೂ ದೂರು ಕೊಟ್ಟಿಲ್ಲ. ಸಚಿವರ ಹೆಂಡತಿಯೂ ದೂರು ಕೊಟ್ಟಿಲ್ಲ. ಹೀಗಾಗಿ, ಪ್ರಕರಣ ಪ್ರಮುಖ ತಿರುವು ಪಡೆದುಕೊಳ್ಳುವುದಿಲ್ಲ. ವೀಡಿಯೋದಲ್ಲಿಯ ವ್ಯಕ್ತಿಯ ಮಾನ ಹರಾಜು ಮಾಡಬಹುದೇ ವಿನಹ ಕಾನೂನಾತ್ಮಕವಾಗಿ ಏನು ಮಾಡಲಾಗದು. ವಿಡಿಯೋದಲ್ಲಿ ಕಂಡು ಬಂದಿರುವ ಮಹಿಳೆ ನಿಜಕ್ಕೂ ಸಂತ್ರಸ್ತೆಯಾಗಿದ್ದರೆ ಎಫ್‌ಐಆರ್‌ ಮಾಡಿಸಿ, ಪ್ರಕರಣವನ್ನು ಯಾವುದೇ ಹಂತಕ್ಕಾದರೂ ಕೊಂಡೊಯ್ಯಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಮಾಜಿ ಸಿಎಂ ವೈನಾಡ್‌ಗೆ: ಮಾಜಿ ಮುಖ್ಯಮಂತ್ರಿಯೊಬ್ಬರು ಆಗಾಗ್ಗೆ ವೈನಾಡ್‌ಗೆ ಹೋಗುತ್ತಿದ್ದಾರೆ. ಏಕೆ ಹೋಗುತ್ತಾರೆ? ಇದೇ ರೀತಿಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾರೆ. ಇದು ಯಾರಿಗೂ ಬಿಟ್ಟದ್ದಲ್ಲ. ಕೆಲವರಿಗೆ ಇದು ಹವ್ಯಾಸವಾಗಿ ಬಿಟ್ಟಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ರಾಜಶೇಖರ ಮುಲಾಲಿ ಹೇಳಿದರು.

Follow Us:
Download App:
  • android
  • ios