Asianet Suvarna News Asianet Suvarna News

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ಇದು : ಹಿಂಗ್ ಮಾಡಿ ಎಂದರು

ಮೈಸೂರು ಜಿಲ್ಲಾಧಿಕಾರಿ  ರೋಹಿಣಿ ಸಿಂಧೂರಿ ಸಲಹೆಯೊಂದನ್ನು ನೀಡಿದ್ದಾರೆ. ಹೀಗೆ ಮಾಡಿ ಎಂದು ಹೇಳಿದ್ದಾರೆ. 

Mysuru DC Rohini sindhuri Suggest About Food style snr
Author
Bengaluru, First Published Dec 19, 2020, 11:17 AM IST

ಮೈಸೂರು (ಡಿ.19):  ಮಕ್ಕಳಿಗೆ ಆಹಾರವೇ ಔಷಧ. ಮಕ್ಕಳ ಆರೋಗ್ಯ ವೃದ್ದಿಸಲು ಅವರಿಗೆ ಆಹಾರದ ಮಹತ್ವವನ್ನು ತಿಳಿಸಿ, ಜೊತೆಗೆ ಹಣ್ಣು ಮತ್ತು ತರಕಾರಿ ಸೇವಿಸುವಂತೆ  ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಜಿಪಂ ಮತ್ತು ಆಯುಷ್‌ ಇಲಾಖೆಯ ವತಿಯಿಂದ 2020-21ನೇ ಸಾಲಿನ ಎಸ್‌ಸಿಪಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಗೆ ಆಹಾರ ಪದ್ಧತಿಯಲ್ಲಿ ಪೌಷ್ಟಿಕ ಆಹಾರಗಳ ಅಳವಡಿಕೆ ಕುರಿತು ಆಯೋಜಿಸಿದ್ದ ತರಬೇತಿ ಉದ್ಘಾಟಿಸಿ ಅವರು ಮಾತಾನಾಡಿದರು.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ...

ವಿದ್ಯಾರ್ಥಿ ನಿಲಯದ ವಾರ್ಡ್‌ನ್‌ಗಳು ಮೊದಲು ತಮ್ಮ ಮನೆಗಳಲ್ಲಿ ಪೌಷ್ಟಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ತಮ್ಮ ಹಾಗೂ ವಿದ್ಯಾರ್ಥಿ ನಿಲಯದ ಮಕ್ಕಳ ಆರೋಗ್ಯ ವೃದ್ಧಿಸುವಲ್ಲಿ ಕಾಳಜಿವಹಿಸಬೇಕು ಎಂದು ಹೇಳಿದರು.

ಈ ತರಬೇತಿಯಲ್ಲಿ ಪ.ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ, ಪ್ರಭಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಮುನಿರಾಜು, ಡಾ. ವಿನಯ ಹಾಗೂ ಆಯುಷ್‌ ಇಲಾಖೆಯ ಡಾ. ಸೀತಾಲಕ್ಷ್ಮಿ ಇದ್ದರು.

Follow Us:
Download App:
  • android
  • ios