ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದ್ದು, ಮೈಸೂರು ಜಿಲ್ಲೆಯೂ ಕೋವಿಡ್‌ನಿಂದ ತತ್ತರಿಸಿದೆ. ಇದೇ ವೇಳೆ  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾಯಿಸಬೇಕು ಎಂದು ಆಗ್ರಹಿಸಲಾಗಿದೆ. 

ಭೇರ್ಯ (ಮೇ.04): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿ ಮೈಸೂರು ಜಿಲ್ಲೆಯ ಜನರ ಪ್ರಾಣವನ್ನು ಕಾಪಾಡಿ ಎಂದು ಸಾಲಿಗ್ರಾಮ ತಾಲೂಕು ಜೆಡಿಎಸ್‌ ಅಲ್ಪ ಸಂಖ್ಯಾತ ಮುಖಂಡ ಅಯಾಜ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಕಷ್ಟಮೈಸೂರು ಜಿಲ್ಲೆಯ ಜನರಿಗೆ ಬರಬಾರದು ಎಂದು ಎಚ್ಚೆತ್ತ ನಮ್ಮ ನಾಯಕ ಶಾಸಕ ಸಾ.ರಾ. ಮಹೇಶ್‌ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಂದೇ ಧ್ವನಿ ಎತ್ತಿದ್ದರು, ಆದರೆ ರಾಜಕಾರಣ ಮಾಡುವ ಬಿಜೆಪಿಯವರು ಇವರೇ ಇರಲಿ ಎಂದು ಹಠಕ್ಕೆ ಬಿದ್ದು, ಇಲ್ಲಿಯೇ ಇರಿಸಿಕೊಂಡಿದ್ದಾರೆ. ಅಲ್ಲದೇ ನ್ಯಾಯಾಲಯದ ಆದೇಶಕ್ಕೂ ಕೂಡ ಸರ್ಕಾರ ಮನ್ನಣೆ ನೀಡಿಲ್ಲ, ಜನರು ಶಾಪ ಹಾಕುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ಜನರಿಗೆ ಚಾಮರಾಜನಗರ ಜಿಲ್ಲೆಯ ಸ್ಥಿತಿ ಬರಬಾರದಂತೆ ಮುನ್ನೆಚ್ಚರಿಕೆಯಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸರ್ಕಾರ ಈ ಕೂಡಲೇ ಮಾಡಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೋಲ್ ಮಾಡೆಲ್ ಬೇಕು - ಮಾಡೆಲ್ ಅಲ್ಲ : ರೋಹಿಣಿ ವಿರುದ್ಧ ಮತ್ತೆ ಸಾ ರಾ ಗರಂ'

ಕೋವಿಡ್‌ ಸೋಂಕು ತಗುಲಿ ಜಿಲ್ಲೆಯ ಜನ ಸಾಯುತ್ತಿದ್ದಾರೆ, ಈ ಬಗ್ಗೆ ನಮ್ಮ ಶಾಸಕರು ಡಿಸಿ ಅವರ ಧೋರಣೆ, ಧಿಮಾಕಿನ ಬಗ್ಗೆ ಆರೋಪ ಮಾಡಿದರೇ ಹೊರತು, ಬೇರೆ ಯಾವೊಬ್ಬ ಶಾಸಕರು ಸಹ ಚಕಾರವೆತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ನಮ್ಮ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್‌ ಅವರೇ ತಮ್ಮ ಸ್ವಂತ ಹಣದಲ್ಲಿ ಸಾ.ರಾ. ಸ್ನೇಹ ಬಳಗದೊಂದಿಗೆ ಕೋವಿಡ್‌ ಆಸ್ಪತ್ರೆ ಪ್ರಾರಂಭಿಸಿದ್ದಾರೆ, ಅಲ್ಲದೆ ತಾಲೂಕಿನಿಂದ ಕೋವಿಡ್‌ ಸೋಂಕು ತಗುಲಿದವರನ್ನು ಕರೆದು ಕೊಂಡು ಬರಲು ಉಚಿತವಾಗಿ ಅಂಬ್ಯುಲೆನ್ಸ್‌ ಕೂಡ ಬಿಟ್ಟಿದ್ದಾರೆ, ಇದು ಕ್ಷೇತ್ರದ ಜನರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಅಭಿಮಾನ ಎಂದು ಅವರು ಹೇಳಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ ಡಿಸಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲೆಯಿಂದ ಓಡಿಸಿ ಮೈಸೂರಿಗೆ ಉತ್ತಮ ಡಿಸಿ ಬರಲಿ ಎಂದು ಒತ್ತಾಯಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona