ತ್ರಿಬಲ್ ಆ್ಯಕ್ಟಿಂಗ್ ನಯವಂಚಕಿ ಕೊನೆಗೂ ಅಂದರ್| ಮ್ಯಾಟ್ರಿಮೋನಿಯಲ್ಲಿ ಐಪಿಎಸ್ ಪ್ರೋಫೈಲ್ ಹಾಕಿ ಯಾಮಾರಿಸುತ್ತಿದ್ದ ಮಹಿಳೆ| ಮದುವೆ ಆಗುವುದಾಗಿ ಹೇಳಿ ಹುಡುಗರಿಗೆ ಗಾಳ ಹಾಕಿ ಹಣ ಪೀಕ್ತಿದ್ದ ಲೇಡಿ|ಹೆಚ್.ಡಿ.ಕೋಟೆ ನಿವಾಸಿ ಲೋಕೇಶ್ ಎಂಬ ಯುವಕನ ಮದುವೆಯಗೋದಗಿ ವಂಚನೆ

ಮೈಸೂರು, [ಜೂ.19]: ತಾನು ಪ್ರೊಬೇಷನರಿ ಐಪಿಎಸ್‌ ಅಧಿಕಾರಿಯೆಂದು ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಹುಡುಗರಿಗೆ ಗಾಳ ಹಾಕಿ ಹಣ ಪೀಕುತ್ತಿದ್ದ ಯುವತಿಯೊಬ್ಬಳನ್ನು ಹುಣಸೂರುಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. 

ಹುಣಸೂರು ನಗರದ ಕಲ್ಕುಣಿಕೆ ಬಡಾವಣೆಯ ನಿವಾಸಿ ಲಾವಣ್ಯಭಾನು ಅಲಿಯಾಸ್ ದಿವ್ಯ ಬಂಧಿತ ಆರೋಪಿ. ಈಕೆ ಬಿಎ ಪದವಿ ವ್ಯಾಸಂಗ ಮಾಡಿದ್ದು, ಮ್ಯಲ್ಲಿ ಐಪಿಎಸ್ ಪ್ರೋಫೈಲ್ ಹಾಕಿ ಹುಡುಗರಿಗೆ ಯಾಮಾರಿಸುವುದೇ ಈಕೆಯ ಕೆಲಸ. 

ಕೋಲ್ಕತ್ತಾದಲ್ಲಿ ಭಾರತೀಯ ನೌಕಾದಳದಲ್ಲಿಸೇವೆ ಸಲ್ಲಿಸುತ್ತಿರುವ ಎಚ್‌.ಡಿ.ಕೋಟೆ ತಾಲೂಕಿನ ಹೆಬ್ಬನಕುಪ್ಪೆ ಗ್ರಾಮದ ಲೋಕೇಶ್‌ ಎನ್ನುವರನ್ನು ಮ್ಯಾಟ್ರಿಮೋನಿಯಲ್ಲಿ ಬಲೆಗೆ ಕೆಡವಿಕೊಂಡಿದ್ದ ಈಕೆ ಮದುವೆಯಾಗುದಾಗಿ ಹೇಳಿದ್ದಾಳೆ.

ಇದನ್ನು ನಂಬಿದ್ದ ಲೋಕೇಶ್‌ನನ್ನು ಬಲೆಗೆ ಕೆಡವಿ ದುಂಬಾಲು ಬಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಬಳಿಕ 13 ಲಕ್ಷ ಹಣಕ್ಕಾಗಿ ಪದೇ ಪದೇ ಡಿಮಾಂಡ್ ಮಾಡಿದ್ದಾಳೆ. ಇದರಿಂದ ಲೊಕೇಶ್ ಕುಟುಂಬಸ್ಥರಿಗೆ ಈಕೆ ನಡವಳಿಕೆ ಬಗ್ಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ.

 ಸತ್ಯ ಬಯಲಾಗುತಿದ್ದಂತೆ ಆತ್ಮಹತ್ಯೆ ನಾಟಕ ಮಾಡಿದ್ದಳು. ಈ ಬಗ್ಗೆ ಲೋಕೇಶ್ ಅಣ್ಣನಾದ ವೆಂಕಟೇಶ್ ಹುಣಸುರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೀಳಿದ ಪೊಲೀಸರು ಲಾವಣ್ಯ ತ್ರಿಬಲ್ ಆ್ಯಕ್ಟಿಂಗ್ ಕತೆ ಬಟಾಬಯಲು ಮಾಡಿದ್ದಾರೆ.