Asianet Suvarna News Asianet Suvarna News

ಬೆಂಗಳೂರು : ಮಾರ್ಚ್ ವೇಳೆಗೆ ಮೆಟ್ರೋ ಸುರಂಗ ಕಾಮಗಾರಿ?

ಚೀನಾದಿಂದ ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) ಫೆಬ್ರವರಿ ಮೊದಲ ವಾರದಲ್ಲಿ ಆಗಮಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಮಾಹಿತಿ ನೀಡಿದೆ.  ಮಾರ್ಚ್ 10ರ ಬಳಿಕ ಸುರಂಗ ಕೊರೆಯುವ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.

Namma Metro underpass  Work   Will begins From March
Author
Bengaluru, First Published Jan 11, 2020, 10:02 AM IST
  • Facebook
  • Twitter
  • Whatsapp

ಬೆಂಗಳೂರು (ಜ.11):  ವೆಲ್ಲಾರ ಜಂಕ್ಷನ್‌- ಪಾಟರಿಟೌನ್‌ ನಡುವಿನ ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಚೀನಾದಿಂದ ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) ಫೆಬ್ರವರಿ ಮೊದಲ ವಾರದಲ್ಲಿ ಆಗಮಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಮಾಹಿತಿ ನೀಡಿದೆ.

ವೆಲ್ಲಾರ ಜಂಕ್ಷನ್‌- ಪಾಟರಿಟೌನ್‌ (5.5 ಕಿ.ಮೀ) ನಡುವಿನ ಸುರಂಗ ಮಾರ್ಗವು ಡೈರಿ ವೃತ್ತ ಮತ್ತು ನಾಗವಾರ (14 ಕಿ.ಮೀ) ಮಧ್ಯದ ಅತಿ ಉದ್ದದ ಸುರಂಗ ಮಾರ್ಗವಾಗಿದೆ. ಎಲ್‌ ಆ್ಯಂಡ್‌ ಟಿ ಕಂಪನಿ 2019 ಫೆಬ್ರವರಿಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಟೆಂಡರ್‌ ಪಡೆದುಕೊಂಡಿದೆ. ಅಲ್ಲದೇ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಚೀನಾದ ರೈಲ್ವೆ ಕನ್ಸ್‌ಸ್ಟ್ರಕ್ಷನ್‌ ಹೆವಿ ಇಂಡಸ್ಟ್ರಿ ಕಾರ್ಪೊರೇಷನ್‌ ಲಿಮಿಟೆಡ್‌(ಸಿಆರ್‌ಸಿಎಚ್‌ಎಲ್‌) ಕಂಪನಿಯಿಂದ ನಾಲ್ಕು ಟಿಬಿಎಂ (ಟನ್ನಲ್‌ ಬೋರಿಂಗ್‌ ಮಷಿನ್‌- ಟಿಬಿಎಂ) ಯಂತ್ರಗಳನ್ನು ಬೆಂಗಳೂರಿಗೆ ತರಲಿದೆ. ಎರಡು ಟಿಬಿಎಂಗಳು ಫೆಬ್ರವರಿ ಮೊದಲ ವಾರದಲ್ಲಿ ಹಾಗೂ ಉಳಿದ ಮತ್ತೆರಡು ಫೆಬ್ರವರಿ ಕೊನೆಯ ವಾರದಲ್ಲಿ ತಲುಪುವ ಸಾಧ್ಯತೆ ಇದೆ. ಈ ಯಂತ್ರಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಿಬಿಎಂಗಳು ಬೆಂಗಳೂರಿಗೆ ಬಂದ ನಂತರ ನಿಗದಿತ ಸ್ಥಳಗಳಲ್ಲಿ ಯಂತ್ರಗಳನ್ನು ಅಳವಡಿಸಿ, ಸುರಂಗ ಕೊರೆಯುವ ಕಾರ್ಯವನ್ನು ಆರಂಭಿಸಲಾಗುವುದು. ಬಹುಶಃ ಮಾರ್ಚ್ 10ರ ಬಳಿಕ ಸುರಂಗ ಕೊರೆಯುವ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಮೆಟ್ರೋ 2ನೇ ಹಂತದಲ್ಲಿ ಗೊಟ್ಟಿಗೆರೆ- ನಾಗವಾರ(21.42 ಕಿ.ಮೀ ಉದ್ದ) ಮಾರ್ಗದಲ್ಲಿ ಸ್ವಾಗತ್‌ ಕ್ರಾಸ್‌- ನಾಗವಾರದವರೆಗೆ 13 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಮೊದಲಿಗೆ ಶಿವಾಜಿನಗರ- ವೆಲ್ಲಾರ ಜಂಕ್ಷನ್‌ ಮಾರ್ಗದಲ್ಲಿ ಎರಡು ಟಿಬಿಎಂಗಳನ್ನು ಅಳವಡಿಸಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ಮಾರ್ಗದಲ್ಲಿ ಭೂಸ್ವಾಧೀನ ಕುರಿತು ಸೇಂಟ್ಸ್‌ ಚಚ್‌ರ್‍ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದ ನಡುವೆ ವಿವಾದ ಬಗೆಹರಿಯದ ಕಾರಣ ಈ ಭಾಗದಲ್ಲಿ ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿದೆ. ಮತ್ತೆರಡು ಟಿಬಿಎಂ ಯಂತ್ರಗಳನ್ನು ಬಂಬೂ ಬಜಾರ್‌ ಮೈದಾನದಲ್ಲಿ ಅಳವಡಿಸಿ ಪಾಟರಿ ಟೌನ್‌ ಕಡೆ ಕಾಮಗಾರಿ ನಡೆಸಲಾಗುವುದು ಎಂದು ಮೆಟ್ರೋ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ ನ್ಯೂಸ್ : ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ...

ಸುರಂಗ ಮಾರ್ಗ :  ಸ್ವಾಗತ ಕ್ರಾಸ್‌- ವೆಲ್ಲಾರ ಜಂಕ್ಷನ್‌ (ಪ್ಯಾಕೇಜ್‌-1) 3.655 ಕಿ.ಮೀ ಉದ್ದದ ಮಾರ್ಗದ ಪೈಕಿ 2.88 ಕಿ.ಮೀ ಸುರಂಗ ಬರಲಿದ್ದು, ಒಟ್ಟು .1,526 ಕೋಟಿ ವೆಚ್ಚವಾಗಲಿದೆ. ಟ್ಯಾನರಿ ರಸ್ತೆ- ನಾಗವಾರ(ಪ್ಯಾಕೇಜ್‌ -4) 4.591 ಕಿ.ಮೀ. ಮಾರ್ಗದ ಪೈಕಿ 3.12 ಕಿ.ಮೀ ಸುರಂಗ ಬರಲಿದ್ದು, ಒಟ್ಟು .1,771.25 ಕೋಟಿ ವೆಚ್ಚವಾಗಲಿದೆ.

ಹೊಸ ವರ್ಷದ ಆರಂಭದಲ್ಲಿಯೇ ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ BMRCL...

ವೆಲ್ಲಾರ ಜಂಕ್ಷನ್‌- ಶಿವಾಜಿನಗರ (ಪ್ಯಾಕೇಜ್‌-2) 2.76 ಕಿ.ಮೀ. ಉದ್ದ ಹಾಗೂ ಶಿವಾಜಿನಗರ- ಪಾಟರಿ ಟೌನ್‌ (ಪ್ಯಾಕೇಜ್‌-3) 2.88 ಕಿ.ಮೀ. ಸೇರಿ ಒಟ್ಟು 5.63 ಕಿ.ಮೀ. ಉದ್ದದ ಸುರಂಗ ಕೊರೆಯಲಾಗುತ್ತದೆ. ಈ ಎರಡೂ ಪ್ಯಾಕೇಜ್‌ಗಳ ಕಾಮಗಾರಿಯನ್ನು ಎಲ… ಆ್ಯಂಡ್‌ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. .2,628 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

ಟಿಬಿಎಂ ಯಂತ್ರಕ್ಕೂ ನಾಮಕರಣ!

ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕೊರೆಯಲಿರುವ ನಾಲ್ಕು ಟಿಬಿಎಂಗಳಿಗೆ ಅವನಿ(ಭೂಮಿ), ಉರ್ಜಾ(ಶಕ್ತಿ), ಲವಿ(ಸಿಂಹ) ಹಾಗೂ ವಿಂಧ್ಯ(ಜ್ಞಾನ) ಎಂದು ಗುತ್ತಿಗೆದಾರರು ಹೆಸರನ್ನು ಇಟ್ಟಿದ್ದಾರೆ. ಟಿಬಿಎಂಗಳಿಗೆ ಹೆಸರು ಇಡಲು ಯಾವುದೇ ನಿರ್ದಿಷ್ಟಕಾರಣ ಇಲ್ಲ. ಸುರಂಗ ಕಾಮಗಾರಿ ವೇಳೆ ಯಂತ್ರಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಗುತ್ತಿಗೆದಾರರು ಈ ಹೆಸರನ್ನು ನಾಮಕರಣ ಮಾಡಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios