ಪ್ರಯಾಣಿಕರ ಗಮನಕ್ಕೆ: ನಾಳೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಇರಲ್ಲ
ಕೆಂಗೇರಿಯಿಂದ ಚಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸ ನಿರ್ಮಾಣ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಸುರಕ್ಷತಾ ಪರಿಶೀಲನೆ ನಡೆಸುವ ಹಿನ್ನಲೆಯಲ್ಲಿ ಮೆಟ್ರೋ ಸ್ಥಗಿತವಾಗಲಿದೆ.

ಬೆಂಗಳೂರು(ಸೆ.28): ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಪರಿಶೀಲನೆ ಹಿನ್ನಲೆಯಲ್ಲಿ ನೇರಳೆ ಮಾರ್ಗದಲ್ಲಿ ನಾಳೆ(ಶುಕ್ರವಾರ) ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಹೌದು, ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಪೂರ್ತಿ ದಿನ ಮೆಟ್ರೋ ಸ್ಥಗಿತವಾಗಲಿದೆ.
ಕೆಂಗೇರಿಯಿಂದ ಚಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಹೊಸ ನಿರ್ಮಾಣ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಸುರಕ್ಷತಾ ಪರಿಶೀಲನೆ ನಡೆಸುವ ಹಿನ್ನಲೆಯಲ್ಲಿ ಮೆಟ್ರೋ ಸ್ಥಗಿತವಾಗಲಿದೆ.
ಬೆಂಗಳೂರು ಮೆಟ್ರೋದಲ್ಲಿ ಫ್ರೀ ಆಗಿ ಹೇಗೆ ಪ್ರಯಾಣಿಸಬಹುದೆಂದು ತೋರಿಸಿದ ಯೂಟ್ಯೂಬರ್: ವಿಡಿಯೋ ವೈರಲ್
ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಹಾಗೂ ವೈಟ್ ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಿಲ್ದಾಣ, ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನೇರಳೆ ಮಾರ್ಗದ ನಮ್ಮ ಮೆಟ್ರೋ ಸ್ಥಗಿತಕ್ಕೆ ಪ್ರಯಾಣಿಕರು ಸಹಕರಿಸುವಂತೆ BMRCL ಮನವಿ ಮಾಡಿದೆ.