ಜಾಲ್ಸೂರು[ಆ.23] : ಮೈಸೂರು ಶಾಸಕ ರಾಮದಾಸ್ ಅವರ ಕಾರು ಅಪಘಾತವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. 

 ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ರಾಮದಾಸ್ ಅವರು ತೆರಳುತ್ತಿದ್ದ ಕಾರು ಇಂದು ಬೆಳ್ಳಂಬೆಳಗ್ಗೆ ಜಾಲ್ಸೂರಿನ ಬಳಿ  ರಸ್ತೆ ಪಕ್ಕದ ಮೋರಿಗೆ ಡಿಕ್ಕಿ ಹೊಡೆದಿದೆ. 

ಕೆಲವೇ ಗಂಟೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ವರ್ಗ ಆದೇಶ ರದ್ದು

ಕಾರು ಚಾಲಕ ನಿದ್ರೆ ಮಂಪರಿನಲ್ಲಿ ಇದ್ದು, ಏಕಾಏಕಿ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಿದರಿಂದ ಕಾರಿನ ಮುಂದಿನ ಸೀಟಿನಲ್ಲಿಯೇ ಕುಳಿತಿದ್ದ ಶಾಸಕ ರಾಮದಾಸ್ ಅವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದೆ. 
 
ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ  ಇದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರ ದಿ. ಭಾಸ್ಕರ್ ಗೌಡರ ಪುತ್ರ ಆಶಿಕ್ ರಾಮದಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ನೆರವು ನೀಡಿದ್ದಾರೆ.