Asianet Suvarna News Asianet Suvarna News

ನಾರಾಯಣ ಗೌಡ ವಿಭಿಷಣ, ಬಿಎಸ್‌ವೈ ರಾಮ, KR ಪೇಟೆ ರಾಮರಾಜ್ಯ: ನಳಿನ್

ಕೆ. ಸಿ. ನಾರಾಯಣ ಗೌಡ ಕಲಿಯುಗದ ಭೀಷ್ಮ, ಸಿಎಂ ಬಿ. ಎಸ್. ಯಡಿಯೂರಪ್ಪ ರಾಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಗಳಿದ್ದಾರೆ. ಕೆ.ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪರ ಪ್ರಚಾರ ಮಾಡಿದ ನಳಿನ್ ಹೇಳಿದ್ದಿಷ್ಟು...

nalin kumar kateel compares narayan gowda bs yediyurappa to ramayana characters
Author
Bangalore, First Published Nov 23, 2019, 2:43 PM IST

ಮಂಡ್ಯ(ನ.23): ಕೆ. ಸಿ. ನಾರಾಯಣ ಗೌಡ ಕಲಿಯುಗದ ವಿಭಿಷಣ, ಸಿಎಂ ಬಿ. ಎಸ್. ಯಡಿಯೂರಪ್ಪ ರಾಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪರ ಅವರು ಪ್ರಚಾರ ನಡೆಸಿದ್ದಾರೆ.

ಕೆ. ಆರ್. ಪೇಟೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕೆ. ಆರ್‌. ಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿ, ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಕೆ. ಆರ್‌. ಪೇಟೆ. ಹಾಗಾಗಿ ಚುನಾವಣೆ ಪ್ರಚಾರವನ್ನು ಇಲ್ಲಿಂದ ನಾನು ಆರಂಭಿಸುತ್ತಿದ್ದೇನೆ ಎಂದು ಹೇಳಿದರು. 

ಸ್ವಾಭಿಮಾನ ಅಸ್ತ್ರ ಬಳಸಿದ ನಳಿನ್
ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟ ನಾಯಕನ ಊರು ಇದು. ಸ್ವಾಭಿಮಾನಕ್ಕಾಗಿ ನಾರಾಯಣಗೌಡ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದು ಅಧಿಕಾರದ ಸ್ವಾಭಿಮಾನವಲ್ಲ, ಅಭಿವೃದ್ಧಿಯ ಸ್ವಾಭಿಮಾನ ಎಂದಿದ್ದಾರೆ. ಆ ಮೂಲಕ ಲೋಕಸಭೆಯಲ್ಲಿ ಸುಮಲತಾ ಬಳಸಿದ ಸ್ವಾಭಿಮಾನ ಅಸ್ತ್ರ ಉಪಚುನಾವಣೆಯಲ್ಲಿ ಮತ್ತೊಮ್ಮೆ ಪ್ರಯೋಗವಾಗಿದೆ.

ಗೂಂಡಾ ರಾಜಕೀಯ, ಜಾತಿ ರಾಜಕೀಯ ಬಿಡ್ತೀವಿ:

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರಲು, ನೀವು ನಾರಾಯಣಗೌಡ ಅವರನ್ನು ಗೆಲ್ಲಿಸಬೇಕು. ನಾವು ಗೂಂಡಾ ರಾಜಕೀಯ, ಜಾತಿ ರಾಜಕೀಯ ಎಲ್ಲವನ್ನು ನಿಲ್ಲಿಸುತ್ತೇವೆ. ಮೊಟ್ಟ ಮೊದಲ ಬಾರಿಗೆ ರಾವಣನ ಪಾರ್ಟಿಯಿಂದ ರಾಮನ ಪಾರ್ಟಿಗೆ ಬಂದಿದ್ದು ವಿಭಿಷಣ. ರಾಕ್ಷಸರ ಜೊತೆ ಇದ್ರೆ ಮೋಕ್ಷ ಸಿಗಲ್ಲ ಎಂದು ರಾಮನ ಕಡೆ ಬಂದ. ಈಗ ಕಲಿಯುಗದ ವಿಭಿಷಣ ನಾರಾಯಣಗೌಡರು ಆಗಿದ್ದರೆ, ಯಡಿಯೂರಪ್ಪ ಅವರು ರಾಮ ಆಗಿದ್ದಾರೆ. ಈಗ ಕೆ. ಆರ್‌. ಪೇಟೆ ರಾಮ ರಾಜ್ಯವಾಗುತ್ತದೆ ಎಂದು ಹೇಳಿದ್ದಾರೆ.

ಕೆ. ಆರ್. ಪೇಟೆ: ಮತದಾರರ ಸೆಳೆಯಲು ಕಾಂಗ್ರೆಸ್ 'ಜಾದೂ' ಪ್ರಯೋಗ..!

ನಿಮಗೆ ರಾಮ ರಾಜ್ಯ ಬೇಕಾ ರಾವಣ ರಾಜ್ಯ ಬೇಕಾ? ರಾಮ ರಾಜ್ಯವಾಗಬೇಕು ಎಂದ್ರೆ ನಾರಾಯಣಗೌಡರು ಗೆಲ್ಲಬೇಕು. ಕೆಆರ್‌ಪೇಟೆಯಲ್ಲಿ ಈಗ ಜೋಡೆತ್ತುಗಳಿವೆ. ಕೆ. ಆರ್‌. ಪೇಟೆಯ ಜೋಡೆತ್ತು ವಿಜೆಯೇಂದ್ರ ಮತ್ತು ನಾರಾಯಣಗೌಡರು. ಈ ಜೋಡೆತ್ತುಗಳನ್ನು ತಾಕತ್ ಇದ್ದೋರು ನಿಲ್ಲಿಸಿ ಎಂದು ನಳಿನ್ ಕುಮಾರ್ ಸವಾಲೆಸೆದಿದ್ದಾರೆ.

'BJPಯವರು ದುಡ್ಡು, ಸೀರೆ ಏನ್ ಕೊಟ್ರೂ ಕಿತ್ಕೊಳ್ಳಿ, ಓಟ್ ಮಾತ್ರ ನಂಗೆ ಹಾಕಿ'..!

Follow Us:
Download App:
  • android
  • ios