ನಾಲ್ಕು ಜಿಲ್ಲೆಯಲ್ಲಿರದ ನಂದಿನಿ ಕೆಫೆ ಮೂ ಗುಂಡ್ಲುಪೇಟೆಯಲ್ಲಿ ಆರಂಭ!
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಂದಿನಿ ಕೆಫೆ ಮೂ ಆರಂಭಕ್ಕೆ ಕೆಎಂಎಫ್ ಹಾಗೂ ಅಮುಲ್ ಮುಂದಾಗಿದೆ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ : ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಂದಿನಿ ಕೆಫೆ ಮೂ ಆರಂಭಕ್ಕೆ ಕೆಎಂಎಫ್ ಹಾಗೂ ಅಮುಲ್ ಮುಂದಾಗಿದೆ.
ರಾಜ್ಯದಲ್ಲಿ 14 ನಂದಿನಿ ಕೆಫೆ ಮೂ ಆರಂಭವಾಗಿದ್ದು, ಗುಂಡ್ಲುಪೇಟೆಯಲ್ಲಿ ಜೂ.19 ಬುಧವಾರ 15 ನೇ ನಂದಿನಿ ಕೆಫೆ ಮೂ ಪಟ್ಟಣದ ಮೈಸೂರು-ಊಟಿ ಹೆದ್ದಾರಿಯ ಕೆಇಬಿ ಕಚೇರಿ ಮುಂಭಾಗದ ಕಟ್ಟಡದಲ್ಲಿ ಚಾಲನೆಯಾಗಲಿದೆ
ಕೆಎಂಎಫ್ ಮತ್ತು ಅಮುಲ್ ಹಾಗೂ ಪಟ್ಟಣದ ವೈದ್ಯ ಡಾ. ಚಂದ್ರಚೂಡ ಸಹಯೋಗದಲ್ಲಿ ನಾಲ್ಕು ಜಿಲ್ಲೆಗಳ ಆರಂಭವಾಗದ ನಂದಿನಿ ಕೆಫೆ ಮೂ ಹೈಟೆಕ್ ಆಗಿ ಆರಂಭಕ್ಕೆ ಕೆಎಂಎಫ್ ಹಾಗು ಅಮುಲ್ ಸಿದ್ಧತೆ ನಡೆಸಿದೆ.
ಕೆಎಂಎಫ್ ಮೊದಲಿಗೆ ಗ್ರಾಹಕರಿಗೆ ಹಾಲು, ಮೊಸರು ಸರಬರಾಜು ಮಾಡುತ್ತಿದ್ದು, ಇದೀಗ ಬದಲಾದ ಸನ್ನಿವೇಶದಲ್ಲಿ ಗ್ರಾಹಕರಿಗೆ ತಕ್ಕಂತೆ ಫೀಜಾ, ಬರ್ಗರ್, ಸ್ಯಾಂಡ್ ವೀಜ್, ಪಾಸ್ಟಾ ಸೇರಿದಂತೆ ಇನ್ನಿತರ ರುಚಿಕವಾದ ತಿನಿಸನ್ನು ನಂದಿನಿ ಕೆಫೆ ಮೂಲಕ ನೀಡಲು ಮುಂದಾಗಿದೆ.
ನಂದಿನಿ ಹಾಲಿನ ಉತ್ಪನ್ನಗಳನ್ನು ಬಳಸಿ ನಂದಿನಿ ಚೀಜ್, ನಂದಿನಿ ಪನ್ನೀರ್ ಬಳಸಿ ಉತ್ಪಾದಿಸುವ ಫೀಜಾ, ಬರ್ಗರ್, ಸ್ಯಾಂಡ್ ವೀಜ್, ಪಾಸ್ಟಾ, ಅಲ್ಲದೆ, ವಿವಿಧ ಬಗೆಯ ಐಸ್‌ಕ್ರೀಂಗಳು ಗ್ರಾಹಕರಿಗೆ ಸಿಗಲಿವೆ.
ಇಂದು ನಂದಿನಿ ಕೆಫೆ ಮೂ ಉದ್ಘಾಟನೆ
ಪಟ್ಟಣದ ಕೆಇಬಿ ಕಚೇರಿ ಮುಂಭಾಗ ಜೂ.19 ರ ಬುಧವಾರ ಬೆಳಗ್ಗೆ 11 ಕ್ಕೆ ನಂದಿನಿ ಕೆಫೆ ಮೂ ಉದ್ಘಾಟನೆ ಸಮಾರಂಭ ನಡೆಯಲಿದೆ.
ನಂದಿನಿ ಕೆಫೆ ಮೂ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಸಂಸದ ಸುನೀಲ್ ಬೋಸ್, ಕರ್ನಾಟಕ ಹಾಲು ಮಹಾ ಮಂಡಳದ ಅಧ್ಯಕ್ಷ ಭೀಮಾ ನಾಯಕ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಆಗಮಿಸಲಿದ್ದಾರೆ.
ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು,ಕೆಎಂಎಫ್ ನಿರ್ದೇಶಕ ಎಂ.ನಂಜುಂಡಸ್ವಾಮಿ,ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡ ಪ್ರಸಾದ್, ಎಚ್.ಎಸ್.ಬಸವರಾಜು, ಎಸ್.ಮಹದೇವಸ್ವಾಮಿ, ಎಂಪಿ.ಸುನೀಲ್, ಸದಾಶಿವ ಮೂರ್ತಿ, ಶಾಹುಲ್ ಅಹಮದ್, ಶೀಲಾ ಪುಟ್ಟರಂಗಶೆಟ್ಟಿ, ಕೆ.ಕೆ.ರೇವಣ್ಣ, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶ್ವಾಸ ಭರಿತ ನಂದಿನಿ ಹಾಲಿನ ಉತ್ಪನ್ನಗಳ ಬಳಕೆ ಮಾಡಿ ತಯಾರಾಗುವ ಫೀಜಾ, ಬರ್ಗರ್, ಸ್ಯಾಂಡ್ ವೀಜ್, ಪಾಸ್ಟಾ, ಐಸ್‌ಕ್ರೀಂ, ಮಿಲ್ಕ್ ಶೇಕ್ ಸೇರಿದಂತೆ ನಂದಿನಿ ಉತ್ಪನ್ನಗಳನ್ನು ಗ್ರಾಹಕರು ಸವಿದು ಕೆಎಂಎಫ್ ಹಾಗೂ ಚಾಮುಲ್ ಬಲ ತುಂಬಲಿ.
-ಕೆ. ರಾಜಕುಮಾರ್,ವ್ಯವಸ್ಥಾಪಕ ನಿರ್ದೇಶಕ ಚಾಮುಲ್,