ಶಾಸಕರು ದೆಹಲಿಗೆ ಹೋದರೆ ತಪ್ಪೇನು?: ಕಟೀಲ್‌

* ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ
* ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗೆ ಸಂಗೀತ ಕುರ್ಚಿ
* ಅಧಿವೇಶನ ವೇಳೆ ಮುಖ್ಯಮಂತ್ರಿ ದೆಹಲಿಗೆ ಹೋಗುವ ಪರಿಪಾಠ
 

Nalin Kumar Kateel Slams BJP Leaders grg

ಕಲಬುರಗಿ(ಜು.16): ಚುನಾವಣೆಗೆ ಇನ್ನೂ 2 ವರ್ಷವಿದ್ದರೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಗೀತ ಕುರ್ಚಿ ಸ್ಪರ್ಧೆ ನಡೆದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಲೇ ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ನಡೆದಿದೆ. ಸಿಎಂ ಹುದ್ದೆಗೆ ಸಂಗೀತದ ಕುರ್ಚಿ ಆಟ ಜೋರಾಗಿ ನಡೆದಿದೆ. ಸಿದ್ದರಾಮಯ್ಯ ರಾಜ್ಯದ ಜನರಿಗೆ ಬಹುದೊಡ್ಡ ವಂಚನೆ ಮಾಡಿದ್ದಾರೆ. ಮೊದಲು ಅಹಿಂದದ ಹೆಸರು ಹೇಳಿ ಸಿಎಂ ಆದರು. ನಂತರ ಆ ಸಮುದಾಯವನ್ನು ಮರೆತು ಬಿಟ್ಟರು ಎಂದು ಟೀಕಿಸಿದರು. ಇನ್ನು ಪಕ್ಷದ ಶಾಸಕರು ದೆಹಲಿಗೆ ವಿವಿಧ ಕೆಲಸಗಳಿಗೆ ಹೋಗುತ್ತಾರೆ, ಅವರು ದೆಹಲಿಗೆ ಹೋದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.

ದೇಶದಲ್ಲಿ ಎಲ್ಲ ಕೆಟ್ಟಕೆಲಸಗಳಿಗೆ ಪ್ರೇರಣೆಯೇ ಕಾಂಗ್ರೆಸ್‌: ನಳಿನ್‌ ಕುಮಾರ್‌

ಅಧಿವೇಶನ ವೇಳೆ ಮುಖ್ಯಮಂತ್ರಿ ಅವರು ದೆಹಲಿಗೆ ಹೋಗುವ ಪರಿಪಾಠವಿದೆ. ಹೀಗಾಗಿ ಹೋಗುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅವರ ವಿವೇಚನೆಗೆ ಬಿಟ್ಟದ್ದು ಎಂದು ಅಭಿಪ್ರಾಯಪಟ್ಟರು. ಕಲಬುರಗಿಗೂ ಮುನ್ನ ಬೀದರ್‌ಗೆ ಭೇಟಿ ನೀಡಿದ ನಳಿನ್‌ ಕುಮಾರ್‌ ಕಟೀಲ್‌ ಬೀದರ್‌ ಬಿಜೆಪಿಯ ನೂತನ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.
 

Latest Videos
Follow Us:
Download App:
  • android
  • ios