ಬಾಗಲಕೋಟೆ: ಕಮತಗಿಗೆ ಮೈಸೂರು ಒಡೆಯರ ಕುಟುಂಬ ಭೇಟಿ, ಕೈಮಗ್ಗ ನೇಕಾರರ ಕೌಶಲ್ಯಕ್ಕೆ ಮೆಚ್ಚುಗೆ

ಈಗಾಗಲೇ ಮಹಾರಾಜ ದಂಪತಿಗಳು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು,ಕೊಂಡ್ಲಹಳ್ಳಿ,ಬಿಜಿ ಕೆರೆ,ಕೊಪ್ಪಳ ಜಿಲ್ಲೆಯ ಭಾಗ್ಯನಗರ, ಬಾಗಲಕೋಟೆ ಜಿಲ್ಲೆಯ ಇಲಕಲ್, ಸೂಳೇಬಾವಿ, ಕಮತಗಿ, ಗುಳೇದಗುಡ್ಡ, ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮಗಳ ಕೈಮಗ್ಗ ನೇಕಾರರ ಮನೆಗಳಿಗೆ ಭೇಟಿ ನೀಡಿ ಅವರ ಬದುಕನ್ನು ಹತ್ತಿರದಿಂದ ಗಮನಿಸಿದ್ದಾರೆ. 

Mysuru Wadiyar Family Visited to Kamatagi in Bagalkot grg

ಕಮತಗಿ(ಸೆ.08):  ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಕುಶಲ ನೇಕಾರರಾದ ಶ್ರೀನಿವಾಸ ಪಲ್ಲಾ ಅವರ ಮನೆಗೆ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ದ್ವಿತೀಯ ಸುಪುತ್ರಿ ಮಹಾರಾಣಿ ಮೀನಾಕ್ಷಿದೇವಿಯವರ ಸುಪುತ್ರ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಹಾಗೂ ಅವರ ಧರ್ಮಪತ್ನಿ ಸುಷ್ಮಾ ಜಿ.ವಾಣಿಯವರು, ಅನಿರೀಕ್ಷಿತವಾಗಿ ಭೇಟಿ ನೀಡಿ, ಕೈಮಗ್ಗ ನೇಕಾರಿಕೆಯ ಕರಕುಶಲತೆಯನ್ನು ಹಾಗೂ ನೇಕಾರರ ನಿತ್ಯ ಜೀವನದ, ಕುಟುಂಬ ನಿರ್ವಹಣೆಯ ಬಗ್ಗೆ ತಿಳಿದುಕೊಂಡರು. 

ಈ ಕುರಿತು ಮಾತನಾಡಿದ ವಿನ್ಯಸ ಪದವೀಧರೆಯೂ ಆಗಿರುವ ಮಹಾರಾಣಿ ಸುಷ್ಮಾ ಜಿ.ವಾಣಿಯವರು ನಾಡಿನ ಪರಂಪರೆಯಲ್ಲಿ ಸ್ವಾವಲಂಬಿ ಬದುಕಿಗೆ ತನ್ನದೇ ಆದ ಕೊಡುಗೆ ನೀಡಿರುವ ಕೈಮಗ್ಗ ನೇಕಾರರ ಉತ್ಪನ್ನಗಳು ಹಾಗೂ ಅವರ ಅಳಿವುಉಳಿವು ಅತ್ಯವಶ್ಯಕವಾಗಿವೆ ಎಂದರು.

ಬಾಗಲಕೋಟೆ: ಒಳಬೇಗುದಿ ಮಧ್ಯೆ ಒಗ್ಗಟ್ಟಿನ ಮಂತ್ರ;ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ

ಸೆಂಟ್ರಲ್ ಸಿಲ್ಕ್‌ಬೋರ್ಡನ ತರಬೇತಿ ವಿಜ್ಞಾನಿ ಎಂ.ಆರ್.ಇಟಗಿ ಮಾತನಾಡಿ, ನೇಕಾರರ ಉತ್ಪನ್ನಗಳಿಗೆ ಜಾಗತಿಕಮಟ್ಟದಲ್ಲಿ ಬೇಡಿಕೆ ತಂದುಕೊಡುವಲ್ಲಿ ಮಾಡಬಹುದಾದ ಬದಲಾವಣೆಯ ಕುರಿತು ಅಧ್ಯಯನ ಕೈಗೊಳ್ಳಲಾಗಿದ ಎಂದರು. 
ಈಗಾಗಲೇ ಮಹಾರಾಜ ದಂಪತಿಗಳು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು,ಕೊಂಡ್ಲಹಳ್ಳಿ,ಬಿಜಿ ಕೆರೆ,ಕೊಪ್ಪಳ ಜಿಲ್ಲೆಯ ಭಾಗ್ಯನಗರ, ಬಾಗಲಕೋಟೆ ಜಿಲ್ಲೆಯ ಇಲಕಲ್, ಸೂಳೇಬಾವಿ, ಕಮತಗಿ, ಗುಳೇದಗುಡ್ಡ, ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮಗಳ ಕೈಮಗ್ಗ ನೇಕಾರರ ಮನೆಗಳಿಗೆ ಭೇಟಿ ನೀಡಿ ಅವರ ಬದುಕನ್ನು ಹತ್ತಿರದಿಂದ ಗಮನಿಸಿದ್ದಾರೆ. ಈ ಹೊಸ ಬೆಳವಣಿಗೆಯಿಂದ ಕುಸಿದ ಜವಳಿ ಮಾರುಕಟ್ಟೆ ನಡುವೆ ಕಂಗಾಲಾಗಿರುವ ನೇಕಾರರ ಮುಖದಲ್ಲಿ ಮಂದಹಾಸ ಮೂಡಿದೆ ಎಂದರು.

Latest Videos
Follow Us:
Download App:
  • android
  • ios