ಮೈಸೂರು : ಇನ್ನೂ ನಿಂತಿಲ್ಲ ಕೊರೋನಾ-ಎಚ್ಚರ!
- ಮೈಸೂರಿನಲ್ಲಿ ಅತಿ ಹೆಚ್ಚು ದಾಖಲಾಗಿದ್ದ ಕೊರೋನಾ ಕೇಸುಗಳು
- ಕೊರೋನಾ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ -ಡೀಸಿ
- ಜನರು ಆದಷ್ಟು ಸೂಕ್ತ ಎಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಗತ್ಯ
ಮೈಸೂರು (ಜು.14): ಮೈಸೂರಿನಲ್ಲಿ ಕೊರೋನಾ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಆದ್ದರಿಂದ ಜನರು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.
ಕುವೆಂಪುನಗರ ಜೋಡಿ ಬಸವ ರಸ್ತೆಯ ವಾಯು ವಿಹಾರಿಗಳ ಸಂಘ ಹಾಗೂ ಸುಂದರ ಬಳಗವು ಮಂಗಳವಾರ ಚಿಕ್ಕಮ್ಮಾನಿಕೇತನ ಕ್ಲಯಾಣ ಮಮಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್‌ಗಳಿಗೆ ಸನ್ಮಾನ ಮಾಡಿದರು.
ಕೊರೋನಾ 2ನೇ ಅಲೆ ಹೋಗಿಲ್ಲ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್
ಮೈಸೂರಿನಲ್ಲಿ ಇನ್ನೂ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಕೊರೋನಾ ವಾರಿಯರ್ಗಳಾದ ವೈದ್ಯರು ಶುಶ್ರೂಷಕರು ಮತ್ತಿತರರಿಗೂ ಕೋವಿಡ್ ತಗುಲಿದೆ. ಅವರ ಕುಟುಂಬಕ್ಕೂ ತಗುಲಿದೆ.ಇಷ್ಟಾದರೂ ಎದೆಗುಂದದೆ ಸೇವೆ ಸಲ್ಲಿಸಿದ್ದಾರೆ.
ಸದ್ಯ ಮೈಸೂರಿನಲ್ಲಿ 1,70,151 ಕೇಸ್‌ಗಳು ಪತ್ತೆಯಾಗಿದ್ದು 2250 ಮಂದಿ ಸಾವಿಗೀಡಾಗಿದ್ದಾರೆ. 1,65,204 ಮಂದಿ ಚೇತರಿಸಿಕೊಂಡಿದ್ದಾರೆ.