ನಂಜನಗೂಡು 20ನೇ ವಾರ್ಡ್ ಉಪ ಚುನಾವಣೆ: ಬಿಜೆಪಿ ಗೆಲುವು

ಪಟ್ಟಣದ 20ನೇ ವಾರ್ಡ್ನ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಅತ್ತಿಖಾನೆ ಅವರು ಜಯಬೇರಿ ಬಾರಿಸುವ ಮೂಲಕ ನಗರಸಭೆಯ ಸದಸ್ಯರಾಗಿ ಆಯ್ಕೆಯಾದರು.

Nanjangudu 20th Ward by-election: BJP wins snr

 ನಂಜನಗೂಡು :  ಪಟ್ಟಣದ 20ನೇ ವಾರ್ಡ್ನ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಅತ್ತಿಖಾನೆ ಅವರು ಜಯಬೇರಿ ಬಾರಿಸುವ ಮೂಲಕ ನಗರಸಭೆಯ ಸದಸ್ಯರಾಗಿ ಆಯ್ಕೆಯಾದರು.

ಈ ಹಿಂದೆ 20ನೇ ವಾರ್ಡ್ನ ಸದಸ್ಯರಾಗಿದ್ದ ದೊರೆಸ್ವಾಮಿ ಅವರು ರಾಜೀನಾಮೆ ನೀಡಿ ಕಾಂಗ್ರೆಸ್ಸೇರ್ಪಡೆಗೊಂಡಿದ್ದರು. ತೆರವಾದ ಸ್ಥಾನಕ್ಕೆ ಡಿ. 27ರಂದು ಚುನಾವಣೆ ನಡೆಸಲಾಗಿತ್ತು. ಬಿಜೆಪಿ ಪಕ್ಷದಿಂದ ಮಹೇಶ್ ಅತ್ತಿಖಾನೆ, ಕಾಂಗ್ರೆಸ್ಪಕ್ಷದಿಂದ ದೊರೆಸ್ವಾಮಿ, ಜೆಡಿಎಸ್ ನಿಂದ ಸುಬ್ರಹ್ಮಣ್ಯ, ಅಮ್ ಆದ್ಮಿ ಪಕ್ಷದಿಂದ ಜಯಲಕ್ಷ್ಮಿ ಸ್ಪರ್ಧಿಸಿದ್ದರು. 568 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಬಿಜೆಪಿ ಪಕ್ಷದ ಮಹೇಶ್ ಅತ್ತಿಖಾನೆ, 231 ಮತಗಳನ್ನು ಪಡೆದು ವಿಜಯಿಶಾಲಿಯಾದರೆ ಕಾಂಗ್ರೆಸ್ಪಕ್ಷದ ದೊರೆಸ್ವಾಮಿ 186 ಮತ ಪಡೆದು ಸೋಲು ಅನುಭವಿಸಿದರು. ಜೆಡಿಎಸ್ ಪಕ್ಷದ ಸುಬ್ರಮಣ್ಯ 144 ಮತ, ಅಮ್ ಆದ್ಮಿ ಪಕ್ಷದ ಜಯಲಕ್ಷ್ಮಿ 5 ಮತಗಳನ್ನು ಪಡೆದರು. 2 ಮತಗಳು ನೋಟಾಕ್ಕೆ ಚಲಾವಣೆಯಾಗಿದ್ದವು.

ನೂತನ ಸದಸ್ಯರಿಗೆ ಚುನಾವಣಾಧಿಕಾರಿಯಾಗಿದ್ದ ನಿರಾವರಿ ಇಲಾಖೆಯ ಎಇಇ ಕೃಷ್ಣ ಪ್ರಮಾಣ ಪತ್ರ ವಿತರಿಸಿದರು.

ನೂತನ ಸದಸ್ಯ ಮಹೇಶ್ ಅತ್ತಿಖಾನೆ ಮಾತನಾಡಿ, ನನ್ನ ಗೆಲುವು ಬಿಜೆಪಿ ಪಕ್ಷದ ಕಾರ್ಯಕರ್ತರ, ಮುಖಂಡರ ಹಾಗೂ ಪ್ರಜ್ಞಾವಂತ ಮತದಾರರ ಗೆಲುವು. ಬಿಜೆಪಿ ಪಕ್ಷ ನಂಜನಗೂಡಿನಲ್ಲಿ ಬಲವಾಗಿದೆ ಎಂಬುದಕ್ಕೆ ಈ ಚುನಾವಣೆ ಉದಾಹರಣೆ. ಜೊತೆಗೆ ಲೋಕಸಭೆ ಚುನಾವಣೆಗೂ ಕೂಡ ಈ ಚುನಾವಣೆ ದಿಕ್ಸೂಚಿಯಾಗಲಿದೆ. ಸಕ್ರೀಯ ರಾಜಕಾರಣದ ಅನುಭವ ಇಲ್ಲದ ನನಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ಒಮ್ಮತದಿಂದ ಕೆಲಸ ಮಾಡಿದ್ದರಿಂದಾಗಿ ನಾನು ಗೆಲ್ಲಲು ಸಾಧ್ಯವಾಯಿತು. ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ಮಾಜಿ ಶಾಸಕ ಬಿ. ಹರ್ಷವರ್ಧನ್, ಸಂಸದ ವಿ. ಶ್ರೀನಿವಾಸಪ್ರಸಾದ್, ನನ್ನ ಪರವಾಗಿ ಪ್ರಚಾರ ನಡೆಸಿದ್ದ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ನಿರಂಜನ್, ಎಸ್. ಮಹದೇವಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ನಗರಸಭಾ ಸದಸ್ಯ ಮಹದೇವಪ್ರಸಾದ್, ಮುಖಂಡರಾದ ವಿನಯ್ಕುಮಾರ್, ಬಾಲಚಂದ್ರ, ಎನ್.ಸಿ. ಬಸವಣ್ಣ, ಅನಂತ್, ಸಂಜಯ್ ಶರ್ಮ, ಶ್ರೀಕಂಠ, ಮಹೇಶ್, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios