ಶಿವಮೊಗ್ಗ : ದೇಗುಲದ ಮುಂದೆ ನಂದಿ ಪೀಠ ಶಾಸನ ಪತ್ತೆ

ಶಿವಮೊಗ್ಗದ ತಡಸದಲ್ಲಿ ನಂದಿಪೀಠ ಶಾಸಕ ಪತ್ತೆಯಾಗಿದೆ. ಹೊಯ್ಸಳರ ಕಾಲದ ಕ್ರಿ.ಶ. 13ನೇ ಶತಮಾನದ ನಂದಿ ಪೀಠ ಶಾಸನ ಪತ್ತೆಮಾಡಲಾಗಿದೆ.

Nandipeeta Stone Inscription Found in Shivamogga

ಶಿವಮೊಗ್ಗ [ಅ.07]:  ಭದ್ರಾವತಿ ತಾಲೂಕಿನ ತಡಸಗ್ರಾಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್‌. ಶೇಜೇಶ್ವರ ಅವರು ಕ್ಷೇತ್ರಕಾರ್ಯಕೈಗೊಂಡಾಗ ಗ್ರಾಮದ ಮಧ್ಯದಲ್ಲಿ ರಾಷ್ಟ್ರಕೂಟರ ಕಾಲದ ಕ್ರಿ.ಶ. 10ನೇ ಶತಮಾನದ ತುರುಗೋಳು ವೀರಗಲ್ಲು ಶಾಸನ, ಇದೇ ಗ್ರಾಮದ ವೀರಭದ್ರದೇವಾಲಯದ ಮುಂದೆ ಹೊಯ್ಸಳರ ಕಾಲದ ಕ್ರಿ.ಶ. 13ನೇ ಶತಮಾನದ ನಂದಿ ಪೀಠ ಶಾಸನ ಪತ್ತೆಮಾಡಿದ್ದಾರೆ.

ತಡಸ ಗ್ರಾಮದ ಮಧ್ಯೆದಲ್ಲಿ ತುರುಗೋಳು ವೀರಗಲ್ಲು ಶಾಸನ ಪತ್ತೆಯಾಗಿದ್ದು, ಇದುಗ್ರಾನೈಟ್‌ ಶಿಲೆಯಿಂದ ಕೆತ್ತಲ್ಪಟ್ಟಿದೆ. ಒಂದುವರೇ ಮೀಟರ್‌ ಉದ್ದ ಹಾಗೂ 65 ಸೆ.ಮೀ ಆಗಲವಾಗಿದ್ದು, ಹಳೆಗನ್ನಡ ಶಾಸನವನ್ನು ಹೊಂದಿದೆ. ಈ ಶಿಲ್ಪವು ಮೂರು ಪಟ್ಟಿಕೆಗಳಿಂದ ಕೂಡಿದ್ದು, ವೀರಗಲ್ಲಿನ ಸುತ್ತಲೂ ಶಾಸನವನ್ನು ಕಾಣಬಹುದು.

ಮೊದಲ ಪಟ್ಟಿಕೆ: ವೀರನುಬಿಲ್ಲು ಬಾಣಗಳನ್ನು ಹಿಡಿದು ಹೋರಾಡುತ್ತಿರುವುದು, ವೀರನ ಸುತ್ತ ಗೋವುಗಳು ನಿಂತಿರುವುದು, ಒಬ್ಬ ಶತ್ರುವು ಕೆಳಗೆ ಬಿದ್ದಿದ್ದು ಇನ್ನೊಬ್ಬ ಶತ್ರುವು ವೀರನೊಂದಿಗೆ ಬಿಲ್ಲು ಬಾಣವನ್ನು ಹಿಡಿದು ಹೊರಾಡುತ್ತಿರುವುದು ಕಂಡುಬರುತ್ತದೆ.

ಎರಡನೇ ಪಟ್ಟಿಕೆ: ಇಬ್ಬರು ಅಪ್ಸರೆಯರು ವೀರನನ್ನು ತಮ್ಮ ತೋಳುಗಳಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ.

ಮೂರನೇ ಪಟ್ಟಿಕೆ: ವೀರನು ಪೀಠದ ಮೇಲೆ ಕುಳಿತಿರುವುದು, ಅಂದರೆ ಇಲ್ಲಿ ಅವನು ಸ್ವರ್ಗಸ್ಥನಾಗಿರುವ ಕಲ್ಪನೆ ಕಂಡುಬರುತ್ತದೆ. ಪಕ್ಕದಲ್ಲಿ ಚಾಮರಧಾರಣಿಯರು ಚಾಮರ ಹಿಡಿದು ನಿಂತಿರುವುದು ಕಂಡುಬರುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಪೀಠದ ಮೇಲೆ ದೇವರ ಬದಲಿ ವ್ಯಕಿಯನ್ನುಕುರಿಸುತ್ತಿರುವುದು ವಿಶೇಷವಾಗಿದೆ.

ಶಾಸನದ ಮಹತ್ವ: ಶಾಸನವು ತಂಬಾತೃಟಿತವಾಗಿದ್ದು ಹಳೆಗನ್ನಡದಲ್ಲಿದೆ, ಸ್ವಸ್ತಿ ವರ್ಷ ಕಲಿ ಉಲ್ಲೇಖ ಮಾತ್ರಕಂಡುಬರುತ್ತದೆ. ಇದು ಬಹುಶಃ ಗೋವುಗಳನ್ನು ಕದಿಯಲು ಬಂದ ಕಳ್ಳರ ವಿರುದ್ಧ ಹೋರಾಡಿ ವೀರ ಮರಣ ಹೊಂದಿರುವುದರ ಮಾಹಿತಿಯನ್ನು ಒಳಗೊಂಡಿರಬಹುದು ಎನ್ನಬಹುದು. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗಿದೆ ಎಂದು ತೇಜೇಶ್ವರ ತಿಳಿಸಿದ್ದಾರೆ.

ನಂದಿ ಪೀಠ ಶಾಸನ:  ತಡಸ ಗ್ರಾಮದ ವೀರಭದ್ರದೇವಾಲಯದ ಮುಂದೇ ನಂದಿ ಪೀಠ ಶಾಸನ ಪತ್ತೆಯಾಗಿದ್ದು ಇದು ಸಿಸ್ಟ್‌ ಶಿಲೆಯಿಂದ ಕೂಡಿದೆ. 58 ಸೆ.ಮೀ ಉದ್ದ 22 ಸೆ.ಮೀ. ಅಗಲವಾಗಿದೆ. ಪೀಠದ ಬಲಭಾಗದಲ್ಲಿ ಎರಡು ಸಾಲಿನ ಹಳೆಗನ್ನಡದ ಶಾಸನವಿದ್ದು, ಲಿಪಿಯ ಆಧಾರದ ಮೇಲೆ ಇದು ಕ್ರಿ.ಶ. ಸುಮಾರು 13ನೇ ಶತಮಾನದ ಕಾಲದ ಹೊಯ್ಸಳರ ಕಾಲದ್ದು ಎನ್ನಲಾಗಿದೆ.

ಆರ್‌.ಶೇಜೇಶ್ವರ ಅವರು ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಗ್ರಾಮಸ್ಥರಾದ ಮಹಮ್ಮದ್‌ಜಲಾಲ್‌, ದೇವೇಂದ್ರಪ್ಪ, ಐತಾಳು, ಚೆನ್ನಪ್ಪ, ಶಾಸನ ಓದಲು ಸಹಕರಿಸಿದ ಡಾ. ಜಗದೀಶ, ರವಿಕುಮಾರ ನವಲಗುಂದ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಭದ್ರಾವತಿ ತಾಲೂಕಿನ ತಡಸ ಗ್ರಾಮದಲ್ಲಿ ಪತ್ತೆಯಾದ ವೀರಗಲ್ಲು ಶಾಸನ, ಇದೇ ಗ್ರಾಮದ ವೀರಭದ್ರದೇವಾಲಯದ ಮುಂದೆ ದೊರೆತ ನಂದಿ ಪೀಠ ಶಾಸನ.

Latest Videos
Follow Us:
Download App:
  • android
  • ios