Asianet Suvarna News Asianet Suvarna News

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ, ಸಾವಿರ ರೂಪಾಯಿ ದಂಡ!

ಮೈಸೂರಿನ ತಿಲಕ್‌ ನಗರದ 16ನೇ ಕ್ರಾಸ್‌ ಬಳಿಯ ವಲಯ ಕಚೇರಿ-6 ರ ಹಿಂಭಾಗ ಚೇತನ್‌ ಎಂಬ ವ್ಯಕ್ತಿ ನಿರ್ಭಿಡೆಯಿಂದ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆತನಿಗೆ ಪಾಲಿಕೆ 1 ಸಾವಿರ ದಂಡ ವಿಧಿಸಿದ್ದಲ್ಲದೇ, ಸೂಕ್ತ ಕ್ರಮಜರುಗಿಸುವಂತೆ ಮಂಡಿ ಪೊಲೀಸ್‌ ಠಾಣೆಗೆ ಕಳುಹಿಸಿದೆ.

mysuru Man charged with fine for urinating in public
Author
Bangalore, First Published Dec 12, 2019, 10:40 AM IST

ಮೈಸೂರು(ಡಿ.12): ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೊಬ್ಬನಿಗೆ ಮೈಸೂರು ಮಹಾನಗರ ಪಾಲಿಕೆ ಒಂದು ಸಾವಿರ ರು. ದಂಡ ಹಾಕಿದ್ದು, ಈ ವಿಷಯವನ್ನು ಪಾಲಿಕೆ ತನ್ನ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಸ್ವಚ್ಛ ನಗರಿ ಮೈಸೂರಿನಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಸಾರ್ವಜನಿಕರು ಅಲ್ಲಲ್ಲಿ ಮೂತ್ರ ವಿಸರ್ಜಿಸುವುದು ಸರ್ವೇ ಸಾಮಾನ್ಯವಾಗಿತ್ತು. ಇತ್ತೀಚೆಗೆ ತಿಲಕ್‌ ನಗರದ 16ನೇ ಕ್ರಾಸ್‌ ಬಳಿಯ ವಲಯ ಕಚೇರಿ-6 ರ ಹಿಂಭಾಗ ಚೇತನ್‌ ಎಂಬ ವ್ಯಕ್ತಿ ನಿರ್ಭಿಡೆಯಿಂದ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದರು.

'ಮುಂದಿನ ಚುನಾವಣೆ ಗೆಲ್ಲಲು ಪೌರತ್ವ ತಿದ್ದುಪಡಿ ತಂತ್ರ'..!

ಇದನ್ನು ಪ್ರಶ್ನಿಸಿದ ಮಹಿಳಾ ಆರೋಗ್ಯ ಇನ್‌ಸ್ಪೆಕ್ಟರ್‌ ಅವರೊಂದಿಗೂ ಚೇತನ್‌ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ಆತನಿಗೆ ಪಾಲಿಕೆ 1 ಸಾವಿರ ದಂಡ ವಿಧಿಸಿದ್ದಲ್ಲದೇ, ಸೂಕ್ತ ಕ್ರಮಜರುಗಿಸುವಂತೆ ಮಂಡಿ ಪೊಲೀಸ್‌ ಠಾಣೆಗೆ ಕಳುಹಿಸಿದೆ.

ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ, ಷರತ್ತುಗಳೇನೇನು..?

Follow Us:
Download App:
  • android
  • ios